Saturday, June 15, 2024
spot_img
More

  Latest Posts

  ಆಪ್ತನ ಸಹೋದರನ ಅಂತಿಮಯಾತ್ರೆಗೆ ಹೆಗಲುಕೊಟ್ಟ ವಿಧಾನಸಭಾ ಸ್ಪೀಕರ್ ಖಾದರ್

  ಉಳ್ಳಾಲ: ತನ್ನ ಆಪ್ತನ ಸಹೋದರನ ಅಂತಿಮಯಾತ್ರೆಯಲ್ಲಿ ಭಾಗವಹಿಸಿ ಶವಯಾತ್ರೆಯ ವೇಳೆ ಹೆಗಲುಕೊಟ್ಟು ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಮಾನವೀಯತೆ ಮೆರೆದಿದ್ದಾರೆ.

  ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಅವರ ಸಹೋದರ ಶರತ್ ಕಾಜವ (55) ಅಕಾಲಿಕವಾಗಿ ಭಾನುವಾರ ಮರಣಹೊಂದಿದ್ದರು. ಮಾಹಿತಿ ತಿಳಿಯುತ್ತಿದ್ದಂತೆಯೇ ಯು.ಟಿ ಖಾದರ್ ಅವರು ಪೂರ್ವನಿಗದಿ ಪಡಿಸಿದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಿ ತಕ್ಷಣವೇ ಮಿತ್ತಕೋಡಿಯ ಕಾಜವ ಅವರ‌ ಮನೆಗೆ ಧಾವಿಸಿದರು. ಸಂಬಂಧಿಕರಲ್ಲಿ ಧೈರ್ಯ ತುಂಬಿದ ಅವರು ನಂತರ ನಡೆದ ಅಂತಿಮಯಾತ್ರೆಗೆ ಹೆಗಲುಕೊಟ್ಟರು.

  ನರಿಂಗಾನ ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಪ್ರಶಾಂತ್ ಕಾಜವ ಸಹೋದರರಾಗಿದ್ದ ಶರತ್ ಕಾಜಾವ, ಪ್ರಗತಿಪರ ಕೃಷಿಕ ವೆಂಕಪ್ಪ ಕಾಜವರ ಪುತ್ರ. ಕಂಬಳ ಸಮಿತಿಯ ಸದಸ್ಯರೂ ಆಗಿದ್ದ ಅವರು ಮಿತ್ತಕೋಡಿ ಕಂಬಳದ ಯಶಸ್ಸಿಗಾಗಿ ಹಲವು ವಾರಗಳ ಕಾಲ ದುಡಿದಿದ್ದರು. ವಿಧಾನಸಭಾಧ್ಯಕ್ಷರಾದ ಖಾದರ್ ತನ್ನ ಎಲ್ಲಾ ಕೆಲಸಗಳನ್ನು ಬಿಟ್ಟು ಆಪ್ತನ ಸಹೋದರ ಅಂತಿಮ ಕಾರ್ಯದಲ್ಲಿ ಭಾಗವಹಿಸಿದ್ದಾರೆ.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss