Saturday, July 20, 2024
spot_img
More

    Latest Posts

    ನ.18ರಂದು ಉದಯ ರವಿ.ಕೆ ಯವರಿಗೆ ಸಂಘಟನೆ ಕ್ಷೇತ್ರ ಚಾಣಕ್ಯ ಬಿರುದು ಪ್ರದಾನ

    ಗುರುಕುಲ ಕಲಾಪ್ರತಿಷ್ಠಾನ (ರಿ) ಕೇಂದ್ರ ಸಮಿತಿ – ತುಮಕೂರು ಅಖಿಲ ಭಾರತ 3ನೇ ಗುರುಕುಲ ಕಲಾ ಸಮ್ಮೇಲನ ವಿಜಯನಗರ 2023 ಕಾರ್ಯಕ್ರಮ ಸಂಘಟನೆ ಕ್ಷೇತ್ರ ಚಾಣಕ್ಯ ಬಿರುದು ಪ್ರದಾನ ನವೆಂಬರ್‌ 18ರಂದು ವಿಜಯನಗರ ಜಿಲ್ಲೆಯ ಹೇಮಕೂಟ ಶೂನ್ಯ ಸಿಂಹಾಸನ ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠ ಹಂಪಿ ವಿರೂಪಾಕ್ಷ ದೇವಾಲಯ ಸಮೀಪ ನಡೆಯಲಿದೆ. ಉದಯ ರವಿ ಕೆ ಯವರಿಗೆ ಸಂಘಟನೆ ಕ್ಷೇತ್ರ ಚಾಣಕ್ಯ ಬಿರುದು ಪ್ರದಾನ ನೀಡಿ ಗೌರವಿಸಲಾಗುವುದು.

    ಕಿರು ಪರಿಚಯ
    ಕಾಸರಗೋಡು ಜಿಲ್ಲೆಯ ಬದಿಯಡ್ಕ ಗ್ರಾಮದ ಮೇಗಿನ ಕಡಾರ್ ದಿ. ಗೋಪಾಲಕೃಷ್ಣ ಶೆಟ್ಟಿ (ಪೋಲೀಸ್ ಸಬ್
    ಇನ್ಸ್‌ಪೆಕ್ಟರ್ ಮತ್ತು ಲಲಿತಾ ಶೆಟ್ಟಿ ದಂಪತಿಯ ಪ್ರಥಮ ಪತ್ರರಾದ ಶ್ರೀಯುತ ಉದಯ ರವಿ ಕೆ (ಯು.ಆರ್. ಶೆಟ್ಟಿ)
    ದ್ವಿತೀಯ ದರ್ಜೆ ಸಹಾಯಕರು, ಸರ್ಕಾರಿ ಪ್ರೌಢಶಾಲೆ – ಹೊಗೆ ಬಜಾರ್, ಮಂಗಳೂg ಇವರು ಸಾರ್ವಜನಿಕ ಶಿಕ್ಷಣ
    ಇಲಾಖೆಯಲ್ಲಿ 23 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದು, ಶಾಲಾ ಕಛೇರಿ, ಪಠ್ಯಪುಸ್ತಕ ಸರ್ವ ಶಿಕ್ಷಣ ಅಭಿಯಾನ
    ಬಿಇಒ ಕಛೇರಿ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಬಿ.ಆರ್.ಸಿ. ಪ್ರಸ್ತುತ ದ.ಕ. ಜಿಲ್ಲಾ ಪಂಚಾಯತ್ ಈ
    ಸ್ಥಳದಳಲ್ಲಿ ಸೇವೆ ಸಲ್ಲಿಸಿರುತ್ತಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಸರ್ವ ಶಿಕ್ಷಣ ಅಭಿಯಾನದ ಹಲವಾರು
    ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿರುತ್ತಾರೆ. ಹಾಗೂ ಇವರ ಶಾಲೆಯ ಕಛೇರಿಯಲ್ಲಿ ಉತ್ತಮವಾಗಿ
    ಸಮಯಕ್ಕನುಗುಣವಾಗಿ ಕೆಲಸವನ್ನು ಮಾಡುತ್ತಿದ್ದಾರೆ.

    ಇವರು ಶಾಳೆಯಿಂದ ಹೊರಗುಳಿದ ಹಾಗೂ ಶಾಲೆ ಬಿಟ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವ, ಶೈಕ್ಷಣಿಕ ಜಾಗ್ರತೆ ಇತ್ಯಾದಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುತ್ತಾರೆ. ಇಲಾಖೆಯಿಂದ ಏರ್ಪಡಿಸಲ್ಪಟ್ಟ ಕಲಾ ಜಾಥಾ ಮತ್ತು ಕ್ರೀಡಾಕೂಟ ಹಾಗೂ ವಿಶೇಷ ಮಕ್ಕಳ ವೈದ್ಯಕೀಯ ತಪಾಸಣೆ ಮುಂತಾದ ಇಲಾಖೆ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾರೆ. ಹಾಗೂ ಬೀದಿ ನಾಟಕಗಳ ಮೂಲಕ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಲೂ ಸಹ ಶ್ರಮಿಸಿರುತ್ತಾರೆ. ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿಯೂ ಭಾಗಿಯಾಗಿರುತ್ತಾರೆ. ಪ್ರಸ್ತುತ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕಲಾ ಮತ್ತು ಸಾಂಸ್ಕೃತಿಕ ಸಂಘ (ರಿ) ಬೆಂಗಳೂರು, ಅನೇಕ ರೋಗಿಗಳಿಗೆ ತುರ್ತು ಸಂದರ್ಭದಲ್ಲಿ ರಕ್ತದಾನವನ್ನು ಮಾಡಿದ್ದು, ಅಷ್ಟೇ ಅಲ್ಲದೇ ಅನೇಕ ರಕ್ತದಾನ ಶಿಬಿರವನ್ನು ಏರ್ಪಡಿಸಿ ಜನ ಮನ್ನಣೆ ಗಳಿಸಿರುತ್ತಾರೆ. ಮಹಿಳಾ ಮತ್ತು ಮಕ್ಕಳ ಸಬಲೀಕರಣದ ನಿಟ್ಟಿನಲ್ಲಿ ಜಾಥಾ ಮತ್ತು ಬೀದಿ ನಾಟಕ ಅಯೋಜಿಸಿರುತ್ತಾರೆ. ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರ ನೌಕರರ ನಾಟಕ ಸ್ವರ್ಧೆಯಲ್ಲಿ ಸತತವಾಗಿ ಐದು ಬಾರಿ ಆಯ್ಕೆಯಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಹೆಮ್ಮೆ ತಂದಿರುತ್ತಾರೆ. ನಂತರದ ದಿನಗಳಲ್ಲಿ ಇಲಾಖೆಯ ಕಾರ್ಯಕ್ರಮಗಳಲ್ಲಿ ಇನ್ನೂ ಸಕ್ರಿಯವಾಗಿ ಭಾಗವಹಿಸಿದ್ದು, 2009-10 ರಲ್ಲಿ ಜೆಸಿಐ ಮಂಗಳೂರು ಸಿಟಿ ಅಧ್ಯಕ್ಷರಾಗಿರುತ್ತಾರೆ. ಗೋಲ್ಡನ್ ವಿನ್ನರ್ ಪ್ರೆಸಿಡೆಂಟ್ ಅವರ್ಡ್‌ಗೆ ಪಾತ್ರರಾಗಿರುತ್ತಾರೆ. 2019-20 ನೇ ಸಾಲಿನ ಕೋವಿಡ್19ರ ತುರ್ತು ಪರಿಸ್ಥಿತಿಯಲ್ಲಿ ಪ್ಲಾಸ್ಮಾ ದಾನ ಮಾಡಿರುತ್ತಾರೆ. ದಿನಾಂಕ: 20-11-2020 ರಂದು ಕನ್ನಡ ರಾಜ್ಯೋತ್ಸವ ಪ್ರಯುಕ್ತ ಜರಗಿದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಚಂದನ ಸಾಹಿತ್ಯ ವೇದಿಕೆ ಸುಳ್ಯ ಇವರ ಚಂದನ ರಾಜ್ಯೋತ್ಸವ ಪ್ರಶಸ್ತಿನೀಡಿ ಗೌರವಿಸಿರುತ್ತಾರೆ.
    ಕೋವಿಡ್-19 ಸಂದರ್ಭದಲಿ ಸಾರ್ವಜನಿಕರಿಗೆ ತಿಳುವಳಿಕೆ ನೀಡುವ ಜಾಥಾ ಕಾರ್ಯಕ್ರಮವನ್ನು ಅಯೋಜಿಸಿರುತ್ತಾರೆ. ಜೆಸಿಐ ಮಂಗಳಾ ಗಂಗೋತ್ರಿ ಕೊಣಾಜೆ, ಜೆಸಿಐ ವೀಕ್ ಕಾರ್ಯಕ್ರಮದಲ್ಲಿ ಕೋವಿಡ್-19 ಸಂದರ್ಭದಲ್ಲಿ ಪ್ಲಾಸ್ಮಾ ನೀಡಿದ್ದಕ್ಕೆ ಕೊರೊನಾ ವಾರಿಯರ್ ಎಂದು ಬಿರುದು ನೀಡಿ ಗೌರವಿಸಿರುತ್ತಾರೆ.

    ದೇಶದ ಅತ್ಯುತ್ತಮ ಸ್ಥಾನದಲ್ಲಿರುವ Indian Army ವತಿಯಿಂದ ದಿನಾಂಕ: 15 /02/2021 ರಂದು ಬೆಂಗಳೂರಿನಲ್ಲಿ ಜರಗಿದ Army Day Celebrations 2020-21 ರಲ್ಲಿ ಇವರನ್ನು ಸನ್ಮಾ ನ ಮಾಡಿಗೌರವಿಸಿರುತ್ತಾರೆ. 17.03 .2022 ರಂದು ಬೆಳಗಾಂನಲ್ಲಿ ವಿಶ್ವ ನಾಟಕ ದಿನಾಚರಣೆ ಅಂಗವಾಗಿ ನಾಡಿನ ಸಾಮಾಜಿಕ ಪತ್ರಿಕೆ ವತಿಯಿಂದ ಕಲಾರತ್ನ ಬಿರುದು ನೀಡಿ ಸನ್ಮಾನಿಸಲಾಗಿದೆ. ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ 2022 ದಿನಾಂಕ: 11-09-2022ರಂದು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸೇವೆಗೈದಕ್ಕೆ ಸಾಧಕ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ . ಗುರುಕುಲ ಕಲಾಪ್ರತಿಷ್ಠಾನ ಕೇಂದ್ರ (ರಿ) ತುಮಕೂರು ಇವರ ದ್ವಿತೀಯ ಸಮ್ಮೇಳನದಲ್ಲಿ ನಡೆದ ಕಾರ್ಯಕ್ರಮದಲ್ಲಿ (ರಂಗಭೂಮಿ) ಗುರುಕುಲ ಕಲಾಶ್ರೀ ರತ್ನ ಪಶಸ್ತಿ ನೀಡಿ ಗೌರವಿಸಲಾಯಿತು. ದಿನಾಂಕ:20 .08.202 ರಂದು ದಿ. ಸೌತ್ ಕೆನರಾ Govt ಆಫೀಸರ್ ಕೋ-ಅಪರೇಟಿವ್ ಸೊಸೈಟಿ ಇದರ 102 ನೇ ಬ್ಯಾಂಕಿನ ವಾರ್ಷಿಕೋತ್ಸವದ ಶುಭ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವುದಕ್ಕೆ ಗೌರವಿಸಿ ಸನ್ಮಾನ ನೀಡಿದ್ದಾರೆ. ಸಾಮಾಜಿಕ ಕಾರ್ಯಕ್ರಮದಿಂದ ವಿವಿಧ ಸಂಸ್ಥೆಗಳಿಂದ ಸನ್ಮಾನಿಸಿ ಪ್ರಶಸ್ತಿ ನೀಡಿ ಗೌರವಿಸಿರುತ್ತಾರೆ.
    ಇವರು ಪತ್ನಿ ತಾರಾ ಯು. ಶೆಟ್ಟಿ ಮಕ್ಕಳಾದ ಮಹಾಲಕ್ಷ್ಮಿ ಯು. ಶೆಟ್ಟಿ, ನಿಖಿಲ್ ಯು. ಶೆಟ್ಟಿ ಇವರೊಂದಿಗೆ
    ಕುಟುಂಬ ಸಮೇತರಾಗಿ ತಾಳಿಪಾಡಿ ಹೌಸ್, ಕಿನ್ನಿಗೋಳಿ, ಮಂಗಳೂರಿನಲ್ಲಿ ವಾಸ್ತವ್ಯವನ್ನು ಹೊಂದಿರುತ್ತಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss