ಮಂಗಳೂರು: ಪಡಿತರ ಚೀಟಿ ತಿದ್ದುಪಡಿಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಜಿಲ್ಲಾವಾರು ಬದಲಾವಣೆ ಮಾಡಿ ಆಹಾರ ಇಲಾಖೆ ಆದೇಶಿಸಿದೆ. ದಕ್ಷಿಣ ಕನ್ನಡ, ಉಡುಪಿ, ಕೊಡಗು, ಉತ್ತರ ಕನ್ನಡ ಸಹಿತ ವಿವಿಧ ಜಿಲ್ಲೆಗಳಲ್ಲಿ ಸೆ. 12ರಿಂದ ಸೆ. 14ರ ವರೆಗೆ ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ಅವಕಾಶ ಕಲ್ಪಿಸಲಾಗಿದೆ. ಈ ಮೊದಲು ಸೆ 1ರಿಂದ ಸೆ. 10ರ ವರೆಗೆ ಪಡಿತರ ಚೀಟಿ ತಿದ್ದುಪಡಿಗೆ ನಿಗದಿಪಡಿಸಿದ್ದ ಆದೇಶವನ್ನು ಇಲಾಖೆ ಹಿಂಪಡೆದಿದೆ. ಪಡಿತರ ಚೀಟಿ ತಿದ್ದುಪಡಿಗೆ ಭರಪೂರ ಅರ್ಜಿ ಸಲ್ಲಿಕೆಯಾಗುತ್ತಿರುವ ಕಾರಣದಿಂದ ಆಹಾರ ಇಲಾಖೆಯ ಸರ್ವರ್ ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಕೆಲವುಕಡೆ ಒಂದು ಗಂಟೆಯಲ್ಲಿ ಸುಮಾರು 500ಕ್ಕೂ ಅಧಿಕ ಅರ್ಜಿ ಸಲ್ಲಿಕೆಯಾಗುತ್ತಿರುವ ಕಾರಣದಿಂದ ಸರ್ವ ಸಮಸ್ಯೆ ಎದುರಾಗಿತ್ತು. ಇದರಿಂದಾಗಿ ಜನರು ಪಡಿತರ ಚೀಟಿ ತಿದ್ದುಪಡಿಗೆ ವಿವಿಧ ಕೇಂದ್ರಗಳನ್ನು ಸಂಪರ್ಕಿಸಿದರೂ ತಿದ್ದುಪಡಿ ಆಗುತ್ತಿರಲಿಲ್ಲ. ಸಮಸ್ಯೆಯನ್ನು ಗಮನಿಸಿದ ಆಹಾರ ಇಲಾಖೆ ಸರ್ವರ್ ನಿಭಾಯಿಸಲು ಇದೀಗ ಜಿಲ್ಲಾವಾರು ದಿನಾಂಕವನ್ನು ನಿಗದಿಪಡಿಸಿದೆ.
©2021 Tulunada Surya | Developed by CuriousLabs