ಸುರತ್ಕಲ್: ಮಂಗಳೂರಿನ “ರಂಗ ಚಾವಡಿ” ಆಶ್ರಯದಲ್ಲಿ ಸುರತ್ಕಲ್ ಸುಭಾಷಿತ ನಗರ ರೆಸಿಡೆನ್ಸ್ ವೆಲ್ಫೇರ್ ಅಸೋಸಿಯೇಶನ್ ಸಹಯೋಗದೊಂದಿಗೆ ರಂಗ ಚಾವಡಿ ವರ್ಷದ ಹಬ್ಬ ಮತ್ತು ರಂಗ ಚಾವಡಿ ಪ್ರಶಸ್ತಿ ಪ್ರದಾನ ಸಮಾರಂಭ ಸುರತ್ಕಲ್ ಬಂಟರ ಭವನದಲ್ಲಿ ನಡೆಯಿತು. ಖ್ಯಾತ ರಂಗಕರ್ಮಿ, ನಾಟಕ ರಚನೆಕಾರ ಹಾಗೂ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಅವರನ್ನು ಪತ್ನಿ ಸಹಿತ ವೇದಿಕೆಯಲ್ಲಿ ಅತಿಥಿ ಗಣ್ಯರು ಸನ್ಮಾನಿಸಿ “ರಂಗ ಚಾವಡಿ-2023” ಪ್ರಶಸ್ತಿ ಪ್ರದಾನ ಮಾಡಿದರು.
©2021 Tulunada Surya | Developed by CuriousLabs