ಬೆಂಗಳೂರು: ರಿಲಾಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿಯ ಸೊಸೆಯಾಗಲಿರುವ ರಾಧಿಕಾ ಮರ್ಚೆಂಟ್ ಇತ್ತೀಚಿಗೆ ಭಾರೀ ಸುದ್ದಿಯಲ್ಲಿದ್ದಾರೆ.
ಅಂಬಾನಿ ಮನೆತನದ ಸೊಸೆಯಾಗಲಿದ್ದಾರೆ ಎಂಬ ಕಾರಣಕ್ಕಾಗಿಯೇ ರಾಧಿಕಾ ಮರ್ಚೆಂಟ್ ಹೆಚ್ಚು ಮನೆಮಾತಾಗಿದ್ದಾರೆ.

ಅಂದಹಾಗೆ ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ಅವರ ಸಂಬಂಧದ ವದಂತಿಗಳು ಮೊದಲು ಹುಟ್ಟಿಕೊಂಡಿದ್ದು ಸಾಮಾಜಿಕ ಜಾಲತಾಣಗಳಿಂದ. ಅವರ ಒಂದೆರಡು ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಅವರು ಯಾವುದೇ ಅಧಿಕೃತ ಹೇಳಿಕೆ ನೀಡದಿದ್ದರೂ ರಾಧಿಕಾ ಹಾಗೂ ಅನಂತ್ ಅಂಬಾನಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ ಎಂಬ ಬಗ್ಗೆ ಆಗಾಗ ಸುದ್ದಿಯಲ್ಲಿದ್ದು, ಸದ್ಯದಲ್ಲೇ ಅಂಬಾನಿ ಮನೆತನದ ಸೊಸೆಯಾಗಲಿದ್ದಾರೆ ರಾಧಿಕಾ ಮರ್ಚೆಂಟ್ ಎಂದು ತಿಳಿದು ಬಂದಿದೆ.
