Thursday, May 30, 2024
spot_img
More

  Latest Posts

  ಉಡುಪಿ: ಶಾಂತಿಯುತವಾಗಿ ಯಶಸ್ವಿಯಾಗಿ ನಡೆದ ತುಳುನಾಡ ರಕ್ಷಣಾ ವೇದಿಕೆ ವೈದ್ಯರ ಘಟಕದ ಪ್ರತಿಭಟನಾ ಸಭೆ

  ಉಡುಪಿ: ರಾಜ್ಯ ಆಯುರ್ವೇದ ವೈದ್ಯರುಗಳ ಬಹುದಿನಗಳ ಬೇಡಿಕೆಯಾದ ಪ್ರಾಥಮಿಕ ಹಂತದ ಚಿಕಿತ್ಸೆಯಲ್ಲಿ ನಮ್ಮ ಮೂಲ ಪದ್ಧತಿಯೊಂದಿಗೆ ಅವಶ್ಯಕ ಅಲೋಪತಿ ಔಷಧಗಳನ್ನು ಬಳಕೆ ಮಾಡಲು ಕಾನೂನಿನ್ವಯ ರಾಜ್ಯದಲ್ಲೂ ಕೂಡ ಕಾಯ್ದೆಗೆ ತಿದ್ದುಪಡಿ ತರಬೇಕೆಂದು ಒತ್ತಾಯಿಸಿ ಇಂದು ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ವೈದ್ಯರ ಘಟಕ ವತಿಯಿಂದ ಮಣಿಪಾಲ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಬಳಿ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅದ್ಯಕ್ಷರಾದ ಯೋಗಿಶ್ ಶೆಟ್ಟಿ ಜಪ್ಪು ರವರ ನೇತೃತ್ವದಲ್ಲಿ ಪ್ರತಿಭಟನಾ ಸಭೆ ನಡೆಯಿತು.

  ಶಾಂತಿಯುತವಾಗಿ ನಡೆದ ಪ್ರತಿಭಟನೆಯಲ್ಲಿ ಯೋಗಿಶ್ ಶೆಟ್ಟಿ ಜಪ್ಪು ಮಾತಾನಾಡಿ ವೈದ್ಯರಗಳು ತಮ್ಮ ತಮ್ಮ ವೃತ್ತಿ ಬಿಟ್ಟು ರಸ್ತೆಗಿಳಿದು ಹೋರಾಟ ಮಾಡುವಂತಹ ಅನಿವಾರ್ಯ ಪರಿಸ್ಥಿತಿ ಒದಗಿ ಬಂದಿದ್ದು ಬೇಸರ ತಂದಿದೆ. ಈ ಘಟನೆ ಮರಕಳಿಸಿದ ಬಾರದು ಇದು ಸರ್ಕಾರದ ವೈಪಲ್ಯ ಎತ್ತಿ ತೋರಿಸುತ್ತದೆ ಹಾಗೂ ಎಲ್ಲಾ ನೊಂದ ವೈದ್ಯರಗಳ ಪರ ತುಳುನಾಡ ರಕ್ಷಣಾ ವೇದಿಕೆ ಪ್ರತಿಭಟಿಸಲು ಸದಾ ಸಿದ್ಧ ಎಂದರು.

  ಇನ್ನು ಹಲವಾರು ವೈದ್ಯರಗಳು ತಮ್ಮ ತಮ್ಮ ಆಕ್ರೋಶ ಹಾಗೂ ಬೇಸರ ವ್ಯತ್ತಪಡಿಸದರು.

  ಆಯುರ್ವೇದ ಚಿಕಿತ್ಸೆಯು ಅತ್ಯಂತ ಪುರಾತನ ಆರೋಗ್ಯ ಸಂರಕ್ಷಣೆಯ ವ್ಯವಸ್ಥೆಯಾಗಿದ್ದು ಔಷಧ ಮತ್ತು ತತ್ವಶಾಸ್ತ್ರ ಎರಡರ ಸಂಮಿಶ್ರಣವಾಗಿದೆ. ಇದು ಮಾನವನ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಯತ್ತಾ ಮುನ್ನೆಡಿಸುತ್ತದೆ. ಕೊರೋನಾ ಸಂದರ್ಭದಲ್ಲಿ ನಮ್ಮ ಜೀವ ಪಣಕ್ಕಿಟ್ಟು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ ಅವರಿಗೆ ಹೊಸ ಜೀವನ ಕಲ್ಪಿಸದ್ದಲ್ಲದೆ ಗ್ರಾಮೀಣ ಭಾಗದ ಜನರ ಜೀವನಾಡಿಯಾಗಿ ಸೇವೆ ಸಲ್ಲಿಸುತ್ತಿದ್ದೇವೆ.ನಮ್ಮ ವೈದ್ಯರಿಗೆ ಪ್ರಾಥಮಿಕ ಹಂತದ ಚಿಕಿತ್ಸೆಯಲ್ಲಿ ನಮ್ಮ ಮೂಲ ಪದ್ಧತಿಯೊಂದಿಗೆ ಅವಶ್ಯಕ ಅಲೋಪತಿ ಔಷಧಗಳನ್ನು ಬಳಕೆ ಮಾಡಬಾರದು ಎನ್ನುವ ರಾಜ್ಯ ಸರ್ಕಾರದ ಕಾನೂನು ನಮ್ಮ ವೃತ್ತಿ ಜೀವನವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಈಗಾಗಲೇ ನಮ್ಮ ದೇಶದ ಹಲವು ರಾಜ್ಯಗಳಲ್ಲಿ ಅಲ್ಲಿನ ರಾಜ್ಯ ಸರ್ಕಾರಗಳು ಆಯುರ್ವೇದ ವೈದ್ಯರುಗಳಿಗೆ (B.A.M.S) ಅವಶ್ಯಕ ಅಲೋಪತಿ ಔಷಧಗಳನ್ನು ನೀಡಲು ಅನುಮತಿ ನೀಡಿರುತ್ತದೆ.

  ಆಯುರ್ವೇದ ವೈದ್ಯರು (B.A.M.S) ಪದವಿಯನ್ನು ಸತತ ಐದುವರೇ ವರ್ಷ ಕಲಿತು, ಸರ್ಕಾರ ಮಾನ್ಯತೆಯುಳ್ಳ ರಾಜೀವ್‌ಗಾಂಧಿ ಯುನಿರ್ವಸಿಟಿ ಹಾಗೂ KAUP Boardನಲ್ಲಿ ಪದವಿಯನ್ನು
  ಪಡೆದಿರುತ್ತಾರೆ. (B.A.M.S) ಕೋರ್ಸ್‌ನಲ್ಲಿ ಆಯುರ್ವೇದದ ಜೊತೆಗೆ ಮಾಡರ್ನ್ ಮೆಡಿಕಲ್ ಸೈನ್ಸ್‌ನ್ನು ಕಲಿಸಿರುತ್ತಾರೆ. (6 ತಿಂಗಳು ಕಡ್ಡಾಯ ತಾಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಇಂಟರ್ನ್ ಶಿಪ್ ಮತ್ತು 6 ತಿಂಗಳು ಆಯುರ್ವೇದ ಚಿಕಿತ್ಸೆ ಪದ್ಧತಿಯಲ್ಲಿ ಇಂಟರ್ನ್ ಶಿಪ್ ಮಾಡಿರುತ್ತೇವೆ.

  ರಾಜ್ಯದಲ್ಲಿ BAMS ವೈದ್ಯರಿಗೆ K.P.M.EA ಕಾಯ್ದೆ ಅಡಿಯಲ್ಲಿ ಪರಿವೀಕ್ಷಣ ಹೆಸರಿನಲ್ಲಿ ಆಗುತ್ತಿರುವ ಕಿರುಕುಳ ನೀಡುತ್ತಿರುವುದು ಖಂಡನೀಯವಾಗಿದೆ. ಮತ್ತು ಕಾನೂನಿನಲ್ಲಿ ಇರುವ ಅವಕಾಶಗಳನ್ನು ಬಳಸಿಕೊಂಡು ರಾಜ್ಯದ ಆಯುಷ್ ವೈದ್ಯರಿಗೆ ಪ್ರಾಥಮಿಕ ಹಂತದ ಚಿಕಿತ್ಸೆಯಲ್ಲಿ ನಮ್ಮ ಮೂಲ ಪದ್ಧತಿಯೊಂದಿಗೆ ಅವಶ್ಯಕ ಅಲೋಪತಿ ಔಷಧಿಯನ್ನು ಬಳಕೆ ಮಾಡಲು ಈಗಾಗಲೇ ಮಹಾರಾಷ್ಟ್ರ ಸೇರಿದಂತೆ ಇತರ ಹಲವು ರಾಜ್ಯಗಳಲ್ಲಿ ಜಾರಿಯಲ್ಲಿರುವ ಕಾನೂನಿನಂತೆ ತಿದ್ದುಪಡಿಯನ್ನು ಡ್ರಗ್ಸ್ ಆಂಡ್ ಕಾಸ್ಕೆಟಿಕ್ ಆಕ್ಟ್ (Drugs & cosmatics act 1940 Rule 2EE (iii) ರನ್ವಯ ನಮ್ಮ ರಾಜ್ಯದಲ್ಲಿಯೂ ಕೂಡ ತಿದ್ದುಪಡಿ ಮಾಡಿ ಜಾರಿಗೆ ತರಬೇಕು ಹಾಗೂ ಕರ್ನಾಟಕ ರಾಜ್ಯ ಆಯುರ್ವೇದ ಯುನಾನಿ ಬೋರ್ಡ್ ಮತ್ತು ಹೋಮಿಯೋಪತಿ ಬೋರ್ಡ್‌ಗಳ ಕಾಯ್ದೆಯಲ್ಲಿ ತಿದ್ದುಪಡಿ ತಂದು ಜಾರಿಗೆ ತರಬೇಕೆಂದು ಜಿಲ್ಲಾಧಿಕಾರಿ ಮೂಲಕ ಮಾನ್ಯ ಮುಖ್ಯ ಮಂತ್ರಿ ಮತ್ತು ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಿದರು.


  ಪ್ರತಿಭಟನಾ ಸ್ಥಳಕ್ಕೆ ಅಪಾರ ಜಿಲ್ಲಾಧಿಕಾರಿ ಭೇಟಿಕೊಟ್ಟು ಮನವಿ ಸ್ವಿಕರಿಸದರು. ಮತ್ತು ವೈದ್ಯರುಗಳ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದು ಸೂಕ್ತ ಪರಿಹಾರ ನೀಡುತ್ತೆನೆ ಎಂದು ಭರವಸೆ ನೀಡಿದರು.

  ಈ ಸಂದರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆಯ ವೈದ್ಯರ ಘಟಕ ಅದ್ಯಕ್ಷರಾದ ರವೀಂದ್ರ, ತುಳುನಾಡ ರಕ್ಷಣಾ ವೇದಿಕೆಯ ವೈದ್ಯರ ಘಟಕದ ಮುಖಂಡರುಗಳಾದ ಡಾ. ಎನ್‌ .ಟಿ ಅಂಚನ್, ಡಾ. ರಾಜೇಶ್ ಶೆಟ್ಟಿ, ಡಾ.ಪ್ರಜಿತ್ ನಂಬಿಯಾರ್, ಡಾ. ಸಂದೀಪ್ ಸನಿಲ್, ಡಾ. ಜಯ ಮೋಹನ್ ನಂಬಿಯಾರ್, ಡಾ. ಸುರೇಶ್ ಕುಮಾರ್ ಶೆಟ್ಟಿ ,ಡಾ. ಪ್ರಕಾಶ್ ಪೈ, ಡಾ. ಜಗದೀಶ್ ಶೆಟ್ಟಿ, ಡಾ. ಚಂದ್ರಶೇಖರ್ ಶೆಟ್ಟಿ, ಡಾ. ಕೃಷ್ಣರಾವ್ , ಡಾ. ಸುದೀಪ್ ಗಜಾನನ್ ಹೆಗಡೆ, ಡಾ. ವಿಶ್ವನಾಥ್ ಶೆಟ್ಟಿ, ಡಾ. ಅರುಣ್ ಕುಮಾರ್ ಶೆಟ್ಟಿ, ಡಾ. ವರುಣ್ ಪಿ ನಂಬಿಯಾರ್, ಡಾ. ಪ್ರಣಂ ಶೆಟ್ಟಿ, ಡಾ. ಸಂದೀಪ್ ಶೆಟ್ಟಿ, ಡಾ. ಶ್ರೇಯಸ್ ಕುಮಾರ್, ಡಾ. ಸತೀಶ್ ರಾವ್, ಡಾ. ವೆಂಕಟೇಶ್ ಶೆಟ್ಟಿ, ಡಾ. ರಾಘವೇಂದ್ರ ಶೆಟ್ಟಿ, ಡಾ. ಸುಕ್ರತಿ ರಾಘವೇಂದ್ರ, ಡಾ. ಕೌಶಿಕ್ ಐತಾಳ್, ಡಾ. ಹರ್ಷವರ್ಧನ್ ಶೆಟ್ಟಿ, ಡಾ. ಹರೀಶ್ ಶೆಟ್ಟಿ, ಡಾ. ಲಕ್ಷ್ಮಿ ನಾರಾಯಣ ಶೆಟ್ಟಿ, ಡಾ. ದೇವದಾಸ್ ಶೆಟ್ಟಿ, ಡಾ. ಸುನಿಲ್ ಕುಮಾರ್ , ಡಾ. ಅನೂಪ್ , ಡಾ. ಅನ್ನಪೂರ್ಣ , ಡಾ. ಗುರುಪ್ರಸಾದ್ , ಡಾ. ಗೌರವ್ ದೀಪಕ್ ಶೆಟ್ಟಿ , ಡಾ.ಗುರುಮೂರ್ತಿ, ಡಾ. ಕಲಾ ಹೆಬ್ಬಾರ್, ಡಾ. ಶಿವಶಂಕರ್ ಶ್ರೀಪತಿ ಭಟ್ , ಡಾ. ರಾಜ್ ಗೋಪಾಲ್ , ಡಾ. ವೆಂಕಟ ಕಿಷ್ಣ ಭಟ್ , ಡಾ. ನಾಗೇಂದ್ರ ಅಶೋಕ್ ಕುಮಾರ್ , ಡಾ. ರಾಘವೇಂದ್ರ ಉಪಾಧ್ಯಾಯ, ಡಾ. ರಮೇಶ್ ಕಲ್ಕೂರ್ , ಡಾ. ಸೌಮ್ಯಶ್ರೀ ಪ್ರವೀಣ್ ನಾಗರಾಜ್, ಡಾ. ಶಶಿಕಿರಣ್ ಶೆಟ್ಟಿ, ಡಾ. ಅಶ್ವಿನ್ ಕುಮಾರ್ , ಡಾ. ಗೋಪಾಲಕೃಷ್ಣ , ಡಾ. ರೋಹಿತ್ ಶೆಟ್ಟಿ , ಡಾ. ಅಭಿನವ ಶೆಟ್ಟಿ , ಡಾ. ಹರಿಪ್ರಸಾದ್ ಶೆಟ್ಟಿ, ಡಾ. ಶ್ರೀ ಪಾದ್ ಹೆಗ್ಡೆ , ಡಾ. ರವೀಂದ್ರ ತಲ್ಲೂರು, ಡಾ.ಮನೋಜ್ ಕುಮಾರ್ ಜೆ.ಶೆಟ್ಟಿ,ಡಾ.ಎಂ.ಆರ್.ಆಡಿಗ, ಡಾ.ಶಿವಶಂಕರ್, ಡಾ.ರವಿ ಶಂಕರ್ ಶೆಣೈ, ಡಾ.ಅನುಪ್ ಪೂಜಾರಿ, ಡಾ.ಸುರೇಶ್ ಶೆಟ್ಟಿ, ಡಾ.ಸತೀಶ್ ಭಟ್, ಡಾ.ಸುದೀಪ್ ಕುಮಾರ್ ಶೆಟ್ಟಿ, ಡಾ.ಸುದರ್ಶನ್ ಎಸ್.ವೈದ್ಯ, ಡಾ.ಸೈಯದ್, ಡಾ.ಅನಂತ ಕೃಷ್ಣ ಆಡಿಗ, ಡಾ.ಪಿ.ಎಸ್.ಉಡುಪ, ಡಾ.ಗೋಪಾಲ ಕೃಷ್ಣ ರಾವ್, ಡಾ.ರಾಘವೇಂದ್ರ ಉಪಾಧ್ಯಾಯ, ಡಾ.ಪ್ರಸನ್ನ ಮೊಗಸಾಲೆ, ಡಾ. ಲಕ್ಷ್ಮೀಕಾಂತ್ ಕೆ.ಎಲ್, ಡಾ.ಮಹೇಶ್ ಎನ್. ಡಾ.ಗಣೇಶ್ ಯು, ಡಾ.ಕೃಷ್ಣ ರಾವ್,ಅಫ್ಪಾನ್ ಕೆ, ಡಾ.ಹರಿ ಪ್ರಸಾದ್ ಶೆಟ್ಟಿ, ಡಾ.ಕೆ.ಜಯಮೋಹನ್, ಸುನೀಲ್ ಶೆಟ್ಟಿ,ಸುಮ ಎಸ್ ಶೆಟ್ಟಿ, ಡಾ. ಬಿ ದೇವದಾಸ್ ಶೆಟ್ಟಿ, ಡಾ. ಎಮ್.ಎಸ್.ಪ್ರಭು, ಡಾ. ಶ್ರೀಕಾಂತ್ ನಾಯಕ್,ಡಾ. ವರುಣ್ ನಂಬಿಯಾರ್,ಡಾ. ಸಂದೀಪ್ ಶೆಟ್ಟಿ, ಡಾ. ಶ್ರೀದರ್ ವರ್ಮ , ಡಾ. ರಾಜೇಶ್ ಕುಮಾರ್ಡಾ. ಶ್ರೇಯಸ್ ಯುಕೆ, ಡಾ. ಶಂಕರ್ ಹೊಳ್ಳ , ಡಾ.ಮನೋಜ್ ಕುಮಾರ್ ಶೆಟ್ಟಿ, ಡಾ. ಗಣೇಶ್ ಶೆಟ್ಟಿ, ಡಾ. ಯು.ವಿ.ಕೃಷ್ಣ ಮೂರ್ತಿ, ಡಾ. ಪಿ. ಲಕ್ಷ್ಮಿಕಾಂತ ಶರ್ಮ, ಡಾ. ಪೌರವ್ ಶೆಟ್ಟಿ ,ಡಾ. ಪ್ರವೀಣ್, ಡಾ.ವಿಶ್ವನಾಥ ಚತ್ರ, ಕೇಂದ್ರೀಯ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ಉಡುಪಿ ಜಿಲ್ಲಾ ವೀಕ್ಷಕ ಫ್ರ್ಯಾಂಕಿ ಡಿಸೋಜಾ, ಉಡುಪಿ ತಾಲೂಕು ಅಧ್ಯಕ್ಷ ಕೃಷ್ಣಕುಮಾರ್, ಗೌರವ ಅದ್ಯಕ್ಷರಾದ ರವಿ ಅಚಾರ್ಯ, ಮಹಿಳಾ ಪ್ರಧಾನ ಕಾರ್ಯದರ್ಶಿ ನಾಗಲಕ್ಷ್ಮಿ , ತಾಲೂಕು ಉಪಾಧ್ಯಕ್ಷ ಜಯರಾಮ ಪೂಜಾರಿ, ಅಟೊ ಘಟಕ ಅದ್ಯಕ್ಷರಾದ ಅನಿಲ್ ಪೂಜಾರಿ, ಸಾಧನ, ಶೋನ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss