Saturday, April 20, 2024
spot_img
More

  Latest Posts

  ತುಳುನಾಡ ರಕ್ಷಣಾ ವೇದಿಕೆ ಉಡುಪಿ ತಾಲೂಕು ಘಟಕ ಆಯೋಜಿಸಿದ “ಮುದ್ದು ಕೃಷ್ಣ-2023″ರ ಬಹುಮಾನ ವಿತರಣಾ ಸಮಾರಂಭ

  ದಿನಾಂಕ 17-09-2023 ರವಿವಾರ, ಸಂಜೆ ಗಂಟೆ 4:00 ಕ್ಕೆ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಹೋಟೆಲ್ ಕಿದಿಯೂರಿನಲ್ಲಿ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭವನ್ನು ಆಯೋಜಿಸಲಾಗಿತ್ತು. ಶ್ರೀ ಕೃಷ್ಣನ ಜನ್ಮಾಷ್ಟಮಿ ಅಂಗವಾಗಿ ತುಳುನಾಡು ರಕ್ಷಣಾ ವೇದಿಕೆ (ರಿ) ಸ್ಥಾಪಕ ಅದ್ಯಕ್ಷರಾದ ಯೋಗಿಶ್ ಶೆಟ್ಟಿ ಜಪ್ಪು ರವರ ಮಾರ್ಗದರ್ಶನದಲ್ಲಿ ತುಳುನಾಡ ರಕ್ಷಣಾ ವೇದಿಕೆ ಉಡುಪಿ ತಾಲೂಕು ಘಟಕ ವತಿಯಿಂದ ಆಯೋಜಿಸಲಾದ ಮುದ್ದು ಕೃಷ್ಣ ಸ್ಪರ್ಧೆ ಆನ್ಲೈನ್ ಮೂಲಕ ಯಶಸ್ವಿಯಾಗಿ ನಡೆದಿದೆ.

  ಸುಮಾರು 75000 ಜನರು ವೀಕ್ಷಿಸಿ ಮತದಾನ ಪ್ರಕ್ರಿಯೆ ಯಲ್ಲಿ ಭಾಗವಹಿಸಿದ್ದರು
  ಸ್ವಾಗತ ಭಾಷಣವನ್ನು ತುಳುನಾಡು ರಕ್ಷಣಾ ವೇದಿಕೆ ಉಡುಪಿ ತಾಲೂಕು ಅಧ್ಯಕ್ಷ ಕೃಷ್ಣಕುಮಾರ್ ಮಾಡಿದರು ಪ್ರಸ್ತಾವಿಕ ಭಾಷಣವನ್ನು ಉಡುಪಿ ತಾಲೂಕು ಪ್ರಧಾನ ಕಾರ್ಯದರ್ಶಿ, ಸುನಿಲ್ ಫರ್ನಾಂಡಿಸ್ ಗೈದರು ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷರಾಗಿರುವಂತ ಯೋಗಿಶ್ ಶೆಟ್ಟಿ ಜಪ್ಪು ಕಾರ್ಯಕ್ರಮ ಉದ್ಘಾಟಿಸಿದರು.

  ಉದ್ಘಾಟನಾ ಭಾಷಣ ಮಾಡಿದ್ದ ಜಪ್ಪುರವರು ನಮ್ಮ ಜೀವನದಲ್ಲಿ ಉತ್ತಮ ಸೇವಾ ಮನೋಭಾವವನ್ನು ಮೈಗೂಡಿಸಿಕೊಂಡು ಇತರರಿಗೆ ನಮ್ಮಿಂದ ಎಷ್ಟು ಸಾಧ್ಯ ಉಂಟು ಅಷ್ಟು ಸಹಾಯವನ್ನು ಮಾಡಬೇಕು ಹಾಗೂ ಸಂಘಟನೆಯು ನೊಂದವರ ಕಣ್ಣೀರು ಒರೆಸುವ ಕೆಲಸವನ್ನು ನಿರಂತರ ಕಳೆದ 15 ವರ್ಷಗಳಿಂದ ತುಳುನಾಡು ರಕ್ಷಣಾ ವೇದಿಕೆ ಮಾಡುತ್ತಿದ್ದು ದೇಶ ವಿದೇಶಗಳಲ್ಲಿ ಹಲವಾರು ಘಟಕಗಳು ಉತ್ತಮ ಕೆಲಸ ಮಾಡುತ್ತಿದ್ದು ಉಡುಪಿ ಘಟಕವು ಉತ್ತಮ ಕೆಲಸ ಮಾಡುವುದಾಗಿ ನಂಬಿರುತ್ತೇನೆ ಹಾಗೂ ಇನ್ನಷ್ಟು ಸಂಘಟನೆಯನ್ನು ಬಲಿಷ್ಠ ಗೊಳಿಸುವ ಜೊತೆಗೆ ಇತರರ ಸಹಾಯಕ್ಕೆ ಸದಾ ಸಿದ್ದರಾಗಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.

  ಮುಖ್ಯ ಅತಿಥಿಗಳಾಗಿ ಭಾಗವಹಿಸಿರುವ ನ್ಯಾಯವಾದಿ ಜಯಕೃಷ್ಣ ಆಳ್ವ ಕೇಂದ್ರೀಯ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ ಉಡುಪಿ ಜಿಲ್ಲಾ ವೀಕ್ಷಕರಾಗಿರುವ ಫ್ರಾಂಕಿ ಡಿಸೋಜ ಸಂಘಟನೆ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿಯ ಮಹತ್ವದ ಬಗ್ಗೆ ಮಾತನಾಡಿದರು ವೇದಿಕೆಯಲ್ಲಿ ಕಾಪು ಘಟಕ ಮಹಿಳಾಧ್ಯಕ್ಷ ಅನುಸೂಯ ಶೆಟ್ಟಿ ಉಡುಪಿ ತಾಲೂಕು, ಮಹಿಳಾ ಘಟಕ ಪ್ರಧಾನ ಕಾರ್ಯದರ್ಶಿ ನಾಗಲಕ್ಷ್ಮಿ, ಚಿತ್ರ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ, ಚಿತ್ರ ನಿರ್ಮಾಪಕ ಶರಣ್ ರಾಜ್, ವಿಜಯಲಕ್ಷ್ಮಿ ಮತ್ತಿತರ ಗಣ್ಯರು ಉಪಸಿತರಿದ್ದರು.

  ಮುದ್ದುಕೃಷ್ಣ 2023ರ ಪ್ರಥಮ ಬಹುಮಾನವನ್ನು ಪಡೆದ ಲಹರಿ ಪಿ. ಕುಲಾಲ್ ರವರು 3,500+ಫಲಕ+ ಪ್ರಮಾಣ ಪತ್ರ + ಪದಕ

  ದ್ವಿತೀಯ ಬಹುಮಾನವನ್ನು ಪಡೆದಅಹನ್. ಎಸ್. ರೈ
  2,500+ಫಲಕ+ ಪ್ರಮಾಣ ಪತ್ರ+ಪದಕ
  ತೃತೀಯ ಬಹುಮಾನವನ್ನು ಪಡೆದ ವಿಧಿತ್ ಪೂಜಾರಿ , 1,500+ಫಲಕ+ ಪ್ರಮಾಣ ಪತ್ರ + ಪದಕ

  ನಾಲ್ಕನೇ ಬಹುಮಾನವನ್ನು ಪಡೆದ ಸಿಯಾ ಸಾಯಿ 750+ಫಲಕ+ ಪ್ರಮಾಣ ಪತ್ರ + ಪದಕ ನೀಡಿ ಗೌರವಿಸಲಾಯಿತು.
  ಹಾಗೂ ಸ್ಪರ್ಧೆ ಯಲ್ಲಿ ಭಾಗವಹಿಸಲು ಆಯ್ಕೆಯಾದ ಎಲ್ಲಾ 71 ಮಕ್ಕಳಿಗೂ ಪ್ರಮಾಣ ಪತ್ರ ನೀಡಲಾಯಿತು.

  ಸಭೆಯಲ್ಲಿ ಉಡುಪಿ ತಾಲೂಕು ಸಲಹೆಗಾರರಾದ ಸುಧಾಕರ ಅಮೀನ್,ಯುವ ಘಟಕ ಅದ್ಯಕ್ಷ ರಾಹುಲ್ ಪೂಜಾರಿ, ಸಮಾಜಿಕ ಜಾಲತಾಣ ಪ್ರಮುಖ ರೋಶನ್ ಡಿಸೋಜ,ಉಮೇಶ್ ಶೆಟ್ಟಿ ಹಾವಂಜೆ, ಪ್ರಭಾಕರ ಪೂಜಾರಿ, ಹೆಲನ್ ಸೋನ್ಸ್ , ಸುನಂದ ಟೀಚರ್, ಯಶಸ್ವಿನಿ ಮತ್ತಿತರರು ಉಪಸ್ಥಿತರಿದ್ದರು.
  ಕಾರ್ಯಕ್ರಮ ನಿರೂಪಣೆಯನ್ನು ಪ್ರದೀಪ್ .ಎಮ್. ಹಾವಾಂಜೆ. ರವರು ನಿರ್ವಹಿಸಿದ್ದರು.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss