ಮಂಗಳೂರು : ಖಾಸಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಬಿಟ್ಟು ಹೋಗಿದ್ದ ಸುಮಾರು 50 ಸಾವಿರ ಮೌಲ್ಯದ ಆಭರಣ ಮತ್ತು ಇತರೆ ಮೌಲ್ಯದ ವಸ್ತುಗಳನ್ನು ಮರಳಿ ಅದರ ವಾರಸುದಾರರಿಗೆ ತಲುಪಿಸುವ ಮೂಲಕ ಬಸ್ ನ ನಿರ್ವಾಹಕ ಜಯರಾಜ್ ಅವರು ಪ್ರಾಮಾಣಿಕತೆ ಮೆರೆದಿದ್ದಾರೆ.
ದಿನಾಂಕ 19.11.2023 ರಂದು ಖಾಸಗಿ ಬಸ್ಸಿನಲ್ಲಿ ಮಹಿಳೆ ಒಬ್ಬರು ಪ್ರಯಾಣ ಮಾಡುವ ಸಮಯ ಸುಮಾರು 50,000/- ರೂ ಮೌಲ್ಯದ ಆಭರಣ ಮತ್ತು ಇತರೆ ಮೌಲ್ಯದ ವಸ್ತುಗಳು ಇರುವ ಬ್ಯಾಗನ್ನು ಬಿಟ್ಟು ಹೋಗಿದ್ದರು. ಅದೇ ಬಸ್ಸಿನ ನಿರ್ವಾಹಕ ಆದ ಜಯರಾಜ್ ಖಾರ್ಮಿ ಎಂಬವರು ಸದರಿ ಬ್ಯಾಗನ್ನು ಮತ್ತು ಅದರೊಳಗಿನ ಆಭರಣ ಮತ್ತು ವಸ್ತುಗಳ ನ್ನು ದಿನಾಂಕ 20.11.2023 ರಂದು ಮಾಲೀಕರಿಗೆ ಮಂಗಳೂರು ದಕ್ಷಿಣ ಠಾಣಾ ASI ಶ್ರೀಧರ ರವರ ಮುಖಾಂತರ ಮಾಲೀಕರಿಗೆ ಯಥಾವತ್ತಾಗಿ ಮುಟ್ಟಿಸಿ ತಮ್ಮ ಪ್ರಾಮಾಣಿಕತೆ ಮೆರೆದಿರುತ್ತಾರೆ.ಈ ಬಗ್ಗೆ ದಿನಾಂಕ 01-12-2023 ರಂದು ನಿರ್ವಾಹಕ ಜಯರಾಜ್ ರವರ ಪ್ರಾಮಾಣಿಕತೆ ಶ್ಲಾಘಿಸಿ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರು ಕೇಂದ್ರ ಉಪ ವಿಭಾಗ ಶ್ರೀ ಮಹೇಶ್ ಕುಮಾರ್ ರವರು ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.