Tuesday, July 23, 2024
spot_img
More

    Latest Posts

    ನಾಳೆಯಿಂದ ಮೊಸರು, ಮಜ್ಜಿಗೆ, ಲಸ್ಸಿ ಬೆಲೆ ಹೆಚ್ಚಳ

    ಬೆಂಗಳೂರು: ಹಾಲಿನ ಉತ್ಪನ್ನಗಳ ಮೇಲೆ ಕೇಂದ್ರ ಸರ್ಕಾರವು ಶೇ 5ರ ಸರಕು ಸೇವಾ ಸುಂಕ ವಿಧಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳವು (KMF) ಮೊಸರು, ಮಜ್ಜಿಗೆ ಮತ್ತು ಲಸ್ಸಿ ಬೆಲೆಗಳನ್ನು ಹೆಚ್ಚಿಸಲು ತೀರ್ಮಾನಿಸಿದೆ.

    ಈಗಿರುವ ಬೆಲೆಯಿಂದ 1 ರಿಂದ 3 ರೂಪಾಯಿವರೆಗೆ ಬೆಲೆ ಏರಿಕೆ ಆಗಲಿದ್ದು, ಹಾಲಿನ ದರದಲ್ಲಿ ಮಾತ್ರ ಯಾವುದೇ ಬದಲಾವಣೆ ಆಗೋದಿಲ್ಲ. ಉಳಿದಂತೆ, 43 ರೂಪಾಯಿ ಇದ್ದ ಒಂದು ಲೀಟರ್​ ಮೊಸರಿನ ಬೆಲೆ 46 ರೂಪಾಯಿ ಆಗಲಿದ್ದು, ಅರ್ಧ ಲೀಟರ್ ಮೊಸರಿಗೆ 22 ಇದ್ದದ್ದು 24 ರೂಪಾಯಿ ಹೇರಿಕೆ ಆಗಲಿದೆ. 200 ಎಂಎಲ್​​ ಪ್ಯಾಕೆಟ್​ ಬೆಲೆ ಮೇಲೆ 1 ರೂಪಾಯಿ ಹೆಚ್ಚಳವಾಗಲಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss