ಇಂದು 08-12-2023 ರಂದು ಮಧ್ಯಾಹ್ನ ತುಳುನಾಡ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ವೈದ್ಯರ ಘಟಕವು ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅದ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪುರವರ ನೇತ್ರತ್ವದಲ್ಲಿ ನೂರಾರು ವೈದ್ಯರುಗಳು ಉಡುಪಿಯ ಬನ್ನಂಜೆಯಲ್ಲಿರುವ ಪೋಲಿಸ್ ಅಧೀಕ್ಷಕರ ಕಛೇರಿಗೆ ತೆರಲಿ ಎಸ್ .ಪಿ ಡಾ. ಅರುಣ್ ರವರಿಗೆ ಮನವಿ ನೀಡಿ ಆಯುಷ್ ವೈದ್ಯರುಗಳು ಅನುಭವಿಸುತ್ತಿರುವ ಕಿರುಕುಳ ಮಾನಹಾನಿ, ಜೀವ ಬೆದರಿಕೆ, ಸಮಸ್ಯೆಗಳ ಬಗ್ಗೆ ರಕ್ಷಣೆ ಕೋರಿ ಮನವಿ ಸಲ್ಲಿಸಿದರು.
ಕಿರಣ್ ಪೂಜಾರಿ ಎ೦ಬ ಹೆಸರಿನ ಓರ್ಪ ವ್ಯಕ್ತಿಯು ತಾನು ಪತ್ರಕರ್ತನೆ೦ದು ಸ್ವಯಂಘೋಷಿಸಿಕೊಂಡು ಆಯುಷ್ ವೈದ್ಯರುಗಳ ಕ್ಲಿನಿಕ್ ಗಳಿಗೆ ಅಕ್ರಮವಾಗಿ ಪ್ರವೇಶ ಮಾಡಿ,ಸಿಬ್ಬಂದಿಗಳನ್ನು ಬೆದರಿಸಿ ಸ್ಥಿಂಗ್ ಆಪರೇಷನ್‌ನ ಹೆಸರಿನಲ್ಲಿ ವಿಡಿಯೋ ಚಿತ್ರೀಕರಣ ನಡೆಸಿ ವೈದ್ಯರ ಪೋಟೊಗಳನ್ನು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿ ಬೆದರಿಕೆ ಹಾಗೂ ಮಾನಹಾನಿ ಮಾಡುವ ಕೃತ್ಯದಲ್ಲಿ ತೊಡಗಿರುತ್ತಾನೆ.
ಈತನ ವಿರುದ್ಧ ಕುಂದಾಪುರ ಮತ್ತು ಬೈಂದೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಬಳಿಕ ಬಂಧನ ವಾಗಿರುತ್ತಾನೆ. ಕೆಲವು ಸಮಯದ ನಂತರ ಜಾಮೀನು ಮೇಲೆ ಹೊರ ಬಂದ ಆರೋಪಿಯು ಹಳೆಯ ಚಾಲಿಯನ್ನು ಮುಂದುವರಿಸಿಕೊಂಡು ವೈದ್ಯರ ಮೇಲೆ ಮತ್ತೊಂದು ಬಾರಿ ದಾಳಿ ನಡೆಸುವುದಾಗಿ ಬೆದರಿಕೆಯನ್ನೊಡ್ಡಿರುತ್ತಾನೆ.
ಏಕಾಏಕಿ ಈತನ ದೂರನ್ನು ದಾಖಲಿಸಿ ಎಫ್ ಐ ಆರ್ ಎಂದು ತಪ್ಪಾಗಿ ನಮೂದಿಸಿ ಅದನ್ನು ಮಾಧ್ಯಮದ ಮೂಲಕ ಅಪಪ್ರಚಾರ ಮಾಡಲು ಅನುವು ಮಾಡಿಕೊಡುತ್ತಿರುವುದು ಕಾನೂನಿನ ಉಲ್ಲಂಘನೆಯಾಗಿರುತ್ತದೆ. ಈಗಾಗಲೆ ಈತ ನೀಡುತ್ತಿರುವ ಕಿರುಕುಳದಿಂದ ನಮ್ಮ ವೃತ್ತಿ ಜೀವನವು ಸಂಕಷ್ಟದಲ್ಲಿದ್ದು, ನಮ್ಮ ವೈದ್ಯರುಗಳ ಮಾನ ಹಾನಿ ಇದೇ ರೀತಿಯಲ್ಲಿ ಮುಂದುವರಿದರೆ / ವೈದ್ಯನ ಜೀವ ಹಾನಿಯಾದರೆ ಕಿರಣ್ ಪೂಜಾರಿ ಹಾಗು ಅವನ ಬೆಂಬಲಿಸುವವರೇ ನೇರ ಹೊಣೆಯಾಗಿರುತ್ತಾರೆ. ಇನ್ನು ಮುಂದೆ ಕೂಡ ಕಿರಣ್ ಪೂಜಾರಿ ಇದೇ ಚಾಳಿಯನ್ನು
ಮುಂದುವರಿಸಿದ್ದಲ್ಲಿ ನಮ್ಮ ಜಿಲ್ಲೆಯ ಎಲ್ಲಾ ವೈದ್ಯರು ತಮ್ಮ ಸೇವೆಯನ್ನು ಮೊಟಕುಗೊಳಿಸಿ ಪ್ರತಿಭಟನೆ ಮಾಡುವುದು ಅನಿವಾರ್ಯವಾಗುತ್ತದೆ ಎಂದು ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ವೈದ್ಯರ ಘಟಕ ಅದ್ಯಕ್ಷರಾದ ಡಾ. ರವೀಂದ್ರ ಸೇರಿದಂತೆ ಇತರ ವೈದ್ಯರು ತಿಳಿಸಿದರು.
ಈ ಸಂದರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆಯ ವೈದ್ಯರ ಘಟಕದ ಮುಖಂಡರುಗಳಾದ ಡಾ. ಎನ್ .ಟಿ ಅಂಚನ್, ಡಾ. ರಾಜೇಶ್ ಶೆಟ್ಟಿ, ಡಾ.ಪ್ರಜಿತ್ ನಂಬಿಯಾರ್, ಡಾ. ಸಂದೀಪ್ ಸನಿಲ್, ಡಾ. ಜಯ ಮೋಹನ್ ನಂಬಿಯಾರ್, ಡಾ. ಸುರೇಶ್ ಕುಮಾರ್ ಶೆಟ್ಟಿ ,ಡಾ. ಪ್ರಕಾಶ್ ಪೈ ಡಾ. ಚಂದ್ರಶೇಖರ್ ಶೆಟ್ಟಿ, ಡಾ. ಕೃಷ್ಣರಾವ್ , ಡಾ. ಸುದೀಪ್ ಗಜಾನನ್ ಹೆಗಡೆ, ಡಾ. ವಿಶ್ವನಾಥ್ ಶೆಟ್ಟಿ, ಡಾ. ಅರುಣ್ ಕುಮಾರ್ ಶೆಟ್ಟಿ, ಡಾ. ವರುಣ್ ಪಿ ನಂಬಿಯಾರ್, ಡಾ. ಪ್ರಣಂ ಶೆಟ್ಟಿ, ಡಾ. ಸಂದೀಪ್ ಶೆಟ್ಟಿ, ಡಾ. ಶ್ರೇಯಸ್ ಕುಮಾರ್, ಡಾ. ಸತೀಶ್ ರಾವ್, ಡಾ. ವೆಂಕಟೇಶ್ ಶೆಟ್ಟಿ, ಡಾ. ರಾಘವೇಂದ್ರ ಶೆಟ್ಟಿ, ಡಾ. ಸುಕ್ರತಿ ರಾಘವೇಂದ್ರ, ಡಾ. ಕೌಶಿಕ್ ಐತಾಳ್, ಡಾ. ಹರ್ಷವರ್ಧನ್ ಶೆಟ್ಟಿ, ಡಾ. ಹರೀಶ್ ಶೆಟ್ಟಿ, ಡಾ. ಲಕ್ಷ್ಮಿ ನಾರಾಯಣ ಶೆಟ್ಟಿ, ಡಾ. ದೇವದಾಸ್ ಶೆಟ್ಟಿ, ಡಾ. ಸುನಿಲ್ ಕುಮಾರ್ , ಡಾ. ಅನ್ನೋ ಪೂಜಾರಿ, ಡಾ. ಅನ್ನಪೂರ್ಣ , ಡಾ. ಗುರುಪ್ರಸಾದ್ , ಡಾ. ಗೌರವ್ ದೀಪಕ್ ಶೆಟ್ಟಿ , ಡಾ.ಗುರುಮೂರ್ತಿ, ಡಾ. ಕಲಾ ಹೆಬ್ಬಾರ್, ಡಾ. ಶಿವಶಂಕರ್ ಶ್ರೀಪತಿ ಭಟ್ , ಡಾ. ರಾಜ್ ಗೋಪಾಲ್ , ಡಾ. ವೆಂಕಟ ಕಿಷ್ಣ ಭಟ್ , ಡಾ. ನಾಗೇಂದ್ರ ಅಶೋಕ್ ಕುಮಾರ್ , ಡಾ. ರಾಘವೇಂದ್ರ ಉಪಾಧ್ಯಾಯ, ಡಾ. ರಮೇಶ್ ಕಲ್ಕೂರ್ , ಡಾ. ಸೌಮ್ಯಶ್ರೀ ಪ್ರವೀಣ್ ನಾಗರಾಜ್, ಡಾ. ಶಶಿಕಿರಣ್ ಶೆಟ್ಟಿ, ಡಾ. ಅಶ್ವಿನ್ ಕುಮಾರ್ , ಡಾ. ಗೋಪಾಲಕೃಷ್ಣ , ಡಾ. ರೋಹಿತ್ ಶೆಟ್ಟಿ , ಡಾ. ಅಭಿನವ ಶೆಟ್ಟಿ , ಡಾ. ಹರಿಪ್ರಸಾದ್ ಶೆಟ್ಟಿ, ಡಾ. ಶ್ರೀ ಪಾದ್ ಹೆಗ್ಡೆ ಹಾಗೂ ಕೇಂದ್ರೀಯ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ಉಡುಪಿ ಜಿಲ್ಲಾ ವೀಕ್ಷಕ ಫ್ರ್ಯಾಂಕಿ ಡಿಸೋಜಾ, ತಾಲೂಕು ಅಧ್ಯಕ್ಷ ಕೃಷ್ಣಕುಮಾರ್ ಮಹಿಳಾ ಅಧ್ಯಕ್ಷೇ ಶೋಭಾ ಪಾಂಗಾಳ, ಮಹಿಳಾ ಪ್ರಧಾನ ಕಾರ್ಯದರ್ಶಿ ನಾಗಲಕ್ಷ್ಮಿ ತಾಲೂಕು ಉಪಾಧ್ಯಕ್ಷ ಜಯರಾಮ ಪೂಜಾರಿ, ಸಾಧನ, ಗುಣವತಿ, ಗೈಟನ್ ಮತ್ತಿತರರು ಉಪಸ್ಥಿತರಿದ್ದರು