ನವದೆಹಲಿ : ಕರ್ನಾಟಕದ ಪುಟ್ಟ ಬಾಲಕಿಯೊಬ್ಬಳು ಪಿಯಾನೋ ನುಡಿಸಿದಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಪಲ್ಲವಗಳ ಪಲ್ಲವಿಯಲಿ ಗರಿಗೆದರಿದೆ ಗೀತಾ, ತಂಬೆಲರಲಿ ಹಬ್ಬುತ್ತಿದೆ ಕೋಕಿಲ ಸಂಗೀತಾ ಎಂಬ ಕನ್ನಡ ಹಾಡಿಗೆ ಶಾಲ್ಮಲಿ ಎಂಬ ಪುಟಾಣಿ ಬಾಲಕಿಯೊಬ್ಬಳು ತಾಯಿ ಹಾಡಿನ ಸಾಲುಗಳನ್ನು ಹೇಳುತ್ತಿದ್ದಂತೆ, ಪಿಯಾನೋವನ್ನು ಮಧುರವಾಗಿ ನುಡಿಸಿದ್ದಾರೆ, ಈ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಅನಂತ್ ಕುಮಾರ್ ಎಂಬುವವರು ಹಂಚಿಕೊಂಡಿದ್ದು, ಇದನ್ನು ಪ್ರಧಾನಿ ಮೋದಿಯವರು ಗಮನಿಸಿ ಮಗುವಿನ ಅದಗಬುತ ಪ್ರತಿಭೆಯನ್ನು ಶ್ಲಾಘಿಸಿ ಟ್ವೀಟ್ ಮಾಡಿದ್ದಾರೆ.
ಅಷ್ಟೇ ಅಲ್ಲದೇ ಈ ವಿಡಿಯೋ ಪ್ರತಿಯೊಬ್ಬರ ಮುಖದ ಮೇಲೆ ಮುಗುಳುನಗೆ ತರಿಸಬಹುದು. ಅನನ್ಯ ಪ್ರತಿಭೆ ಹಾಗು ಸೃಜನಶೀಲತೆ. ಶಾಲ್ಮಲಿಗೆ ಶುಭಹಾರೈಕೆಗಳು ಎಂದು ಪ್ರಧಾನಿ ಮೋದಿ ತಮ್ಮ ಟಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
