Tuesday, July 16, 2024
spot_img
More

  Latest Posts

  ಮಂಗಳೂರು: ಗಂಡು ಮಕ್ಕಳಿಬ್ಬರ ಪೋಷಕರ ಪತ್ತೆಗೆ ಪೊಲೀಸರ ಮನವಿ

  ಮಂಗಳೂರು: ಇಬ್ಬರು ಗಂಡು ಮಕ್ಕಳಿಬ್ಬರು ಪ್ರತ್ಯೇಕವಾಗಿ ಪತ್ತೆಯಾಗಿದ್ದು, ಈ ಬಾಲಕರ ಪೋಷಕರ ಪತ್ತೆಗೆ ಪೊಲೀಸರು ಮನವಿ ಮಾಡಿದ್ದಾರೆ. ಬಂಟ್ವಾಳ ತಾಲೂಕಿನ ವಿಟ್ಲ ಗ್ರಾಮದ ಮಂಗಿಲಪದವು ಎಂಬಲ್ಲಿ ಬುಲಾಬ್ (12) ಹಾಗೂ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಣಿ (15) ಎಂಬ ಬಾಲಕರಿಬ್ಬರು ಪತ್ತೆಯಾಗಿದ್ದಾರೆ. ಈ ಬಾಲಕರನ್ನು ಮಕ್ಕಳ ಕಲ್ಯಾಣ ಸಮಿತಿ ಆದೇಶದನ್ವಯ ಮಂಗಳೂರಿನ ಬೋಂದೆಲ್ ನ ಸರಕಾರಿ ಬಾಲಕರ ಬಾಲಮಂದಿರದಲ್ಲಿ ಇರಿಸಲಾಗಿದೆ. ಬಾಲಕರ ವಾರಸುದಾರರು ಯಾರಾದರೂ ಇದ್ದಲ್ಲಿ 120 ದಿನದೊಳಗೆ ಸೂಕ್ತ ದಾಖಲೆಗಳೊಂದಿಗೆ ಆಗಮಿಸಬಹುದು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, 1ನೇ ಮಹಡಿ, ಜಿಲ್ಲಾಧಿಕಾರಿಗಳ ಕಚೇರಿ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು 575001, ದೂರವಾಣಿ ಸಂಖ್ಯೆ: 0824- 2440004ಕ್ಕೆ ಕರೆ ಮಾಡಬಹುದು. ಇಮೇಲ್ – dcpu.mnglr@gmail.comಗೆ ಪತ್ರಮುಖೇನ ಸಂಪರ್ಕಿಸಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss