ಉಡುಪಿ ಜಿಲ್ಲಾ ತುಳುನಾಡ ರಕ್ಷಣಾ ವೇದಿಕೆ ಘಟಕ ವತಿಯಿಂದ ಇಂದು ಆಟಿ ಅಮಾವಾಸ್ಯೆ ಪ್ರಯುಕ್ತ ಸಾರ್ವಜನಿಕರಿಗೆ ಉಚಿತ ಪಾಲೆದ ಕೆತ್ತೆ ಕಷಾಯ ಮತ್ತು ಮೆಂತೆ ಗಂಜಿ ವಿತರಣಾ ಕಾರ್ಯಕ್ರಮ ಉಡುಪಿಯ ಕ್ಲಾಕ್ ಟವರ್ ಮುಂಭಾಗದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಳಗಿನ ಜಾವ ಬೆಳಿಗ್ಗೆ ಬೆಳಿಗ್ಗೆ ಉಡುಪಿಯ ಕ್ಲಾಕ್ ಟವರ್ ಮುಂಭಾಗದಲ್ಲಿ ಆಗಮಿಸಿದ ಸ್ಥಾಪಕ ಅಧ್ಯಕ್ಷರಾದ ಯೋಗಿಶ್ ಶೆಟ್ಟಿ ಜಪ್ಪುರವರು ಕಾರ್ಯಕರ್ತರಿಗೆ ಉರಿದುಂಬಿಸಿದ್ದರು. ಉಡುಪಿ ಜಿಲ್ಲಾ ಘಟಕ ಅಧ್ಯಕ್ಷರಾದ ರೋಹಿತ್ ಕರಂಬಳ್ಳಿ ಪ್ರಧಾನ ಕಾರ್ಯದರ್ಶಿ ಆಜರುದ್ದೀನ್ ಸುಬ್ರಮಣ್ಯ ನಗರ, ಮಹಿಳಾ ಅದ್ಯಕ್ಷೆ ಸುಕನ್ಯ ಪ್ರಭಾಕರ್, ಉಡುಪಿ ತಾಲೂಕು ಘಟಕ ಅಧ್ಯಕ್ಷರಾಗಿರುವಂತ ಕೃಷ್ಣಕುಮಾರ್ ಮಜೀದ್ ದೊಡ್ಡಣ್ಣ ಗುಡ್ಡ , ಶರತ್ ಕರಂಬಳ್ಳಿ ಸುಧಾಕರ್ ಕನ್ನರ್ಪಾಡಿ,ವಿಜಯ ಕರಂಬಳ್ಳಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ್ದ ತುಳುನಾಡ ರಕ್ಷಣಾ ಯೋಗಿಶ್ ಶೆಟ್ಟಿ ಜಪ್ಪು ರವರು ಇಂದಿನ ದಿನಗಳಲ್ಲಿ ಪಾಲದ ಕೆತ್ತೆಯ ಕಷಾಯ ತಯಾರು ಮಾಡೋದು ತುಂಬಾ ಕಷ್ಟದ ಕಷ್ಟ ಕೆಲಸವಾಗಿದೆ ಆದುದರಿಂದ ಆಲಯ ಸಂಸ್ಕೃತಿ ಸಂಪ್ರದಾಯ ಉಳಿಸುವ ನಿಟ್ಟಿನಲ್ಲಿ ಹಾಗೂ ಮಳೆಗಾಲದಲ್ಲಿ ಬರುವ ರೋಗ ರುಜ್ಜಿನಗಳನ್ನ ತಡೆಗಟ್ಟುವ ಮತ್ತು ದೈಹಿಕ ಆರೋಗ್ಯ ರಕ್ಷಣೆ ಮಾಡುವ ದೃಷ್ಟಿಯಿಂದ ಇಂತಹ ಉತ್ತಮ ಸಮಾಜಮುಖಿ ಕಾರ್ಯಕ್ರಮವನ್ನು ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕವು ಹಮ್ಮಿಕೊಂಡಿತ್ತು. ಸುಮಾರು 500ಕ್ಕೂ ಹೆಚ್ಚು ಜನ ಪಾಲೆದ ಕೆತ್ತೆ ಕಷಾಯ ಮತ್ತು ಮೆತ್ತೆಗಂಜಿ ಸವಿದರು. ತುಳುನಾಡ ರಕ್ಷಣಾ ವೇದಿಕೆ ಈ ಕಾರ್ಯವನ್ನು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.