Monday, June 24, 2024
spot_img
More

  Latest Posts

  ಕಾರ್ಮಿಕನ ಕಾಲಿಗೆ ಸರಪಳಿ ಹಾಕಿ ಜೀತಕ್ಕಿಟ್ಟ ಮಾಲೀಕ- ಕಾರ್ಮಿಕನ ರಕ್ಷಣೆ

  ರಾಮನಗರದ ಮೆಹಬೂಬ್ ನಗರದ ಸಿಲ್ಕ್ ಫ್ಯಾಕ್ಟರಿ ಮಾಲೀಕನೊಬ್ಬ ಕಾರ್ಮಿಕ ಮುಂಗಡ ಹಣ ಪಡೆದಿದ್ದಕ್ಕೆ ಆತನ ಕಾಲಿಗೆ ಸರಪಳಿ ಹಾಕಿ ಜೀತಕ್ಕೆ ನೇಮಿಸಿಕೊಂಡ ಅಮಾನವೀಯ ಘಟನೆ ನಡೆದಿದೆ.

  ಕಾಲಿಗೆ ಸರಪಳಿ ಹಾಕಿಸಿಕೊಂಡು ಕಾರ್ಖಾನೆಯಲ್ಲಿ ಜೀತಕ್ಕೆ ಸಿಲುಕಿದ್ದ ಕಾರ್ಮಿಕನನ್ನು ವಸೀಂ (24) ಎಂದು ಗುರುತಿಸಲಾಗಿದೆ. ಆತ ಕಾರ್ಖಾನೆಯ ಮಾಲೀಕನ ಬಳಿ 1.50 ಲಕ್ಷ ರೂ. ಮುಂಗಡವಾಗಿ ಸಾಲ ಪಡೆದಿದ್ದ. ಇದಾದ ಬಳಿಕ ಅನಿವಾರ್ಯ ಕಾರಣದಿಂದ ಒಂದು ತಿಂಗಳು ಕೆಲಸಕ್ಕೆ ಹೋಗಿರಲಿಲ್ಲ. ಇದೇ ಕಾರಣಕ್ಕೆ ಮಾಲೀಕ ಆತನನ್ನು ಬಂಧಿಸಿ ಜೀತಕ್ಕೆ ನೇಮಿಸಿಕೊಂಡಿದ್ದ.

  ಕಾರ್ಮಿಕನ ಕಾಲಿಗೆ 9 ದಿನಗಳಿಂದ ಸರಪಳಿ ಹಾಕಲಾಗಿದ್ದು, ಕೆಲಸ ಮಾಡಿಸಿಕೊಳ್ಳಲಾಗುತ್ತಿತ್ತು. ಈ ವಿಚಾರ ತಿಳಿದ ರಾಮನಗರ ಟೌನ್ ಪೊಲೀಸರು ಸ್ಥಳಕ್ಕೆ ತೆರಳಿ ಆತನನ್ನು ರಕ್ಷಿಸಿದ್ದಾರೆ. ವಸೀಂ ಐದು ತಿಂಗಳ ಹಿಂದೆ ಕಾರ್ಖಾನೆಗೆ ಕೆಲಸಕ್ಕೆ ಸೇರಿಸಿಕೊಂಡಿದ್ದ ಎಂದು ತಿಳಿದು ಬಂದಿದೆ. ಈ ಸಂಬಂಧ ಕಾರ್ಖಾನೆಯ ಮಾಲೀಕ ಸಯ್ಯದ್ ಇಸಾಮ್ ಮತ್ತು ಮೇಲ್ವಿಚಾರಕ ಸಯ್ಯದ್ ಅಮ್ಜದ್ ವಿರುದ್ಧ ಪ್ರಕರಣ ದಾಖಲಾಗಿದೆ.

  ವಾಗಿ ಹಣ ಪಡೆದಿದ್ದಕ್ಕೆ ಆತನ ಕಾಲಿಗೆ ಸರಪಳಿ ಹಾಕಿ ಜೀತಕ್ಕೆ ನೇಮಿಸಿಕೊಂಡ ಅಮಾನವೀಯ ಘಟನೆ ನಡೆದಿದೆ.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss