Thursday, September 19, 2024
spot_img
More

    Latest Posts

    ವೈದ್ಯಲೋಕದಲ್ಲಿ ಅಚ್ಚರಿ: ಮೂರು ತಿಂಗಳ ಮಗುವಿನಲ್ಲಿ ಮೂರು ಶಿಶ್ನಗಳು ಪತ್ತೆ!

    ಬಾಗ್ದಾದ್: ವೈದ್ಯಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ,ಮೂರು ಶಿಶ್ನಗಳೊಂದಿಗೆ ಜನಿಸಿದೆ. ಇರಾಕಿನ ಡುಹೋಕ್‌ ಮೂಲದ ಮಗುವನ್ನು ಶಿಶ್ನದಲ್ಲಿ ತೊಂದರೆ ಕಾಣಿಸಿಕೊಂಡಿದ್ದರಿಂದ ಪೋಷಕರು ಆಸ್ಪತ್ರೆಗೆ ಕರೆತಂದಿದ್ದರು. ಆ ವೇಳೆ ವೈದ್ಯರು ಪರೀಕ್ಷಿಸಲಾಗಿ ಮಗುವಿಗೆ ಇನ್ನೂ ಎರಡು ಶಿಶ್ನಗಳಿರುವುದು ತಿಳಿದು ಬಂದಿದೆ.

    ಗರ್ಭಾವಸ್ಥೆಯಲ್ಲಿ ಮಗು ಯಾವ ಡ್ರಗ್ಸ್ ಗಳನ್ನೂ ಪಡೆಯದಿದ್ದ ಕಾರಣ ಇದೊಂದು ಅಪರೂಪದ ಪ್ರಕರಣವೆಂದು ವೈದ್ಯರು ಹೇಳಿದ್ದಾರೆ. ಅಲ್ಲದೆ ಮಗುವಿನ ಪೋಷಕರ ಕುಟುಂಬದಲ್ಲಿ ಸಹ ಇಂತಹಾ ಪ್ರಕರಣ ನಡೆದ ಉದಾಹರಣೆಗಳಿಲ್ಲ.

    ಇಂಟರ್ನ್ಯಾಷನಲ್ ಜರ್ನಲ್ ಆಫ್ ಸರ್ಜರಿ ಕೇಸ್ ಈ ಬಗ್ಗೆ ಪ್ರಕಟಿಸಿದ್ದು  ಶಕೀರ್ ಸಲೀಮ್ ಜಬಾಲಿ ಮತ್ತು ಅಯಾದ್ ಅಹ್ಮದ್ ಮೊಹಮ್ಮದ್ ಈ ಕುರಿತು ಲೇಖನ ಬರೆದಿದ್ದಾರೆ.”ಟ್ರಿಫಾಲಿಯಾ (ಮೂರು ಶಿಶ್ನಗಳು) ಇದುವರೆಗೂ ಎಲ್ಲಿಯೂ ವರದಿಯಾಗದ ಹೊಸ ಪ್ರಕರಣವಾಗಿದೆ.. ಇದು ಪ್ರತಿ 5-6 ಮಿಲಿಯನ್ ಹೆರಿಗೆಗಳಲ್ಲಿ ಒಂದರಂತೆ ಕಾಣಿಸಿಕೊಳ್ಳುತ್ತದೆ. ನಮ್ಮ ಅರಿವಿನ ಪ್ರಕಾರ ಇದು ಜಗತ್ತಿನಲ್ಲಿ ಇಂತಹಾ ಮೊದಲ ಪ್ರಕರಣವಾಗಿದೆ.”

    ಆದಾಗ್ಯೂ, ಹೆಚ್ಚುವರಿ ಶಿಶ್ನಗಳಲ್ಲಿ ಮೂತ್ರನಾಳಗಳಿಲ್ಲ. ಆದ್ದರಿಂದ ಅವುಗಳನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಲಾಗಿದೆ. ಡೈಲಿ ಮೇಲ್ ಪ್ರಕಾರ, 2015 ರಲ್ಲಿ ಭಾರತದಲ್ಲಿ ಒಬ್ಬ ಬಾಲಕನಲ್ಲಿ ಮೂರು ಶಿಶ್ನಗಳು ಕಂಡುಬಂದಿತ್ತು. ಆದರೆ ಇದನ್ನು ವೈದ್ಯಕೀಯ ಜರ್ನಲ್‌ನಲ್ಲಿ ದಾಖಲಿಸಲಾಗಿಲ್ಲವಾದ್ದರಿಂದ, ಅದನ್ನು ಮೊದಲ ಪ್ರಕರಣ ಎಂದು ದಾಖಲಿಸಿಲ್ಲ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss