Saturday, July 27, 2024
spot_img
More

    Latest Posts

    ಸುರತ್ಕಲ್ : ಮೈಸೂರಿನಿಂದ ಮುರುಡೇಶ್ವರಕ್ಕೆ ರೈಲು – ನವರಾತ್ರಿಯ ಸಂದರ್ಭ ಪ್ರಯಾಣಿಕರ ಸಂಖ್ಯೆ ವೃದ್ಧಿ

    ಸುರತ್ಕಲ್ : ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ಕ್ಷೇತ್ರಗಳಲ್ಲಿ ಒಂದಾದ ಮುರ್ಡೇಶ್ವರಕ್ಕೆ ಅರಮನೆ ನಗರಿ ಮೈಸೂರಿನಿಂದ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರು- ಮಂಗಳೂರು ರೈಲನ್ನು ಮುರ್ಡೇಶ್ವರದವರೆಗೆ ವಿಸ್ತರಿಸಿದ್ದು ಕರಾವಳಿ ಭಾಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸಂತಸ ತಂದಿದೆ. ಇದರಿಂದಾಗಿ ನವರಾತ್ರಿಯ ಸಂದರ್ಭ ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ ಕಂಡಿದೆ.ಜತೆಗೆ ಮಂಗಳೂರು-ಸುರತ್ಕಲ್‌ ನಿಂದ ತೆರಳುವ ಮಂದಿಗೆ ಉಡುಪಿ ಪ್ರಯಾಣಕ್ಕೆ ಹಾಗೂ ಪ್ರವಾಸಿ ಕ್ಷೇತ್ರದ ವೀಕ್ಷಣೆಗೆ ರೈಲಿನ ಸಮಯವೂ ಈಗಿನ ವೇಳಾಪಟ್ಟಿ ಸುಧಾರಣೆ ಆದಲ್ಲಿ ಉಪಯುಕ್ತ ಪ್ರವಾಸಿ ರೈಲು ಎನಿಸಿಕೊಳ್ಳಲಿದೆ. ಬೆಂಗಳೂರಿನಿಂದ ರಾತ್ರಿ 8.15 ಹೊರಟು ಮೈಸೂರಿಗೆ 11.20ಕ್ಕೆ ಮುಟ್ಟಿದರೆ ಇತ್ತ ಮಂಗಳೂರಿಗೆ ಮುಂಜಾನೆ 8.30ಕ್ಕೆ, ಉಡುಪಿಗೆ 10.40ಕ್ಕೆ ತಲುಪುತ್ತದೆ.ವಿವಿಧ ಪ್ರವಾಸಿ ಕ್ಷೇತ್ರಗಳಾದ ಬಾರ್ಕೂರು, ಕೊಲ್ಲೂರು, ಭಟ್ಕಳ ಹಾಗೂ ಮುರ್ಡೇಶ್ವರ ಹೀಗೆ ವಿವಿಧ ಕ್ಷೇತ್ರವನ್ನು ಸಂದರ್ಶಿಸಲು ಈ ರೈಲು ಅನುಕೂಲ ಕಲ್ಪಿಸುತ್ತದೆ. ದಿನದ ಮಟ್ಟಿಗೆ ಪಿಕ್‌ನಿಕ್‌ಗೆ ತೆರಳುವ ತಂಡ ಇಲ್ಲವೇ ಕುಟುಂಬ ಸಮೇತರಾಗಿ ಹೋಗುವ ಮಂದಿಗೆ ಅತೀ ಕಡಿಮೆ ವೆಚ್ಚ ದಲ್ಲಿಪ್ರವಾಸಿ ಕ್ಷೇತ್ರ ತಲುಪಲು ಸಾಧ್ಯವಾಗುತ್ತದೆ. ಮೈಸೂರು ಮೂಲಕ ಬೆಂಗಳೂರು-ಮಂಗಳೂರು ನಡುವೆ ಸಂಚರಿಸುವ ಎಕ್ಸ್ ಪ್ರೆಸ್ ರೈಲು 16586/585 ಪ್ರತಿದಿನ ಮುರ್ಡೇಶ್ವರವರೆಗೆ ಸಂಚರಿಸುವ ಹಿನ್ನೆಲೆಯಲ್ಲಿ ವೇಳಾಪಟ್ಟಿಯನ್ನು ಈ ರೀತಿ ಮಾಡಲಾಗಿದೆ, ನಂ.16585 ಬೆಂಗಳೂರಿನ ಎಂ ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್‌. ಎಂ.ಎ.ಟಿ.ಬಿ.)ನಿಂದ ರಾತ್ರಿ 8.15ಕ್ಕೆ ಹೊರಡುತ್ತದೆ. ರಾತ್ರಿ 11.30ಕ್ಕೆ ಮೈಸೂರು ತಲುಪುತ್ತದೆ. ಬೆಳಗ್ಗೆ 8.30ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ ತಲುಪುತ್ತದೆ. 9.40ಕ್ಕೆ ಸೆಂಟ್ರಲ್ ನಿಂದ ಹೊರಡುತ್ತದೆ. ಮಧ್ಯಾಹ್ನ 12.55ಕ್ಕೆ ಮುರ್ಡೇಶ್ವರ ತಲುಪುತ್ತದೆ. ನಂ.16586 ರೈಲು ಮುರ್ಡೇಶ್ವರ ದಿಂದ ಮಧ್ಯಾಹ್ನ 2.10ಕ್ಕೆಹೊರಡುತ್ತದೆ. ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ ಸಂಜೆ 6.25ಕ್ಕೆ ಆಗಮಿಸುತ್ತದೆ. ಮೈಸೂರಿಗೆ ಮುಂಜಾನೆ 3.25ಕ್ಕೆ ತಲುಪಿದರೆ ಬೆಂಗಳೂರಿಗೆ ಬೆಳಗ್ಗೆ 7.15ಕ್ಕೆ ತಲುಪುತ್ತದೆ. ಬೆಂಗಳೂರು- ಮೈಸೂರು- ಮುರ್ಡೇಶ್ವರ ನಡುವೆ ರೈಲು ಸಂಪರ್ಕ ಆಗಿರುವುದು ಕರಾವಳಿ ಕ್ಷೇತ್ರ ದರ್ಶನಕ್ಕೆ ಉಪಯುಕ್ತವಾಗಿದೆ. ಮುಂದಿನ ದಿನದಲ್ಲಿ ಈ ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಹೆಚ್ಚಳಾವುದರಲ್ಲಿ ಸಂಶಯವಿಲ್ಲ ಕೊಂಕಣ ರೈಲ್ವೆ ಪಿ ಆರ್ ಓ – ಸುಧಾ ಕೃಷ್ಣಮೂರ್ತಿ ಹೇಳಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss