Thursday, April 25, 2024
spot_img
More

    Latest Posts

    ವಾಮದಪದವು: ಸಮುದಾಯ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಪೌಷ್ಟಿಕ ಆಹಾರ ಕಿಟ್ ವಿತರಣೆ

    2025ಕ್ಕೆ ಭಾರತವನ್ನು ಕ್ಷಯ ರೋಗ ಮುಕ್ತಗೊಳಿಸಬೇಕು ಎನ್ನುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮಹತ್ಟದ ಹೆಜ್ಜೆಯಿಟ್ಟಿದ್ದು ಸೇವಾ ಸಂಸ್ಥೆಗಳು ಕ್ಷಯ ರೋಗಿಗಳನ್ನು ದತ್ತು ಪಡೆದು ಅರೈಕೆ ಮಾಡುವಂತೆ ನೀಡಿರುವ ಕರೆಯಂತೆ ಕ್ಷಯ ರೋಗಿಗಳಿಗೆ ವರದಾನವಾಗಿರುವ ನಿಕ್ಷಯ ಮಿತ್ರ ಯೋಜನೆಯಂಗವಾಗಿ ಸಮುದಾಯ ಆರೋಗ್ಯ ಕೇಂದ್ರ ವಾಮದಪದವಿನ ಕ್ಷಯ ರೋಗಿಗಳಿಗೆ ತುಳುನಾಡ ರಕ್ಷಣಾ ವೇದಿಕೆ ವಾಮದಪದವು ಮತ್ತು ರೋಟರಿ ಕ್ಲಬ್ ಸಿದ್ದಕಟ್ಟೆಯ ಸದಸ್ಯರಿಂದ ಸಮುದಾಯ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಪೌಷ್ಟಿಕ ಆಹಾರ ಕಿಟ್ ವಿತರಿಸಲಾಯಿತು.


    ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕ್ಷಯ ರೋಗ ನಿರ್ವಾಹಣ ಅಧಿಕಾರಿ ಡಾ| ಬದ್ರುದ್ದೀನ್ˌವಾಮದಪದವು ಆರೋಗ್ಯ ಅಧಿಕಾರಿ ಡಾ|ಉಮೇಶ್ ಅಡ್ಯತ್ಯಾಯˌತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷರಾದ ದೇವಿ ಪ್ರಸಾದ್ ಶೆಟ್ಟಿ ˌರೋಟರಿ ಕ್ಲಬ್ ಅದ್ಯಕ್ಷರಾದ ಗಣೇಶ್ ಶೆಟ್ಟಿˌ ತು.ರ.ವೇ _ಪಧಾದಿಕಾರಿಗಳಾದ ಹರೀಶ್ ಪೂಜಾರಿˌ ಸೌಕತ್ ಅಲಿˌ ದಿನೇಶ್ ನಾಯಕ್ˌ ಕುಶಲ ಶೆಟ್ಟಿˌ ವಾರಿಜ ಪೂಜಾರಿˌ ಪ್ರಮೀಳಾ ಪೂಜಾರಿ ಮತ್ತು ರೋಟಾರಿ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು ..ವಾಮದಪದವೂ ವಲಯದ 9 ಕ್ಷಯ ರೋಗಿಗಳನ್ನು ರೋಟರಿ ಕ್ಲಬ್ ಮತ್ತು ತುಳುನಾಡ ರಕ್ಷಣಾ ವೇದಿಕೆ 6 ತಿಂಗಳ ಆಹಾರ ಪೊರೈಕೆಗಾಗಿ ದತ್ತು ಪಡೆಯಲಾಯಿತು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss