ಮಂಗಳೂರು: ನೃತ್ಯ ಸುಧಾ (ರಿ) ಭರತನಾಟ್ಯ ಹಾಗೂ ಸಂಗೀತ ತರಬೇತಿ ಕೇಂದ್ರ ಮಂಗಳೂರು – ಉಡುಪಿ ಪ್ರಸ್ತುತ ಪಡಿಸುವ ನೃತ್ಯೋತ್ಕರ್ಷ -2023 ಏಪ್ರಿಲ್ 21 ರಂದು ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು.

ಅಥಿತಿಅಭ್ಯಾಗತರುಗಳಿಂದ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನಡೆಯಿತು.

ನ್ರತ್ಯ ಸುಧಾ ಸಂಸ್ಥೆಯ ಕಾರ್ಯದರ್ಶಿ , ನ್ರತ್ಯ ನಿರ್ದೇಶಕರಾದ ಸೌಮ್ಯ ಸುಧೀಂದ್ರ ರಾವ್ ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ ವಿದುಷಿ ಸಿಂಚನ ಎಚ್ ಎಸ್, ಡಾ.ವಿದುಷಿ ಶ್ರೀರಕ್ಷಾ ರಮೇಶ್ ರಾವ್, ವಿದುಷಿ ಶ್ರೀ ಲಕ್ಷ್ಮೀ ಭಟ್, ವಿದುಷಿ ಭೂಮಿಕಾ ಶೆಟ್ಟಿ, ವಿದುಷಿ ದೀಪ್ತಿ ದೇವಾಡಿಗ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಸಂಸ್ಥೆಯ ಕಲಾವಿದರಿಂದ ಏಕವ್ಯಕ್ತಿ ಪ್ರದರ್ಶನ, ಮತ್ತು ಸಮೂಹ ನ್ರತ್ಯ ಪ್ರದರ್ಶನ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಆತಿಥಿಗಳಾಗಿ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪು,ಶ್ರೀಮತಿ ಗೀತಾ ಸರಳಾಯ,ವಿದ್ವಾನ್ ಕೃಷ್ಣಾಚಾರ್ಯ ಎಚ್ , ಭಾಗವಹಿಸಿ ಸಂಸ್ಥೆಯ ಬಗ್ಗೆ ಸ್ಪೂರ್ತಿಯ ಮಾತುಗಳನ್ನಾಡಿದರು.

ಸಂಸ್ಥೆಯ ಅದ್ಯಕ್ಷರಾದ ಡಾ. ಸುಧೀಂದ್ರ ರಾವ್ ಅಥಿತಿ ಅಭ್ಯಾಗತರುಗಳಿಗೆ ಗೌರವ ಸ್ಮರಣಿಕೆ ನೀಡಿ ಗೌರವಿಸಿದರು.
ಸೌಮ್ಯ ಸುಧೀಂದ್ರ ರಾವ್ ರವರು ಕುಟುಂಬದ ಸದಸ್ಯರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಮೆರುಗು ನೀಡಿದರು. ನ್ರತ್ಯ ಸುಧಾ ಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

