Wednesday, February 21, 2024
spot_img
More

  Latest Posts

  ಖ್ಯಾತ ನಟ ನಿತೇಶ್ ಪಾಂಡೆ ಹೃದಯಾಘಾತದಿಂದ ನಿಧನ

  ಮುಂಬೈ: ಕಿರುತೆರೆ ರಂಗದಲ್ಲಿ ಸಾಲು ಸಾಲು ಸಾವುಗಳು ಸಂಭವಿಸುತ್ತಿದ್ದು, ಇಂದು ಬೆಳಿಗ್ಗೆ ಕಿರುತೆರೆ ನಟಿಯೊಬ್ಬಳು ಕಾರು ಅಪಘಾತದಲ್ಲಿ ಸಾವನಪ್ಪಿದ್ದ ಸುದ್ದಿಯ ಬೆನ್ನಲ್ಲೇ ಇದೀಗ ಮತ್ತೋರ್ವ ಖ್ಯಾತ ನಟ ಹೃದಯಾಘಾತದಿಂದ ನಿಧನರಾಗಿದ್ದಾರೆ.

  ಟಿವಿ ಲೋಕದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದ ನಿತೇಶ್ ಪಾಂಡೆ (51) ಮೃತರು. ಉತ್ತರಾಖಂಡದ ಅಲ್ಮೋರಾ ಕುಮಾನ್ ಮೂಲದವರಾದ ಅವರು ಕಳೆದ 25 ವರ್ಷದಿಂದ ಕಿರುತೆರೆಯಲ್ಲಿ ಕೆಲಸ ಮಾಡಿಕೊಂಡಿದ್ದರು.

  1990 ರಲ್ಲಿ ರಂಗಭೂಮಿಯಲ್ಲಿ ನಟಿಸುವ ಮೂಲಕ ನಟನಾ ಲೋಕಕ್ಕೆ ಕಾಲಿಟ್ಟ ಅವರು 1995 ರಲ್ಲಿ ಬಂದ ʼತೇಜಸ್‌ʼ ಸಿನಿಮಾದಲ್ಲಿ ಪತ್ತೇದಾರಿ ಪಾತ್ರವೊಂದರಲ್ಲಿ ನಟಿಸಿ ಗಮನ ಸೆಳೆದಿದ್ದರು. ಆ ಬಳಿಕ ಕಿರುತೆರೆಯಲ್ಲಿ ಸಾಲು ಸಾಲಾಗಿ ಧಾರಾವಾಹಿಗಳಲ್ಲಿ ನಟಿಸಿದರು. ʼಮಂಜಿಲೀನ್ ಅಪ್ನಿ ಅಪ್ನಿʼ, ʼಅಸ್ತಿತ್ವ ಏಕ್ ಪ್ರೇಮ್ ಕಹಾನಿʼ, ʼಸಾಯಾ, ಜುಸ್ತಜೂʼ ದುರ್ಗೇಶ್ ನಂದಿನಿ ಮುಂತಾದ ಸೀರಿಯಲ್‌ ಗಳಲ್ಲಿ ನಟಿಸಿದ್ದಾರೆ.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss