ನವದೆಹಲಿ: ಮಾನವ ಕಳ್ಳಸಾಗಣೆ ಪ್ರಕರಣಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬುಧವಾರ 10 ರಾಜ್ಯಗಳಲ್ಲಿ ಶೋಧ ನಡೆಸಿದೆ. ತ್ರಿಪುರಾ, ಅಸ್ಸಾಂ, ಪಶ್ಚಿಮ ಬಂಗಾಳ, ಕರ್ನಾಟಕ, ತಮಿಳುನಾಡು, ತೆಲಂಗಾಣ, ಹರಿಯಾಣ, ಪುದುಚೇರಿ, ರಾಜಸ್ಥಾನ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಲ್ಲಿ ಎನ್‌ಐಎ ಶೋಧ ನಡೆಸುತ್ತಿದೆ.
ರಾಜ್ಯ ಪೊಲೀಸ್ ಪಡೆಗಳೊಂದಿಗೆ ನಿಕಟ ಸಮನ್ವಯದೊಂದಿಗೆ ಈ ಪ್ರಕರಣಗಳಿಗೆ ಸಂಬಂಧಿಸಿದ ಶಂಕಿತರ ವಸತಿ ಆವರಣ ಮತ್ತು ಇತರ ಸ್ಥಳಗಳಲ್ಲಿ ದಾಳಿ ನಡೆಯುತ್ತಿದೆ.
ಅಪರಾಧದಲ್ಲಿ ಭಾಗಿಯಾಗಿರುವ ಶಂಕಿತರ ವಿರುದ್ಧ ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಎನ್‌ಐಎಯ ಅನೇಕ ತಂಡಗಳು ಮಂಗಳವಾರ ಮುಂಜಾನೆ 10 ರಾಜ್ಯಗಳಲ್ಲಿ ದಾಳಿಗಳನ್ನು ಪ್ರಾರಂಭಿಸಿದ್ದಾವೆ ಎನ್ನಲಾಗಿದೆ. ಎನ್‌ಐಎ ಮೂಲಗಳ ಪ್ರಕಾರ, ಅಂತರರಾಷ್ಟ್ರೀಯ ಸಂಪರ್ಕ ಹೊಂದಿರುವ ಮಾನವ ಕಳ್ಳಸಾಗಣೆದಾರರ ದಂಧೆಯನ್ನು ಪತ್ತೆಹಚ್ಚಲು ಈ 10 ರಾಜ್ಯಗಳಲ್ಲಿ ನಾಲ್ಕು ಡಜನ್ಗೂ ಹೆಚ್ಚು ಸ್ಥಳಗಳನ್ನು ಎನ್‌ಐಎ ಅಧಿಕಾರಿಗಳು ಶೋಧಿಸುತ್ತಿದ್ದಾರೆ. ಶ್ರೀಲಂಕಾದ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬೆಂಗಳೂರಿನ ಎನ್‌ಐಎ ತಂಡ ಕಳೆದ ತಿಂಗಳು ಬಂಧಿಸಿತ್ತು. ಆರೋಪಿಯನ್ನು ಇಮ್ರಾನ್ ಖಾನ್ ಎಂದು ಗುರುತಿಸಲಾಗಿದ್ದು, ಇತರ ಸಹ ಆರೋಪಿಗಳೊಂದಿಗೆ ಶ್ರೀಲಂಕಾ ಪ್ರಜೆಗಳನ್ನು ಬೆಂಗಳೂರು ಮತ್ತು ಮಂಗಳೂರಿನ ವಿವಿಧ ಸ್ಥಳಗಳಿಗೆ ಕಳ್ಳಸಾಗಣೆ ಮಾಡಿದ್ದಾನೆ.
ಫೆಡರಲ್ ಏಜೆನ್ಸಿಯು ತನ್ನ ಅಂತರರಾಷ್ಟ್ರೀಯ ಆಯಾಮಗಳನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯ ಪೊಲೀಸರಿಂದ ಪ್ರಕರಣವನ್ನು ವಹಿಸಿಕೊಂಡಿತ್ತು. ಈ ಪ್ರಕರಣದ ಐವರು ಭಾರತೀಯ ಆರೋಪಿಗಳಾದ ದಿನಕರನ್ ಅಲಿಯಾಸ್ ಅಯ್ಯ, ಕಾಶಿ ವಿಶ್ವನಾಥನ್, ರಸೂಲ್, ಸತಮ್ ಉಶೇನ್ ಮತ್ತು ಅಬ್ದುಲ್ ಮುಹೀತು ವಿರುದ್ಧ ಎನ್‌ಐಎ 2021 ರ ಅಕ್ಟೋಬರ್ನಲ್ಲಿ ಪ್ರಾಥಮಿಕ ಚಾರ್ಜ್ಶೀಟ್ ಸಲ್ಲಿಸಿತ್ತು. ಈ ವರ್ಷದ ಅಕ್ಟೋಬರ್ ಅಂತ್ಯದ ವೇಳೆಗೆ, ಒಟ್ಟು 13 ಶಂಕಿತರನ್ನು ಎನ್‌ಐಎ ಈ ಪ್ರಕರಣದಲ್ಲಿ ಹೆಸರಿಸಿದೆ.