ಉಳ್ಳಾಲ: ಕೆ. ವಿವೇಕಾನಂದ ರಾವ್ ಮಾಲಕತ್ವದ ನ್ಯೂ ವಿಜಿತ್ ಫಾರ್ಮಾ ತೊಕ್ಕೊಟ್ಟುನಲ್ಲಿ ಮಂಗಳವಾರ (ಜು.18) ದಂದು ಶುಭಾರಂಭಗೊಂಡಿತು.

ತೊಕ್ಕೊಟ್ಟು ಒಳಪೇಟೆ ಮಹಾಗಣಪತಿ ದೇವಸ್ಥಾನದ ಬಳಿ ನೂತನವಾಗಿ ಶುಭಾರಂಭಗೊಂಡ ನ್ಯೂ ವಿಜಿತ್ ಫಾರ್ಮಾವನ್ನು ಪೂಜ ವಿಧಿ ವಿಧಾನಗಳೊಂದಿಗೆ ಪ್ರಾರಂಭಿಸಿ, ವಿಜಿತ್ ಜೆ ರಾವ್ ದೀಪ ಬೆಳಗಿಸುವುದರೊಂದಿಗೆ ಉದ್ಘಾಟನೆಗೊಂಡಿತು.
ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷರಾದ ಯೋಗಿಶ್ ಶೆಟ್ಟಿ ಜಪ್ಪು ಭಾಗವಹಿಸಿ ಸಂಸ್ಥೆಗೆ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಪ್ರಮೋದ್ ಕೇಟಿ ಸುವರ್ಣ,ಕೆಪಿ ಎಂಟರ್ ಪ್ರೈಸಸ್ ಮಾಲಕ ಕೃಷ್ಣ ಪ್ರಸಾದ್, ಹೆಲ್ತ್ ಕೇರ್ ಫಾರ್ಮಾದ ಮಾಲಕ ಸುರೇಶ್ ಉಳ್ಳಾಲ್, ರೋಶನ್, ದಿನೇಶ್ ತಲಪಾಡಿ, ಎಸ್.ಎಜೆ ಮಾಲಕ ಜ್ಞಾನೇಶ್, ಲತಾದೇವಿ ರಾವ್, ಜಯ ಕಾಪಿಕಾಡು, ಪ್ರಶಾಂತ್ ಭಟ್ ಕಡಬ, ಆಶೀತಾ ರಾವ್,ಸತೀಶ್ ಉಳ್ಳಾಲ್, ಮತ್ತಿತರರು ಉಪಸ್ಥಿತರಿದ್ದರು.
