Thursday, October 31, 2024
spot_img
More

    Latest Posts

    ಅಕ್ಟೋಬರ್ 15 ತುಳುನಾಡ ರಕ್ಷಣಾ ವೇದಿಕೆ (ರಿ) ಉಡುಪಿ ಜಿಲ್ಲಾ ನೂತನ ಕಛೇರಿ ಉದ್ಘಾಟನಾ ಸಮಾರಂಭ

    ಸಾಮಾಜಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದು ಕಳೆದ 15 ವರ್ಷಗಳಿಂದ ತುಳುನಾಡಿನ ನೆಲ, ಜಲ, ಆಚಾರ, ವಿಚಾರ, ಸಂಸ್ಕೃತಿ, ಭಾಷೆ ಸಂಬಂಧಿಸಿದಂತೆ ಜನಜಾಗೃತಿ, ವಿಚಾರಸಂಕಿರಣ, ಅಭಿವೃದ್ಧಿ ಮತ್ತು ಐಕ್ಯತೆ ಸಹಿತ ಹತ್ತು ಹಲವು ಕಾರ್ಯಕ್ರಮಗಳ ನಡೆಸುತ್ತಾ ತು.ರ.ವೇ. ಜನರ ಪ್ರೀತಿಗೆ ಪಾತ್ರವಾಗಿದೆ. ದೇಶ, ವಿದೇಶಿಗಳಲ್ಲಿ ಹಲವಾರು ಘಟಕಗಳನ್ನು ಹೊಂದಿ ಸಾವಿರಾರು ಪದಾಧಿಕಾರಿಗಳು ಹಾಗೂ ಸದಸ್ಯರನ್ನು ಹೊಂದಿದೆ.

    ರಕ್ತದಾನ ಶಿಬಿರ,ಆರೋಗ್ಯ ಶಿಬಿರ, ಮಂಗಳೂರಿನಲ್ಲಿ 3 ದಿನಗಳ (ತೌಳವ ಉಚ್ಚಯ) ವಿಶ್ವ ತುಳು ಸಮ್ಮೇಳನ ಆಯೋಜನೆ, 1837 ರ ತುಳುನಾಡ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದ ಸಮರ ಸೇನಾನಿಗಳನ್ನು ನೆನಪಿಸುವ ಸಲುವಾಗಿ ಸತತ 12 ವರ್ಷಗಳಿಂದ ಮಂಗಳೂರಿನ ಬಾವುಟಗುಡ್ಡೆಯಲ್ಲಿ ತುಳು ಧ್ವಜಾರೋಹಣ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಸ್ಮಾರಕ ಸ್ಥಾಪನೆ, ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ
    ಸತತ 62 ದಿನಗಳ ಕಾಲ ನಿರಂತರವಾಗಿ ಮಂಗಳೂರಿನ ಹಲವು ಪ್ರದೇಶಗಳಲ್ಲಿ ಕೂಲಿ ಕಾರ್ಮಿಕರಿಗೆ ಹಾಗೂ
    ನಿರ್ಗತಿಕರಿಗೆ ಅನ್ನದಾನದಂತಹ ನೂರಾರು ಜನಪ್ರಿಯ ಕಾರ್ಯಕ್ರಮಗಳ ಮೂಲಕ ತುಳುನಾಡ ರಕ್ಷಣಾ ವೇದಿಕೆಯು ಜನರ ನಾಡಿಮಿಡಿತವಾಗಿದೆ.
    ತುಳುನಾಡ ರಕ್ಷಣಾ ವೇದಿಕೆಯು ಸ್ಥಾಪಕ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪುರವರ ನೇತೃತ್ವದಲ್ಲಿ ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಿದ್ದು ಇದೀಗ ಉಡುಪಿ ಜಿಲ್ಲೆಗೆ ಹೊಸ ಸಮರ್ಥ ಪದಾಧಿಕಾರಿಗಳ ತಂಡವನ್ನು ಹೊಂದಿದ್ದು ಈಗಾಗಲೇ ಉತ್ತಮವಾಗಿ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದು ಜನರಿಗೆ ಇನ್ನಷ್ಟು ಹೆಚ್ಚಿನ ಅನುಕೂಲಕರ ಸೇವೆ ಸಲ್ಲಿಸುವ ದೃಷ್ಟಿಯಿಂದ ಉಡುಪಿ ಜಿಲ್ಲಾ ಕಚೇರಿಯನ್ನು ಪ್ರಾರಂಭಿಸಲು ನಿರ್ಣಯಿಸಿದ್ದು ದಿನಾಂಕ 15-10- 2023 ರಂದು ಬೆಳ್ಳಗೆ 10.00 ಕ್ಕೆ ಸರಿಯಾಗಿ ಉದ್ಘಾಟನಾ ಸಮಾರಂಭ ನಡೆಯಲಿದೆ.
    ಈ ಕಾರ್ಯಕ್ರಮಕ್ಕೆ ರಾಜ್ಯ , ಜಿಲ್ಲಾ ಮಟ್ಟದ ಸಾಮಾಜಿಕ ಮುಖಂಡರು, ಸರ್ಕಾರದ ಅಧಿಕಾರಿಗಳು,ಗಣ್ಯ ವ್ಯಕ್ತಿಗಳು ಆಗಮಿಸಲಿರುವರು. ತಾವು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಪೂರ್ಣ ಸಹಾಯ, ಸಹಕಾರ ನೀಡಿ ಯಶಸ್ಸುಗೊಳಿಸಬೇಕೆಂದು ಉಡುಪಿ ಜಿಲ್ಲಾ ವೀಕ್ಷಕರಾದ ಫ್ರ್ಯಾಂಕಿ ಡಿಸೋಜ, ಉಡುಪಿ ತಾಲೂಕು ಅದ್ಯಕ್ಷರಾದ ಕೃಷ್ಣ ಕುಮಾರ್, ಗೌರವ ಅದ್ಯಕ್ಷರಾದ ರವಿ ಆಚಾರ್ಯ, ಗೌರವ ಸಲಹೆಗಾರರಾದ ಸುಧಕರ್ ಅಮೀನ್, ಉಡುಪಿ ತಾಲೂಕು ಮಹಿಳಾ ಅದ್ಯಕ್ಷೆ ಶೋಭಾ ಪಾಂಗಳ ಕಾಪು ಮಹಿಳಾ ಅದ್ಯಕ್ಷರಾದ ಅನುಸೂಯ ಶೆಟ್ಟಿ, ಯುವ ಘಟಕ ಅದ್ಯಕ್ಷ ರಾಹುಲ್ ಪೂಜಾರಿ ಮಹಿಳಾ ಪ್ರಧಾನ ಕಾರ್ಯದರ್ಶಿ ನಾಗಲಕ್ಷ್ಮಿ ಹಾಗೂ ಜಿಲ್ಲಾ ಘಟಕದ ವಿವಿಧ ಪದಾಧಿಕಾರಿಗಳು ಜಂಟಿ ಹೇಳಿಕೆಯ ಮೂಲಕ ಸರ್ವರನ್ನು ಆಹ್ವಾನಿಸಿರುತ್ತಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss