Tuesday, September 17, 2024
spot_img
More

    Latest Posts

    ನೆಲ್ಯಾಡಿ: ಹೊಸಮಜಲು ಎಂಬಲ್ಲಿ ಕೆಲವು ವರ್ಷಗಳಿಂದ ಅಕ್ರಮವಾಗಿ ಕಾರ್ಯಚರಿಸುತ್ತಿದ್ದ ಬೃಹತ್ ಫರ್ನಿಶಿಂಗ್ ಆಯಿಲ್ ಮಿಕ್ಸಿಂಗ್ ಅಡ್ಡೆಗೆ ಪೊಲೀಸರ ದಾಳಿ : ನಾಲ್ವರ ಬಂಧನ

    ನೆಲ್ಯಾಡಿ: ಹೊಸಮಜಲು ಎಂಬಲ್ಲಿ ಕೆಲವು ವರ್ಷಗಳಿಂದ ಅಕ್ರಮವಾಗಿ ಕಾರ್ಯಚರಿಸುತ್ತಿದ್ದ ಬೃಹತ್ ಫರ್ನಿಶಿಂಗ್ ಆಯಿಲ್ ಮಿಕ್ಸಿಂಗ್ ಅಡ್ಡೆಗೆ ಪುತ್ತೂರು ಡಿವೈಎಸ್ಪಿ ಗಾನಾ.ಪಿ ಕುಮಾರ್ ಅವರ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿ ಎರಡು ಟ್ಯಾಂಕರ್, ಮಿಕ್ಸಿಂಗ್ ಗೆ ಬಳಸುತ್ತಿದ್ದ ಉಪಕರಣಗಳು ಸೇರಿದಂತೆ ಸ್ವತ್ತುಗಳನ್ನು ವಶಪಡಿಸಿಕೊಂಡು,ಪ್ರಾಥಮಿರ ಮಾಹಿತಿ ಪ್ರಕಾರ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

    ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಹೊಸಮಜಲು ಸೇತುವೆಯ ಬಳಿ ಕೆಲವು ವರ್ಷಗಳಿಂದ ಈ ಬೃಹತ್ ಆಯಿಲ್ ಮಿಕ್ಸಿಂಗ್ ದಂದೆ ಅವ್ಯಾಹತವಾಗಿ ನಡೆಯುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಈ ಹಿಂದೆ ಹಲವಾರು ಬಾರಿ ಪೊಲೀಸರು, ಮಾಧ್ಯಮ ಪ್ರತಿನಿಧಿಗಳು ಈ ಅಕ್ರಮ ನಡೆಯುತ್ತಿರುವ ಅಡ್ಡೆಗೆ ದಾಳಿ ನಡೆಸಲು ಮುಂದಾಗಿದ್ದರೂ ಯಾವುದಾದರೂ ಮೂಲಗಳಿಂದ ಮಾಹಿತಿ ಸೋರಿಕೆಯಾಗಿ ಆ ಪ್ರಯತ್ನಗಳು ವಿಫಲವಾಗಿತ್ತು.ಆದರೆ ಇದೀಗ ಖಚಿತ ಮಾಹಿತಿ ಆಧರಿಸಿ ಪುತ್ತೂರು ಡಿವೈಎಸ್ಪಿ ಗಾನಾ ಪಿ.ಕುಮಾರ್ ನೇತೃತ್ವದ ಪೊಲೀಸರ ತಂಡವು ಈ ಅಡ್ಡೆಗೆ ದಾಳಿ ಮಾಡಿ ಅಕ್ರಮವನ್ನು ಪತ್ತೆಹಚ್ಚಿದೆ.ಪೊಲೀಸರು ದಾಳಿ ಮಾಡುವ ಸಮಯದಲ್ಲಿ ಇಲ್ಲಿ ಎರಡು ಟ್ಯಾಂಕರ್ ಗಳಲ್ಲಿ ಫರ್ನಿಶಿಂಗ್ ಆಯಿಲ್ ಮಿಕ್ಸಿಂಗ್ ದಂದೆ ನಡೆಯುತ್ತಿತ್ತು.

    ದಾಳಿ ಮಾಡಿದ ಸಮಯದಲ್ಲಿ ಸುಮಾರು 36ಸಾವಿರ ಲೀಟರ್ ನಷ್ಟು ಫರ್ನಿಶಿಂಗ್ ಆಯಿಲ್ ಪತ್ತೆಯಾಗಿದೆ. ಭೂಮಿಯ ಅಡಿಯಲ್ಲಿ ಎರಡು ಬೃಹತ್ ಟ್ಯಾಂಕ್ ಗಳು, ವಿದ್ಯುತ್ ಹಾಗೂ ಡೀಸೆಲ್‌ ಚಾಲಿತ ಪಂಪುಗಳು ಪತ್ತೆಯಾಗಿದೆ. ವಿಪರ್ಯಾಸವೆಂದರೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಯಾವುದೇ ಹೆದರಿಕೆ ಇಲ್ಲದೇ ರಾಜಾರೋಷವಾಗಿ ಈ ಧಂದೆ ನಡೆಯುತ್ತಿತ್ತು.

    ಘಟನಾ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಋಷಿಕೇಶ್ ಸೋನಾವಣೆ, ಎಎಸ್ಪಿ ವಿ.ಬಿ ಭಾಸ್ಕರ್,ಡಿವೈಎಸ್ಪಿ ಗಾನಾ ಪಿ ಕುಮಾರ್, ಕಡಬ ತಹಶಿಲ್ದಾರ್ ಅನಂತಶಂಕರ್,ಗಣಿ ಮತ್ತು ಭೂವಿಜ್ಞಾನ ಅಧಿಕಾರಿ ಸುಷ್ಮಾ, ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ, ಪಿಯಸ್ಐ ಕುಮಾರ್ ಕೆ.ಕಾಂಬ್ಲೇ, ಎಎಸ್ಐ ಚೋಮ ಸೇರಿದಂತೆ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು, ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಅಕ್ರಮ ದಂದೆಯಲ್ಲಿ ಉನ್ನತ ಮಟ್ಟದಲ್ಲಿ ಪ್ರಾಬಲ್ಯವಿರುವ ವ್ಯಕ್ತಿಗಳು ಭಾಗಿಯಾಗಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿಬಂದಿದೆ.ಈ ಆಕ್ರಮ ವ್ಯವಹಾರದಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ ಎಂಬುದರ ಕುರಿತಾಗಿ ಪೊಲೀಸ್ ಅಧಿಕಾರಿಗಳು ಉನ್ನತ ಮಟ್ಟದ ತನಿಖೆ ನಡೆಸುತ್ತಿದ್ದಾರೆ.ಹೆಚ್ಚಿನ ಮಾಹಿತಿಗಳು ಲಭ್ಯವಾಗಬೇಕಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss