Tuesday, July 16, 2024
spot_img
More

  Latest Posts

  ಮಂಗಳೂರು ಧಕ್ಕೆ ಮೀನು ಮಾರಾಟ ಮತ್ತು ಕಮಿಷನ್ ಏಜೆಂಟ್ ಸಂಘದ ಅಧ್ಯಕ್ಷ ಸಿ.ಎಂ. ಮುಸ್ತಾಫಾ ನಿಧನ

  ಮಂಗಳೂರು ಸೆಂಟ್ರಲ್ ಮುಸ್ಲಿಮ್ ಕಮಿಟಿ,ಮುಸ್ಲಿಮ್ ಒಕ್ಕೂಟ ಪದಾಧಿಕಾರಿ, ಮಂಗಳೂರು ಧಕ್ಕೆ ಮೀನು ಮಾರಾಟ ಮತ್ತು ಕಮಿಷನ್ ಏಜೆಂಟ್ ಸಂಘದ ಅಧ್ಯಕ್ಷ,ದ.ಕ.ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಆದ, ಸಮಾಜ ಸೇವಕ ಮತ್ತು ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತ ಮತ್ತು ನನ್ನ ಆತ್ಮೀಯ ಮಿತ್ರ ಸಿ.ಎಂ. ಮುಸ್ತಾಫಾ ರವರು ಇಂದು ಬೆಳಿಗ್ಗೆ 4.00 ಗಂಟೆಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಹೃದಯ ಸಂಬಂಧಿ ಚಿಕಿತ್ಸೆಗಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಮೃತರ ಆತ್ಮಕ್ಕೆ ಶಾಂತಿ ಸಿಗಲು ಪ್ರಾರ್ಥನೆ ಮಾಡಬೇಕಾಗಿ ವಿನಂತಿ. ಹಲವು ಸಮಯಗಳ ಹಿಂದೆ ನಾವು ಇಬ್ಬರೂ ಒಂದೇ ರಾಜಕೀಯ ಪಕ್ಷದಲ್ಲಿ ದುಡಿದವರಾಗಿ ಉತ್ತಮ ಒಡನಾಟ ಹೊಂದಿದ್ದು.
  ಉಡುಪಿ ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೌರ್ಜನ್ಯವಾದಾಗ ಸರಕಾರಿ ಅಧಿಕಾರಿಗಳನ್ನು ಭೇಟಿ ನೀಡಿ ಅಥವಾ ಸಚಿವರುಗಳನ್ನು ಭೇಟಿ ನೀಡಿ ಅಥವಾ ಮುಖ್ಯಮಂತ್ರಿಗಳನ್ನ ಭೇಟಿ ನೀಡಿ ನೇರವಾಗಿ ತಮ್ಮ ಅಹವಾಲನ್ನು ನೀಡುತ್ತಿದ್ದ ನಾಯಕರರಲ್ಲಿ ಒಬ್ಬರಾಗಿದ್ದರು. ಹಲವಾರು ಬಾರಿ ಈ ರೀತಿಯ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಲು ಕರೆಯುತ್ತಿದ್ದರು.
  ಸಮಾಜದ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ಇವರು ಸಮುದಾಯ ಪ್ರೇಮಿಯಾಗಿದ್ದರು. ಅವರ ಕುಟುಂಬಕ್ಕೆ ಅವರನ್ನು ಕಳೆದುಕೊಂಡ ನೋವನ್ನು ಭರಿಸುವ ಶಕ್ತಿನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ . ಮೃತರ ನಿಧನಕ್ಕೆ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷರಾದ ಯೋಗಿಶ್ ಶೆಟ್ಟಿ ಜಪ್ಪುರವರು ತೀವ್ರ ಸಂತಾಪ ವ್ಯಕ್ತಪಡಿಸಿದರು.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss