ಹಣ ಡಬ್ಬಲ್ ಆಗುತ್ತೆ ಎಂದು ದಲ್ಲಾಳಿಗಳ ಮಾತು ನಂಬಿ ಆ್ಯಪ್ ಒಂದಕ್ಕೆ ಹೂಡಿಕೆ ಮಾಡಿ ಸುಮಾರು 21 ಲಕ್ಷ ರೂಪಾಯಿ ಕಳಕೊಂಡಿದ್ದ ಮಹಿಳೆಯೊಬ್ಬರು ಸಂಗಬೆಟ್ಟು ಸಮೀಪದ ಪುಚ್ಚಮೊಗರು ಎಂಬಲ್ಲಿ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಂಟ್ವಾಳ, ಡಿ.24: ಹಣ ಡಬ್ಬಲ್ ಆಗುತ್ತೆ ಎಂದು ದಲ್ಲಾಳಿಗಳ ಮಾತು ನಂಬಿ ಆ್ಯಪ್ ಒಂದಕ್ಕೆ ಹೂಡಿಕೆ ಮಾಡಿ ಸುಮಾರು 21 ಲಕ್ಷ ರೂಪಾಯಿ ಕಳಕೊಂಡಿದ್ದ ಮಹಿಳೆಯೊಬ್ಬರು ಸಂಗಬೆಟ್ಟು ಸಮೀಪದ ಪುಚ್ಚಮೊಗರು ಎಂಬಲ್ಲಿ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕುಕ್ಕಿಪಾಡಿ ಗ್ರಾಮದ ಏರೋಡಿಯ ಜಾನ್ ಸಂತೋಷ್ ಡಿಸೋಜ ಎಂಬವರ ಪತ್ನಿ ವೀಟಾ ಮರಿನಾ ಡಿಸೋಜ (32) ಮೃತರು. ವೀಟಾ ಮರೀನಾ ಅವರು ಈ ಹಿಂದೆ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು ಬಳಿಕ ಹುದ್ದೆ ತೊರೆದು ವಿಮಾ ಪ್ರತಿನಿಧಿಯಾಗಿ ಕೆಲಸ ಮಾಡಿಕೊಂಡಿದ್ದರು. ಈ ನಡುವೆ ಯಾವುದೋ ಮೊಬೈಲ್ ಆ್ಯಪ್ ನಲ್ಲಿ ಹಣ ಹೂಡಿದರೆ ಡಬಲ್ ಆಗುತ್ತದೆ ಎಂದು ನಂಬಿ, ಸುಮಾರು 21 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡಿದ್ದರು. ಈ ಬಗ್ಗೆ ಅವರು ಬಂಟ್ವಾಳ ಪೊಲೀಸರಿಗೂ ದೂರು ನೀಡಿದ್ದರು.
ಡಿ.23ರ ಶನಿವಾರ ರಾತ್ರಿ 9 ಗಂಟೆಗೆ ಮನೆಯಿಂದ ದ್ವಿಚಕ್ರ ವಾಹನದಲ್ಲಿ ತೆರಳಿದ್ದ ವೀಟಾ ಬಳಿಕ ನಾಪತ್ತೆಯಾಗಿದ್ದರು. ವಿಷಯ ತಿಳಿದು ಸ್ಥಳೀಯರು ಹುಡುಕಾಟ ನಡೆಸಿದ್ದು ಫಲ್ಗುಣಿ ಸೇತುವೆಯಲ್ಲಿ ದ್ವಿಚಕ್ರ ವಾಹನ ಪತ್ತೆಯಾಗಿತ್ತು. ಅಗ್ನಿಶಾಮಕದಳದ ಸಿಬ್ಬಂದಿ ಭಾನುವಾರ ಬೆಳಗ್ಗೆ ನದಿಯಲ್ಲಿ ಹುಡುಕಾಡಿದ್ದು ಶವ ಪತ್ತೆಯಾಗಿದೆ.
ಬಹುಗ್ರಾಮ ಕುಡಿಯುವ ನೀರು ಪೂರೈಕೆಗಾಗಿ ನಿರ್ಮಿಸಿರುವ ಅಣೆಕಟ್ಟೆ ಬಳಿ ಭಾನುವಾರ ಮೃತದೇಹ ಪತ್ತೆಯಾಗಿದೆ. ಬಂಟ್ವಾಳ ಗ್ರಾಮಾಂತರ ಠಾಣೆ ಮಹಿಳಾ ಎಸ್ ಐ ಭಾರತಿ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕೇ ಭೇಟಿ ನೀಡಿ, ಮಹಜರು ನಡೆಸಿದ ಬಳಿಕ ಪ್ರಕರಣ ದಾಖಲಿಸಿಕೊಂಡಿದೆ.
ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅದ್ಯಕ್ಷರಾದ ಯೋಗಿಶ್ ಶೆಟ್ಟಿ ಜಪ್ಪು ಮೋಸ ಮಾಡಿದ ತಂಡವನ್ನು ಬಂದಿಸಬೇಕು ಎಂದು ಒತ್ತಾಯಿಸಿದರು. ವಂಚಕರು ಜಾಲ ಬೆಳೆಯಲು ನಮ್ಮ ಕಾನೂನು ಅವಸ್ಥೆಯೆ ಕಾರಣ. ಜನರು ಮೋಸ ಹೋದ ಸಂದರ್ಭದಲ್ಲಿ ಪೋಲಿಸ್ ಠಾಣೆಗೆ ಹೋದಾಗ ಕೆಲವು ಪೋಲಿಸರು ವಂಚಕ ಪರವಾಗಿ ಇರುವ ತರಹ ಮಾತನಾಡುತ್ತಾರೆ. ಹೊರತು ನೊಂದ ಸಂತ್ರಸ್ತರಿಗೆ ದೈರ್ಯ ತುಂಬುವ ಕೆಲಸ ಮಾಡುದ್ದಿಲ್ಲ. ಆದುದರಿಂದ ಹಣ ಕಳೆದು ಕೊಂಡ ವ್ಯಕ್ತಿ ಆತ್ಮಹತ್ಯೆಯಂತಹ ನಿರ್ದರ ಕೈಗೊಳ್ಳಲು ಕಾರಣ ವಾಗುತ್ತದೆ.