Saturday, July 27, 2024
spot_img
More

    Latest Posts

    ಯಕ್ಷಗಾನ ಕಲಾವಿದ,ಉದ್ಯಮಿ ಎಂ.ಎಂ.ಸಿ.ರೈ ಇನ್ನಿಲ್ಲ

    ಉದ್ಯಮಿಯಾಗಿ,ಯಕ್ಷಗಾನ ವೇಷಧಾರಿ ಹಾಗೂ ಕಲಾವಿದನಾಗಿ ಖ್ಯಾತಿ ಹೊಂದಿದ್ದ ಎಂ.ಬಿ.ಎ. ಪದವೀಧರ ಎಂ.ಎಂ.ಸಿ. ರೈ (ಮಾಯಿಪ್ಪಾಡಿ ಮೋಹನ ಚಂದ್ರ ರೈ-55) ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಇಂದು ಮುಂಜಾನೆ ಕುಳಾಯಿ ಹೊನ್ನಕಟ್ಟೆ ಬಳಿಯ ತಮ್ಮ ಸ್ವಗ್ರಹದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.

    ಯಕ್ಷಗಾನ ರಂಗದ ಅತ್ಯುತ್ತಮ ಅರ್ಥಧಾರಿ ಮತ್ತು ವೇಷಧಾರಿ ಯಾಗಿದ್ದ ಎಂ.ಎಂ.ಸಿ. ರೈ ಅವರು ಮೊನ್ನೆ ತಾನೇ 2023 ನವೆಂಬರ್ 25ರಂದು ಯಕ್ಷಾಂಗಣ ಮಂಗಳೂರು ಇದರ ತಾಳಮದ್ದಳೆ ಸಪ್ತಾಹದ ‘ಕರ್ಣ ಚರಿತ್ರೊ’ ಪ್ರಸಂಗದಲ್ಲಿ ಶಲ್ಯನ ಪಾತ್ರವಹಿಸಿ ತುಳು ಭಾಷೆಯಲ್ಲಿ ತರ್ಕ ಬದ್ಧ ಅರ್ಥ ಹೇಳಿದ್ದರು. ಹವ್ಯಾಸಿ ಬಳಗ ಕದ್ರಿ ಇದರ ಸಕ್ರಿಯ ಸದಸ್ಯರಾಗಿ ಹಲವಾರು ಆಟ – ಕೂಟಗಳಲ್ಲಿ ಭಾಗವಹಿಸಿದ್ದರು. ತಮ್ಮ ತುಳುನಾಡು ಬೋರ್ ವೆಲ್ಸ್ ಎಂಬ ಉದ್ಯಮ ಸಂಸ್ಥೆಯ ಮೂಲಕ ಅವಿಭಜಿತ ಜಿಲ್ಲೆಯಲ್ಲಿ ನೂರಾರು ಕೊಳವೆ ಬಾವಿಗಳನ್ನು ನಿರ್ಮಿಸಿ ಜನಪ್ರಿಯರಾಗಿದ್ದ ಅವರು ಕೊಡುಗೈ ದಾನಿ ಎನಿಸಿದ್ದರು. ಮೃತರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ, ಹವ್ಯಾಸಿ ಬಳಗದ ಶರತ್ ಕುಮಾರ್ ಕದ್ರಿ ಮತ್ತು ಡಿ.ದಿನಕರ ಎಸ್.ಪಚ್ಚನಾಡಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss