ದಿನಾಂಕ 08-10-2023 ರವಿವಾರ ಸಂಜೆ 3.30 ಕ್ಕೆ ಮಂಗಳೂರು ನಗರ ಘಟಕದ ಸಭೆ ಕೇಂದ್ರೀಯ ಕಚೇರಿಯಲ್ಲಿ ಮಂಗಳೂರು ನಗರ ಅದ್ಯಕ್ಷ ಶರಣ್ ರಾಜ್ ಅಧ್ಯಕ್ಷತೆಯಲ್ಲಿ ನಡೆಯಿತು.
ನಗರ ಘಟಕದ ಉಪಾಧ್ಯಕ್ಷರಾಗಿ ಜೋಸೆಫ್ ಲೋಬೊ ಉರ್ವ , ಶಾರದ ಶೆಟ್ಟಿ ನಂದಿಗುಡ್ಡ , ಅಬ್ದುಲ್ ಅಜೀಜ್ , ಪ್ರಧಾನ ಕಾರ್ಯದರ್ಶಿಯಾಗಿ ಮುನೀರ್ ಮುಕ್ಕಚೇರಿ ಪಾಂಡೇಶ್ವರ , ಜೊತೆ ಕಾರ್ಯದರ್ಶಿ ಯಾಗಿ ಕ್ಲೀಟಸ್ ಲೋಬೊ ಅಳಕೆ , ಸಂಘಟನಾ ಕಾರ್ಯದರ್ಶಿ ಗೋಲ್ಡನ್ ಪಾರುಖ್, ಕೋಶಾಧಿಕಾರಿ ರೋಶನ್ ಡಿಸೋಜ , ಯುವ ಘಟಕ ನಗರಾದ್ಯಕ್ಷರಾಗಿ ಹರೀಶ್ ಶೆಟ್ಟಿ ಶಕ್ತಿನಗರ ಸೇರಿದಂತೆ ವಿವಿಧ ಪದಾಧಿಕಾರಿಗಳನ್ನು ಕೇಂದ್ರೀಯ ಮಂಡಳಿ ಅದ್ಯಕ್ಷರಾದ ಯೋಗಿಶ್ ಶೆಟ್ಟಿ ಜಪ್ಪು ರವರ ಸಲಹೆ ಮೇರೆಗೆ ನಗರಾದ್ಯಕ್ಷರಾದ ಶರಣ್ ರಾಜ್ ಕೆ. ಆರ್ ರವರು ಆಯ್ಕೆ ಮಾಡಿದರು.
ಸಭೆಯಲ್ಲಿ ಕೇಂದ್ರಿಯ ಜೊತೆ ಕಾರ್ಯದರ್ಶಿ ಜ್ಯೋತಿಕ ಜೈನ್, ಕೇಂದ್ರೀಯ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ಯುವ ಮುಖಂಡರುಗಳಾದ ಶೋನ್ ಬೆಂದೂರ್ ವೆಲ್, ಗೈಟನ್ ಮತ್ತಿತರರು ಉಪಸ್ಥಿತರಿದ್ದರು.