Sunday, September 8, 2024
spot_img
More

    Latest Posts

    ಕೊರೊನಾ ಲಾಕ್ ಡೌನ್ ಸಂಕಷ್ಟದ ನಡುವೆಯೂ ಮಾರುತಿ ಸುಜುಕಿ ವಾಹನಗಳ ಮಾರಾಟ ವಹಿವಾಟು ಹೆಚ್ಚಳ

    ನವದೆಹಲಿ: ಕಾರು ಉತ್ಪಾದನೆಯಲ್ಲಿ ದೇಶದ ಬೃಹತ್ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾದ ಮಾರಾಟ ವಹಿವಾಟು ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

    ಜೂನ್ ತಿಂಗಳಿನ ಮಾರಾಟ ಪ್ರಮಾಣ 1,47,368ಕ್ಕೆ ಯೂನಿಟ್ಗಳಿಗೆ ತಲುಪಿದೆ. ಮೇ ತಿಂಗಳಲ್ಲಿ 46,555 ಯುನಿಟ್ಗಳಿಗೆ ಹೋಲಿಸಿದರೆ, ಕೋವಿಡ್ ಸಂಬಂಧಿತ ನಿರ್ಬಂಧ ಕಂಪನಿಗೆ ಹೆಚ್ಚಿನ ಘಟಕಗಳನ್ನು ಮಾರಾಟಗಾರರಿಗೆ ರವಾನಿಸಲು ಸಹಾಯವಾಗಿದೆ.

    ದೇಶೀಯ ರವಾನೆ ಏಪ್ರಿಲ್ ತಿಂಗಳಲ್ಲಿ 1,30,348 ಯುನಿಟ್ ಆಗಿದೆ. ಮೇ ತಿಂಗಳಲ್ಲಿ ಇದು 35,293 ಯುನಿಟ್ಗಳಾಗಿದ್ದು, ಆಲ್ಟೊ ಮತ್ತು ಎಸ್-ಪ್ರೆಸ್ಸೊಗಳನ್ನು ಒಳಗೊಂಡಿರುವ ಮಿನಿ ಕಾರುಗಳ ಮಾರಾಟ ಜೂನ್ ತಿಂಗಳಲ್ಲಿ 17,439 ಯುನಿಟ್ಗಳಿಗೆ ಏರಿಕೆಯಾಗಿದೆ. ಈ ವರ್ಷದ ಮೇ ತಿಂಗಳಿನಲ್ಲಿ 4,760 ಯುನಿಟ್ ಮಾರಾಟವಾಗಿದೆ.

    ಸ್ವಿಫ್ಟ್, ಸೆಲಾರಿಯೊ, ಇಗ್ನಿಸ್, ಬಲೆನೊ ಮತ್ತು ಡಿಜೈರ್ ಸೇರಿದಂತೆ ಕಾಂಪ್ಯಾಕ್ಟ್ ವಿಭಾಗದ ವಾಹನಗಳ ಮಾರಾಟವು ಮೇ ತಿಂಗಳಲ್ಲಿ 20,343 ಕಾರುಗಳಿಂದ 68,849 ಯುನಿಟ್ಗಳಿಗೆ ಏರಿತು.
    ಮಾಧ್ಯಮ ಗಾತ್ರದ ಸೆಡಾನ್ ಸಿಯಾಜ್ ಮಾರಾಟವು ಈ ವರ್ಷದ ಮೇ ತಿಂಗಳಲ್ಲಿ 349 ಯುನಿಟ್ ಮಾರಾಟವಾದರೆ, ಜೂನ್ ತಿಂಗಳಿನಲ್ಲಿ 602ಕ್ಕೆ ಏರಿದೆಯಾಗಿದೆ. ವಿಟಾರಾ ಬ್ರೆಝಾ, ಎಸ್-ಕ್ರಾಸ್ ಮತ್ತು ಎರ್ಟಿಗಾ ಸೇರಿದಂತೆ ಯುಟಿಲಿಟಿ ವಾಹನಗಳ ಮಾರಾಟವು ಮೇ ತಿಂಗಳಲ್ಲಿ 6,355 ರಷ್ಟಿದ್ದರೆ, 28,172 ಯುನಿಟ್ಗಳಷ್ಟಿದೆ ಎಂದು ಕಂಪನಿ ತಿಳಿಸಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss