Friday, September 29, 2023

‘ಸುಪ್ರೀಂ ಕೋರ್ಟ್’ನಲ್ಲಿ ‘ಮೂಕ ವಕೀಲೆ’ ವಾದ: ‘ಹೊಸ ಇತಿಹಾಸ’ ದಾಖಲು

ನವದೆಹಲಿ: ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ನಲ್ಲಿ ವಾಕ್ ಶ್ರವಣ ದೋಷವುಳ್ಳ ಮೂಕ ವಕೀಲೆಯೊಬ್ಬರು ಸಂಕೇತ ಭಾಷೆಯನ್ನು ಬಳಸುವ ಮೂಲಕ ವಾದ ಮಂಡಿಸಿದ್ದಾರೆ. ಈ ಮೂಲಕ...
More

  Latest Posts

  ಮಂಗಳೂರು: ಮೀನುಗಾರರ ಬಲೆಗೆ ಬಿದ್ದ ಬೃಹತ್ ಗಾತ್ರದ ಮುರು ಮೀನು

  ಮಂಗಳೂರು: ಮಂಗಳೂರಿನಲ್ಲಿ ಮೀನುಗಾರರ ಬಲೆಗೆ ಮುನ್ನೂರ ಐವತ್ತು ಕೆ.ಜಿ ತೂಕದ ಮುರು ಮೀನು ಬಲೆಗೆ ಬಿದ್ದಿದೆ. ಮಂಗಳೂರಿನಿಂದ ಆಳ ಸಮುದ್ರಕ್ಕೆ ತೆರಳಿದ ಮೀನುಗಾರರ ಭಾರೀ ಬೇಟೆ ಇದಾಗಿದ್ದು, ಮುರು ಮೀನು...

  ಉಳ್ಳಾಲ: ನಿಷೇಧಿತ ಎಂಡಿಎಂಎ ಮಾರುತ್ತಿದ್ದ ಇಬ್ಬರ ಬಂಧನ

  ಉಳ್ಳಾಲ:(ಮಂಗಳೂರು) ಉಳ್ಳಾಲದ ಸೀಗ್ರೌಂಡ್ ಸಮುದ್ರ ತೀರದಲ್ಲಿ ನಿಷೇಧಿತ ಎಂಡಿಎಂಎ ಮಾರಾಟ ನಡೆಸಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನ ಉಳ್ಳಾಲ ಠಾಣಾಧಿಕಾರಿ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. ಮಾಸ್ತಿಕಟ್ಟೆ ಆಝಾದ್ ನಗರದ ಫಝಲ್...

  ಮಂಗಳೂರು : ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆಗೆ ಯತ್ನ ..!

  ಮಂಗಳೂರು: ಬೆಂಗಳೂರಿನ ಮಲ್ಲೇಶ್ವರಂನ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೂಳೂರು ಬಳಿ ನಡೆದಿದೆ. ಮಹಿಳೆಯ ಪತಿ ಎರಡು ತಿಂಗಳ ಹಿಂದೆ ಮೃತಪಟ್ಟಿದ್ದು, ಅವರು ಸಾಲ ಮಾಡಿದ್ದರಿಂದ...

  ಬೆಳ್ತಂಗಡಿ : ಹಲವು ಕಳ್ಳತನದಲ್ಲಿ ಭಾಗಿಯಾಗಿದ್ದ ಅಂತರರಾಜ್ಯ ಕಳ್ಳನ ಬಂಧನ

  ಬೆಳ್ತಂಗಡಿ : ಜಿಲ್ಲೆಯಲ್ಲಿ ನಡೆದ ಹಲವು ಕಳ್ಳತನದಲ್ಲಿ ಭಾಗಿಯಾಗಿದ್ದ ಅಂತರರಾಜ್ಯ ಕಳ್ಳನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಆಂಧ್ರಪ್ರದೇಶ ಮೂಲದ ಸದ್ಯ ತಮಿಳುನಾಡಿನ ಕನ್ಯಾಕುಮಾರಿ ನಿವಾಸಿ...

  ಕಡಬ: ಮಣಿಪುರ ರಾಜ್ಯದಲ್ಲಿ ಕ್ರೈಸ್ತರ ವಿರುದ್ಧ ನಡೆಯುತ್ತಿರುವ ಹಿಂಸಾಚಾರವನ್ನು ಪ್ರಧಾನಿಗಳು ತಡೆಯಬೇಕು- ಮಲೆಯಾಳಿ ಕ್ರಿಶ್ಚನ್ ಅಸೋಸಿಯೇಶನ್ ಅಗ್ರಹ

  ಕಡಬ: ಮಣಿಪುರದಲ್ಲಿ ನಡೆಯುತ್ತಿರುವ ಕ್ರೈಸ್ತರ ವಿರುದ್ಧ ನಡೆಯುತ್ತಿರುವ ಹಿಂಸಾಚಾರವನ್ನು ಮಾನ್ಯ ಪ್ರಧಾನಿ ಮೋದಿಯವರು ಮಧ್ಯಪ್ರವೇಶಸಿ ಹತ್ತಿಕ್ಕುವಂತೆ ಕರ್ನಾಟಕ ರಾಜ್ಯ ಮಲೆಯಾಳಿ ಕ್ರಿಶ್ಚನ್ ಅಸೋಸಿಯೇಶನ್ ಅಗ್ರಹಿಸಿದೆ. ಅಸೋಸಿಯೇಶನ್‌ನ ರಾಜ್ಯಾಧ್ಯಕ್ಷ  ಎ.ಸಿ.ಜಯರಾಜ್ ಗುರುವಾರ ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅಲ್ಲಿನ ಸರಕಾರದ ಕುಮ್ಮಕ್ಕಿನಿಂದ ಹಿಂಸಾಚಾರ ನಡೆಯುತ್ತಿದ್ದು ತಕ್ಷಣ ಇದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಮಣಿಪುರದಲ್ಲಿ ಸುಮಾರು ಶೇ 60-65 ಮೈತೇಯಿ ಸಮುದಾಯದವರು ಹಾಗೂ ೩೫ ಕುಕ್ಕಿ, ನಾಗಾ ಹಾಗೂ ಇತರ ಸಮುದಾಯಗಳಿವೆ.  ಇವರು  ಇಂಪಾಲ ನಗರ ಹಾಗೂ ಸುತ್ತಮುತ್ತಲೂ ವಾಸ್ತವ್ಯ ಇದ್ದಾರೆ.  ಮೈತೇಯಿ  ಸಮುದಾಯದ ಸುಮಾರು ಶೇ  ೯೦ ಜನರು ಹಿಂದುಗಳಾಗಿದ್ದು  ಮಣಿಪುರದ  ಕಣಿವೆ ಪ್ರದೇಶದಲ್ಲಿ ವಾಸ್ತವ್ಯ ಇದ್ದಾರೆ. ಕಣಿವೆ ಪ್ರದೇಶದಲ್ಲಿ ಯಾವ ಸಮುದಾಯದವರು ಬೇಕಾದರೂ ಭೂಮಿ ಖರೀದಿ ಮಾಡಬಹುದು. ಪರಿಶಿಷ್ಟ ಪಂಗಡಕ್ಕೆ ಸೇರಿದ ಕುಕ್ಕಿ ಸಮುದಾಯ ಮಣಿಪುರದ ಗುಡ್ಡಗಾಡು ಪ್ರದೇಶದಲ್ಲಿ ಕೃಷಿಯನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಇವರಿಗೆ  ಸಂವಿಧಾನದ  ಪ್ರಕಾರ ವಿಶೇಷವಾದ ರಕ್ಷಣೆ ಇರುತ್ತದೆ. ಇವರ ಭೂಮಿಯನ್ನು  ಮೈತೇಯಿ  ಸಮುದಾಯದವರಿಗೆ ಖರೀದಿ ಮಾಡಲು ಕಾನೂನಿನಲ್ಲಿ ಅವಕಾಶವಿರುವುದಿಲ್ಲ.
  ಮಣಿಪುರ ವಿಧಾನ ಸಭೆಯ 60 ವಿಧಾನ ಸಭಾ ಸದಸ್ಯರ ಪೈಕಿ ೪೦ ವಿಧಾನ ಸಭಾ ಸದಸ್ಯರನ್ನು ಮೈತೇಯ ಸಮುದಾಯದವರು, ರಾಜಕೀಯವಾಗಿ ಹಾಗೂ ಆರ್ಥಿಕವಾಗಿ  ಬಲಾಡ್ಯವಾಗಿದ್ದಾರೆ. ಇಲ್ಲಿನ  ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಕೂಡಾ  ಇದೇ  ಸಮುದಾಯದವರಾಗಿದ್ದಾರೆ. ಆದರೆ ಕುಕ್ಕಿ ಪಂಗಡದ ಜನರೆಲ್ಲರೂ  ಕ್ರೈಸ್ತ ಧರ್ಮಕ್ಕೆ ಸೇರಿದವರಾಗಿದ್ದು, ಆರ್ಥಿಕವಾಗಿ ದುರ್ಬಲರಾಗಿದ್ದಾರೆ. ಇವರಿಗೆ  ಸಂವಿಧಾನದಲ್ಲಿ ವಿಶೇಷವಾದ ರಕ್ಷಣೆ ಇದೆ.   ಗುಡ್ಡಕಾಡು ಪ್ರದೇಶಗಳನ್ನು ಬಲಾಡ್ಯವಾದ ಮೈತೇಯಿ ಪಂಗಡದವರು ಖರೀದಿ ಮಾಡಲು ಕಾನೂನಿನಲ್ಲಿ ಅವಕಾಶವಿರುವುದಿಲ್ಲ. ಆದರೆ ಇಲ್ಲಿನ  ಬಿಜೆಪಿ ಸರಕಾರವು ಗುಡ್ಡಾಡು ಪ್ರದೇಶಗಳಿಂದ ಕುಕ್ಕಿ ಸಮುದಾಯದ ಜನರನ್ನು ಅವರು ಮಾದಕದ್ರವ್ಯ ಬೆಳೆಗಳನ್ನು ಬೆಳೆಸುತ್ತಾರೆಂದು ಸುಳ್ಳು ಆರೋಪದಡಿ  ಬಲತ್ಕಾರವಾಗಿ ಕಾನೂನು ವಿರುದ್ಧವಾಗಿ ಒಕ್ಕಲೆಬ್ಬಿಸುವ ಕಾರ್ಯ ನಡೆಯುತ್ತಿದೆ. ಇದರ  ವಿರುದ್ಧ  ರ‍್ಯಾಲಿಯನ್ನು ಸಂಘಟಿಸಿದರೆ ಈ ರ‍್ಯಾಲಿಗಳ ಮೇಲೆ ಇಲ್ಲಿನ  ಬಿಜೆಪಿ ಸರಕಾರ  ಮೈತೇಯಿ ಪಂಗಡದ ಜನರನ್ನು ಚೂ ಬಿಟ್ಟು ಪ್ರತಿಭಟನಾ ನಿರತ ಕುಕ್ಕಿ ಪಂಗಡದ ಕ್ರೈಸ್ತರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ.  ಮಣಿಪುರ ಪೋಲಿಸ್ ಹಿಂಸಾಚಾರವನ್ನು ತಡೆಯದೆ ಮೂಕಪ್ರೇಕ್ಷಕರಾಗಿದ್ದಾರೆ.
  ಸುಮಾರು 247 ಚರ್ಚೆಗಳಿಗೆ ಹಾಗೂ  ಮೂರುಸಾವಿರ ಕ್ರೈಸ್ತರ ಮನೆಗಳಿಗೆ ಬೆಂಕಿ ಹಚ್ಚಿ ಸುಡಲಾಗಿದೆ.  ಸಾವಿರಾರು ಕ್ರೈಸ್ತರು ಗಾಯಗೊಂಡಿದ್ದಾರೆ  ಸಾವಿರಾರು ಮಂದಿ ಪ್ರಾಣ ಭಯದಿಂದ ಮನೆ ಮಠಗಳನ್ನು ಬಿಟ್ಟು  ಅರಣ್ಯದಲ್ಲಿ ಅವಿತಿರುತ್ತಾರೆ.  ಕ್ರೈಸ್ತರ ಮೇಲಿನ ಹಿಂಸಾಚಾರನ್ನು ನಿಲ್ಲಿಸುವಂತೆ ಮನವಿ ಮಾಡಲು ಪ್ರಧಾನಿಯವರು ಅವಕಾಶವನ್ನೇ ನೀಡಲಿಲ್ಲ. ಈವರೆಗೆ ಘಟನೆಯ ಬಗ್ಗೆ ಚಕಾರವೆತ್ತಲಿಲ್ಲ.ಗೃಹ ಸಚಿವರಾದ ಅಮಿತ್ ಶಾ  ಮಣಿಪುರಕ್ಕೆ  ಭೇಟಿ ಕೊಟ್ಟ ನಂತರ  ಹಿಂಸಾಚಾರ ಭುಗಿಲೆದ್ದಿದೆ. ಕೇಂದ್ರದಿಂದ ಕಳುಹಿಸಲಾದ ೪೦ ಸಾವಿರ ಸೈನಿಕರು ಹಾಗೂ ಸ್ಥಳೀಯ ಪೋಲೀಸರು ಹಿಂಸಾಚಾರ ತಡೆಯುವಲ್ಲಿ  ವಿಫಲರಾಗಿದ್ದಾರೆ. ರಾಜಕೀಯ ಲಾಭಕ್ಕಾಗಿ ಇಲ್ಲಿನ ರಾಜ್ಯ ಹಾಗೂ ಕೇಂದ್ರ ಸರಕಾರ ಕ್ರೈಸ್ತರ ವಿರುದ್ದು ಹಿಂಸಾಚಾರಕ್ಕೆ ಪರೋಕ್ಷವಾಗಿ ಬೆಂಬಲಿಸುತ್ತಿದೆ ಎಂದು ಆರೋಪಿಸಿದ  ಜಯರಾಜ್  ತಕ್ಷಣ ಪ್ರಧಾನ ಮಂತ್ರಿಯವರು  ಹಿಂಸಾಚಾರ ಮಟ್ಟ ಹಾಕಲು  ಸೂಕ್ತ ಕ್ರಮಕೈಗೊಳ್ಳಬೇಕು ತಪ್ಪಿದಲ್ಲಿ ದೇಶ ಎಲ್ಲಾ ರಾಜ್ಯಗಳಿಂದ  ಕ್ರೈಸ್ತರು ಮಣಿಪುರ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದಾರೆ ಎಂದು ಎಚ್ಚರಿಸಿದರು.
  ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಪಿ.ವರ್ಗೀಸ್, ಪ್ರಮುಖರಾದ ರೋಯ್ ಅಬ್ರಹಾಂ, ಸೈಮನ್ ಸಿ.ಜೆ, ಜೋರ್ಜ್ ಕುಟ್ಟಿ. ಕ್ಸೇವಿಯರ್ ಬೇಬಿ, ವಲ್ಸಮ್ಮ ಕೆ.ಟಿ, ವರ್ಗೀಸ್ ಅಬ್ರಹಾಂ ಉಪಸ್ಥಿತರಿದ್ದರು.

  Latest Posts

  ಮಂಗಳೂರು: ಮೀನುಗಾರರ ಬಲೆಗೆ ಬಿದ್ದ ಬೃಹತ್ ಗಾತ್ರದ ಮುರು ಮೀನು

  ಮಂಗಳೂರು: ಮಂಗಳೂರಿನಲ್ಲಿ ಮೀನುಗಾರರ ಬಲೆಗೆ ಮುನ್ನೂರ ಐವತ್ತು ಕೆ.ಜಿ ತೂಕದ ಮುರು ಮೀನು ಬಲೆಗೆ ಬಿದ್ದಿದೆ. ಮಂಗಳೂರಿನಿಂದ ಆಳ ಸಮುದ್ರಕ್ಕೆ ತೆರಳಿದ ಮೀನುಗಾರರ ಭಾರೀ ಬೇಟೆ ಇದಾಗಿದ್ದು, ಮುರು ಮೀನು...

  ಉಳ್ಳಾಲ: ನಿಷೇಧಿತ ಎಂಡಿಎಂಎ ಮಾರುತ್ತಿದ್ದ ಇಬ್ಬರ ಬಂಧನ

  ಉಳ್ಳಾಲ:(ಮಂಗಳೂರು) ಉಳ್ಳಾಲದ ಸೀಗ್ರೌಂಡ್ ಸಮುದ್ರ ತೀರದಲ್ಲಿ ನಿಷೇಧಿತ ಎಂಡಿಎಂಎ ಮಾರಾಟ ನಡೆಸಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನ ಉಳ್ಳಾಲ ಠಾಣಾಧಿಕಾರಿ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. ಮಾಸ್ತಿಕಟ್ಟೆ ಆಝಾದ್ ನಗರದ ಫಝಲ್...

  ಮಂಗಳೂರು : ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆಗೆ ಯತ್ನ ..!

  ಮಂಗಳೂರು: ಬೆಂಗಳೂರಿನ ಮಲ್ಲೇಶ್ವರಂನ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೂಳೂರು ಬಳಿ ನಡೆದಿದೆ. ಮಹಿಳೆಯ ಪತಿ ಎರಡು ತಿಂಗಳ ಹಿಂದೆ ಮೃತಪಟ್ಟಿದ್ದು, ಅವರು ಸಾಲ ಮಾಡಿದ್ದರಿಂದ...

  ಬೆಳ್ತಂಗಡಿ : ಹಲವು ಕಳ್ಳತನದಲ್ಲಿ ಭಾಗಿಯಾಗಿದ್ದ ಅಂತರರಾಜ್ಯ ಕಳ್ಳನ ಬಂಧನ

  ಬೆಳ್ತಂಗಡಿ : ಜಿಲ್ಲೆಯಲ್ಲಿ ನಡೆದ ಹಲವು ಕಳ್ಳತನದಲ್ಲಿ ಭಾಗಿಯಾಗಿದ್ದ ಅಂತರರಾಜ್ಯ ಕಳ್ಳನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಆಂಧ್ರಪ್ರದೇಶ ಮೂಲದ ಸದ್ಯ ತಮಿಳುನಾಡಿನ ಕನ್ಯಾಕುಮಾರಿ ನಿವಾಸಿ...

  Don't Miss

  ಬಂಟ್ವಾಳ: ಜಲ್ಲಿಕಲ್ಲು ಸಾಗಿಸುವ ಲಾರಿ ಢಿಕ್ಕಿ – ಬೈಕ್ ಸವಾರ ಮೃತ್ಯು

  ಬಂಟ್ವಾಳ: ಜಲ್ಲಿಕಲ್ಲು ಸಾಗಿಸುವ ಲಾರಿ ಢಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ಪಾಣೆಮಂಗಳೂರು ನೂತನ ಸೇತುವೆಯಲ್ಲಿ ನಡೆದಿದೆ. ಸಜೀಪ ಬೇಂಕ್ಯ ನಿವಾಸಿ ವಾಸುದೇವ ಮಯ್ಯ...

  ಪುತ್ತೂರು : ಕಾರು ಢಿಕ್ಕಿಯಾಗಿ ಐದು ವರ್ಷದ ಬಾಲಕ ಸಾವು

  ಕಾರು ಢಿಕ್ಕಿಯಾಗಿ ಐದು ವರ್ಷ ಪ್ರಾಯದ ಬಾಲಕ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಕೆಯ್ಯೂರಿ ಶನಿವಾರ ನಡೆದಿದೆ. ಕೆಯ್ಯೂರು ಗ್ರಾಮದ ನಿವಾಸಿ ಹಾರಿಸ್ ದಾರಿಮಿ ಎಂಬವರ ಪುತ್ರ, ಮಹಮ್ಮದ್ ಆದಿಲ್...

  ಚೈತ್ರಾ ಕುಂದಾಪುರ ಸೇರಿ 7 ಆರೋಪಿಗಳಿಗೆ ನ್ಯಾಯಾಂಗ ಬಂಧನ

  ಬೆಂಗಳೂರು: ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ ಕೋಟ್ಯಾಂತರ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಸೇರಿ 7 ಮಂದಿ ಆರೋಪಿಗಳ ನ್ಯಾಯಾಂಗ ಬಂಧನವನ್ನುಅಕ್ಟೊಬರ್ 6 ರವರೆಗೆ ಬೆಂಗಳೂರಿನ 3 ನೇ ಎಪಿಎಂಸಿ...

  ಮಂಗಳೂರು : ಯುನಿಸೆಕ್ಸ್ ಸೆಲೂನ್ ಗಳಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆದರೆ ಕ್ರಮ- ಅನುಪಮ್‌ ಅಗರ್‌ವಾಲ್‌

  ಮಂಗಳೂರು : ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿರುವ ಇರುವ ಯುನಿಸೆಕ್ಸ್ ಸೆಲೂನ್ ಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಮಂಗಳೂರು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ಎಚ್ಚರಿಕೆ...

  ಉಡುಪಿ: ನಾಪತ್ತೆಯಾಗಿದ್ದ ಯುವಕ 8 ದಿನಗಳ ಬಳಿಕ ಕಾಡಿನ ಸಮೀಪ ಪತ್ತೆ

  ಅಮಾಸೆಬೈಲು: ಮಚ್ಚಟ್ಟು ಗ್ರಾಮದ ತೊಂಬಟ್ಟು ಇರ್ಕಿಗದ್ದೆ ಎಂಬಲ್ಲಿಂದ ನಾಪತ್ತೆಯಾಗಿದ್ದ ಸ್ಥಳೀಯ ನಿವಾಸಿ ಶೀನ ನಾಯ್ಕ ಎಂಬವರ ಪುತ್ರ ವಿವೇಕಾನಂದ(28) ಎಂಬವರು ಎಂಟು ದಿನಗಳ ಬಳಿ ಪತ್ತೆಯಾಗಿದ್ದಾರೆ. ಸೆ.16ರಂದು ಮನೆಯಿಂದ ಹೊರಗೆ...