Thursday, September 19, 2024
spot_img
More

    Latest Posts

    ಮಂಗಳೂರು:ಹೈಡ್ರೋವೀಡ್‌ ಗಾಂಜಾ ವನ್ನು ಮಾರಾಟ ಮಾಡಲು ಯತ್ನ : ಇಬ್ಬರು ಆರೋಪಿಗಳ ಬಂಧನ

    ಮಂಗಳೂರು:ಹೈಡ್ರೋವೀಡ್‌ ಗಾಂಜಾ ವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಇಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ದೇರಳಕಟ್ಟೆಯಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದು ಇವರಿಂದ ಸುಮಾರು 30 ಲಕ್ಷದಿಂದ 1 ಕೋಟಿಯವರೆಗೆ ಬೆಲೆಬಾಳುವ 1 ಕೆಜಿ 236 ಗ್ರಾಂ ಗಳಷ್ಟು ಹೈಡ್ರೋವೀಡ್‌ ಗಾಂಜಾ ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಕಾಸರಗೋಡು, ಮಂಗಲ್ಪಾಡಿಯ ಅಜ್ಮಲ್‌ ಟಿ, ತಮಿಳುನಾಡು ಮೂಲದ ನಾಗರಕೋಯ್ಲ್‌ ರಾಣಿತೊಟ್ಟಮ್‌ ನ ಪ್ರಸ್ತುತ ಸುರತ್ಕಲ್‌ ನ ನಿವಾಸಿಯಾಗಿರುವ ವೈದ್ಯೆ ಮಿನು ರಶ್ಮಿ ಗುರುತಿಸಲಾಗಿದೆ.

    ಪ್ರಕರಣದ ಮುಖ್ಯ ಆರೋಪಿ ಡಾ. ನದೀರ್‌ ಎಂಬಾತ ಕಾಸರಗೋಡು ಮೂಲದ ವೈದ್ಯನಾಗಿದ್ದು, ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ. ಈತ ನೀಡಿದ ಸೂಚನೆಯಂತೆ ಕಾಂಇಗಾಡ್‌ ಹರಿಮಲ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿರುವ ಮಿನು ರಶ್ಮಿ ಹಾಗೂ ಅಜ್ಮಲ್‌ ಬಂಧಿತ ಆರೋಪಿಗಳಾಗಿರುವ ವೈದ್ಯೆ ಮಿನು ರಶ್ಮಿ ಹಾಗೂ ಅಜ್ಮಲ್‌ ಇಬ್ಬರು ಹೈಡ್ರೋವೀಡ್‌ ಗಾಂಜಾವನ್ನು ತರಿಸಿಕೊಂಡು ಕೊಣಾಜೆ, ಉಳ್ಳಾಲ,ಉಪ್ಪಳ ಹಾಗೂ ಮಂಗಳೂರು ಕಡೆಗಳಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡಲು ಬೇರೆ ಬೇರೆ ವ್ಯಕ್ತಿಗಳಿಗೆ ನೀಡುತ್ತಿದ್ದರು.

    ನದೀರ್‌ ನ ಸೂಚನೆ ಮೇರೆಗೆ ಜೂ 29 ಕಾಂಇಗಾಡ್‌ ನಿಂದ ರೈಲು ಮುಖಾಂತರ ಮಂಗಳೂರಿಗೆ ಬಂದ ಡಾ|ಮಿನು ರಶ್ಮಿ ಆಕೆಯ ಕಾರಿನಲ್ಲಿ ನದೀರ್‌ ನ ಸೂಚನೆ ಮೇರೆಗೆ ಅಜ್ಮಲ್‌ ಜೊತೆ ಸೇರಿ ಹೈಡ್ರೋವೀಡ್‌ ಗಾಂಜಾ ವನ್ನು ನದೀರ್‌ ನ ಸ್ನೇಹಿತರಿಗೆ ನೀಡಲು ದೇರಳಕಟ್ಟೆಗೆ ಬಂದಿದ್ದಾಗ. ಈ ಸಂದರ್ಭ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.ಬಂದಿತರಿಂದ 1 ಹುಂಡೈ ಸ್ಯಾಂಟ್ರೋ ಕಾರು, 2 ಮೊಬೈಲ್‌ ಗಳು, 30 ಲಕ್ಷದಿಂದ 1 ಕೋಟಿಯವರೆಗೆ ಬೆಲೆಬಾಳುವ ಹೈಡ್ರೋವೀಡ್‌ ಗಾಂಜಾ ವಶಪಡಿಸಿಕೊಳ್ಳಲಾಗಿದೆ.ಇಕೊನಾಮಿಕ್ ಮತ್ತು ನಾರ್ಕೊಟಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss