Sunday, September 15, 2024
spot_img
More

    Latest Posts

    ಡ್ರಗ್ಸ್ ಜಾಲದ ಮೂಲವನ್ನು ಭೇಧಿಸಿ ನೈಜೀರಿಯಾ ಪ್ರಜೆಗಳಾದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡ ಮಂಗಳೂರು ನಗರ ಪೊಲೀಸರು

    ಮಂಗಳೂರು: ಡ್ರಗ್ಸ್ ಜಾಲದ ಮೂಲವನ್ನು ಭೇಧಿಸಿದ ಮಂಗಳೂರು ನಗರ ಪೊಲೀಸರು ನೈಜೀರಿಯಾ ಪ್ರಜೆಗಳಾದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಬಂಧಿತರನ್ನು ಪೌಲ್ ಒಹಮೋಬಿ ಹಾಗೂ ಉಚೆಕುಚು ಮಲಾಕಿ ಎಲಕ್ವಾಚಿ ಎಂದು ಗುರುತಿಸಲಾಗಿದೆ.

    ಈ ಎಲ್ಲಾ ಪ್ರಕರಣಗಳಲ್ಲಿ ಆರೋಪಿಗಳು ಬೆಂಗಳೂರಿನಿಂದ ಡ್ರಗ್ಸ್ ಗಳನ್ನು ಖರೀದಿಸಿ ಕಾಸರಗೋಡು, ಕೇರಳ, ಮಂಗಳೂರು ಮತ್ತು ಬೆಂಗಳೂರಿನಲ್ಲಿ ಗ್ರಾಹಕರಿಗೆ ವಿತರಿಸುತ್ತಿದ್ದರು ಎನ್ನಲಾಗಿದೆ.ಈ ಸಂಬಂಧ ಜೂನ್ 21 ರಂದು ನೈಜೀರಿಯಾದ ನೈಜೀರಿಯಾದ ಸ್ಟಾನ್ಲಿ ಚಿಮಾ ಎಂಬಾತನನ್ನು ಬಂಧಿಸಲಾಗಿತ್ತು. ಸ್ಟಾನ್ಲಿ ಚಿಮಾ ಎಂಬಾತ ವೀಸಾ ಅವಧಿ ಮುಗಿದ ಕಾರಣ ಬೆಂಗಳೂರಿನಲ್ಲಿ ಕಾನೂನುಬಾಹಿರವಾಗಿ ಉಳಿದುಕೊಂಡಿರುವುದು ಕಂಡುಬಂದಿತು.

    ಶಿಕ್ಷಣದ ಉದ್ದೇಶಕ್ಕಾಗಿ ಭಾರತಕ್ಕೆ ಬಂದಿದ್ದ ಆತ ಟಿ-ಶರ್ಟ್ ರಫ್ತು ವ್ಯವಹಾರದಲ್ಲಿ ತೊಡಗಿಕೊಂಡಿದ್ದ ಎನ್ನಲಾಗಿದೆ,ಇನ್ನು ವಿಚಾರಣೆ ವೇಳೆ ಪೊಲೀಸರಿಗೆ ಸಾಕಷ್ಟು ಮಾಹಿತಿಗ ಲಭಿಸಿದ್ದು, ಆರೋಪಿಗಳಿಗೆ ಪರೋಕ್ಷವಾಗಿ ಅಥವಾ ನೇರವಾಗಿ ಸಹಾಯ ಮಾಡಿದ ಎಲ್ಲರನ್ನು ಬಂಧಿಸಲಾಗುವುದು ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿದ್ದಾರೆ.ಡ್ರಗ್ಸ್ ಡೀಲರ್ ಗಳು ಸಿಮ್ ಕಾರ್ಡ್‌ಗಳು ಮತ್ತು ವಹಿವಾಟುಗಳ ಉದ್ದೇಶಕ್ಕಾಗಿ ಕೆಲವು ಸ್ಥಳೀಯರ ಸಹಾಯವನ್ನು ಬಳಸಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss