Monday, June 24, 2024
spot_img
More

  Latest Posts

  ಮಂಗಳೂರು: ಮಂಗಳಮುಖಿಗೆ ನಾಲ್ವರಿಂದ ಹಲ್ಲೆ..!

  ಮಂಗಳೂರು:ಮಂಗಳಮುಖಿಯೋರ್ವರಿಗೆ ನಾಲ್ವರು ಯುವಕರು ಹಲ್ಲೆ ನಡೆಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

  ಮಂಗಳಮುಖಿ ಶಾಂತಿ ಅವರು ಎ. 30ರಂದು ರಾತ್ರಿ ಕುಂಟಿಕಾನ ಬಳಿ ಇದ್ದಾಗ ಅಲ್ಲಿಗೆ ಬಂದಿದ್ದ ನಾಲ್ವರು ಯುವಕರು ಅವಾಚ್ಯವಾಗಿ ಬೈದು ಕಲ್ಲು, ಪ್ಲಾಸ್ಟಿಕ್‌ ಪೈಪ್‌ನಿಂದ ಹಲ್ಲೆ ನಡೆಸಿದ್ದಾರೆ.

  ಈ ವೇಳೆ ಕಾರು ಬರುತ್ತಿರುವುದನ್ನು ಕಂಡು ಓಡಿ ಹೋಗಿದ್ದಾರೆ. ಹಲ್ಲೆ ವೇಳೆ ಶಾಂತಿ ಅವರ ಬ್ಯಾಗ್‌ ನೆಲಕ್ಕೆ ಬಿದ್ದಿದ್ದು, ಅನಂತರ ಅದನ್ನು ಪರಿಶೀಲಿಸಿದಾಗ ಅದರಲ್ಲಿದ್ದ 6,000 ರೂ. ಹಣ ನಾಪತ್ತೆಯಾಗಿದೆ.

  ಘಟನೆಯ ಮಾಹಿತಿ ತಿಳಿದ ಶಾಂತಿ ಅವರ ಸಮುದಾಯದ ಐಶ್ವರ್ಯಾ ಅವರು ಸ್ಥಳಕ್ಕೆ ಆಗಮಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss