Friday, July 19, 2024
spot_img
More

  Latest Posts

  ಕಾರವಾರ: ನಕಲಿ ಆಧಾರ್ ಹಾಗೂ ಪಾನ್ ಕಾರ್ಡ್ ತಯಾರಿಸುತ್ತಿದ್ದ ವ್ಯಕ್ತಿ ಬಂಧನ

  ಕಾರವಾರ: ನಕಲಿ ಆಧಾರ್ ಹಾಗೂ ಪಾನ್ ಕಾರ್ಡ್ ತಯಾರಿಸುತ್ತಿದ್ದ ವ್ಯಕ್ತಿಯನ್ನು ಕುಮಟಾ ಠಾಣೆ ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲೂಕಿನ ದಿಲೀಪ ಬಿ. ಆರ್. ರಾಜೆಗೌಡ ಬಂಧಿತ ಆರೋಪಿ. ಕುಮಟಾ ತಾಲೂಕಿನ ಹೆಗಡೆ ನಿವಾಸಿ ಸುಬ್ರಾಯ ಕಡೆಕೋಡಿ ಅವರ ಮೃತ ಪುತ್ರ ಶಮಂತ ಕಡೆಕೋಡಿ ಅವರ ಹೆಸರಿನ ಆಧಾರ ಕಾರ್ಡ್ ದಾಖಲೆಗಳನ್ನು ತಿದ್ದಿ, ದುರ್ಬಳಕೆ ಮಾಡಿರುವ ಬಗ್ಗೆ ಸುಬ್ರಾಯ ಕಡೆಕೋಡಿ ಅವರು ಕುಮಟಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸ್ ಇನ್ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ ಹಾಗೂ ಪಿಎಸ್ಐ ನವೀನ ನಾಯ್ಕ ನೇತೃತ್ವದ ತಂಡ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ದಿಲೀಪ, ಮೃತರ ಹೆಸರಿನ ಆಧಾರ ಕಾರ್ಡ್ ಮತ್ತು ಪಾನ್ ಕಾರ್ಡ್ಗಳನ್ನು ತನ್ನದೇ ಸಾಫ್ಟ್ ವೇರ್ ಬಳಸಿ ನಕಲಿಸುತ್ತಿದ್ದ. ಅದನ್ನು ಬಳಸಿ ಗೋವಾದಲ್ಲಿ ಐ ಫೋನ್ ಖರೀದಿಸಿ ಮೋಸ ಮಾಡಿದಲ್ಲದೇ ಇದೇ ಕೃತ್ಯ ರಾಜ್ಯದ ವಿವಿಧೆಡೆ ಮಾತ್ರವಲ್ಲದೇ ಸಿಐಡಿಯಲ್ಲೂ ಪ್ರಕರಣ ದಾಖಲಾಗಿದೆ.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss