ಮಹಾರಾಷ್ಟ್ರ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿಯ ಕಿಸನ್ ಘಟಕದ ಕಾರ್ಯಧ್ಯಕ್ಷರಾಗಿ ಮುಂಬೈಯ ಸಮಾಜ ಸೇವಕ ,ಕಾಂಗ್ರೆಸ್ ಪಕ್ಷದ ನಾಯಕ ಸುರೇಶ್ ಶೆಟ್ಟಿ ಯೆಯ್ಯಾಡಿ ಅವರನ್ನು ಅಖಿಲ ಭಾರತ ಕಾಂಗ್ರೆಸ್ ನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅದೇಶ ಹಾಗೂ ಅಖಿಲ ಭಾರತ ಕಿಸನ್ ಕಾಂಗ್ರೆಸ್ ಸಮಿತಿಯ ಮಹಾರಾಷ್ಟ್ರ ಪ್ರಭಾರಿ, ಪ್ರಕಾಶ್ ಗಾಳೆ ಅವರ ಶಿಫಾರಸಿನ ಮೇರೆಗೆ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನಾನಾ ಪಾಟೋಲೆಯವರು ನಿಯುಕ್ತಿ ಗೊಳಿಸಿದ್ದಾರೆ.ಸುರೇಶ್ ಶೆಟ್ಟಿ ಯೆಯ್ಯಾಡಿ ಅವರು ಈ ಮೊದಲು ಮುಂಬಯಿಯ ವಿಭಾಗೀಯ ಕಾಂಗ್ರೆಸ್ ಸಮಿತಿಯಲ್ಲಿ ಬ್ಲಾಕ್ ಕಾರ್ಯದರ್ಶಿಯಾಗಿ , ಬ್ಲಾಕ್ ಉಪಾಧ್ಯಕ್ಷರಾಗಿ, ಮಹಾರಾಷ್ಟ್ರ ಪರ್ಯವರಣ ವಿಭಾಗದಲ್ಲಿ ಉಪಾಧ್ಯಕ್ಷ ರಾಗಿ ಹಾಗೂ ಇಂಟಕ್ ನ ರಾಜ್ಯ ಉಪಾಧ್ಯಕ್ಷರಾಗಿ ಪಕ್ಷದಲ್ಲಿ ಕೆಲಸ ಮಾಡಿರುತ್ತಾರೆ.ಇವರು ಕರ್ನಾಟಕದಲ್ಲಿ ನಡೆದ ಲೋಕಸಭೆ ಹಾಗೂ ವಿಧಾನ ಸಭಾ ಚುನಾವಣಾ ಸಂದರ್ಭದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಅಪಾರವಾಗಿ ದುಡಿದಿರುವರು.ಮುಂಬೈಯಲ್ಲೂ ಜಾತಿ ಸಂಘಟನೆಗಳ್ಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದು, ಕನ್ನಡ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕದ ಅಧ್ಯಕ್ಷರಾಗಿ ನಮ್ಮ ಜಾನಪದ ಕಲೆ ಉಳಿಸಿ-ಬೆಳೆಸುವಲ್ಲಿ ಕಾರ್ಯಪ್ರವತ್ತರಾಗಿದ್ದಾರೆ. ಕ್ರೀಡೆ ,ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಮುಂಬೈ ಮಹಾನಗರದಲ್ಲಿ ಓರ್ವ ಉತ್ತಮ ಸಂಘಟಕರಾಗಿ ಗುರುತಿಸಿಕೊಂಡಿದ್ದಾರೆ.
©2021 Tulunada Surya | Developed by CuriousLabs