Saturday, June 15, 2024
spot_img
More

  Latest Posts

  ಮುಂಬೈ: ಸೆ.18 ರಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇದರ ಮಹಾ ಅಧಿವೇಶನ

  ಮುಂಬೈ: ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇದರ ಮಹಾ ಅಧಿವೇಶನವು, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 18 ರಂದು ಮುಂಬೈಯ ಬಂಟರ ಭವನ ಕುರ್ಲದಲ್ಲಿ ನಡೆಯಲಿದೆ.

  ಅಧಿವೇಶನವುದಲ್ಲಿ ಬೆಳಿಗ್ಗೆ 11 ಗಂಟೆಗೆ ಒಕ್ಕೂಟದ ಆಡಳಿತ ಮಂಡಳಿ ಸಭೆ, ಮಧ್ಯಾಹ್ನ 12 ಗಂಟೆಗೆ ವಾರ್ಷಿಕ ಸಭೆ ನಡೆಯಲಿರುವುದು. ಮತ್ತು ಮಧ್ಯಾಹ್ನ 2.00 ರಿಂದ ಮಹಾ ಅಧಿವೇಶನ ನಡೆಯಲಿರುವುದು.
  ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಗೌರವಾನ್ವಿತ ನಿರ್ದೇಶಕರು ಮತ್ತು ಒಕ್ಕೂಟದ ಬೆನ್ನೆಲುಬು ಮಹಾ ದಾನಿ ಆರ್ಗಾನಿಕ್ ಇಂಡಸ್ಟ್ರೀಸ್ ನ ಅಧ್ಯಕ್ಷರಾದ ತೋನ್ಸೆ ಶ್ರೀ ಆನಂದ ಶೆಟ್ಟಿ ಮತ್ತು ಶ್ರೀಮತಿ ಶಶಿರೇಖಾ ಆನಂದ ಶೆಟ್ಟಿ ಅವರು ಮಹಾಅಧಿವೇಶನ ಕಾರ್ಯಕ್ರಮವನ್ನು ಮಹಾ ನಿರ್ದೇಶಕರಾದ ಶ್ರೀ ಸದಾಶಿವ ಶೆಟ್ಟಿ ಕೂಳೂರು ಕನ್ಯಾನ ಇವರ ಗೌರವ ಉಪಸ್ಥಿತಿಯಲ್ಲಿ ಉದ್ಘಾಟಿಸಲಿದ್ದಾರೆ.
  ಮುಖ್ಯ ಅತಿಥಿಗಳಾಗಿ ಮುಂಬೈ ಬಂಟರ ಸಂಘದ ಅಧ್ಯಕ್ಷರಾದ ಶ್ರೀ ಚಂದ್ರಹಾಸ. ಕೆ .ಶೆಟ್ಟಿ ಮತ್ತು ಜಾಗತಿಕ ಮಟ್ಟದ ಎಲ್ಲಾ ಬಂಟರ ಸಂಘಗಳ ಅಧ್ಯಕ್ಷರುಗಳ ಘನ ಉಪಸ್ಥಿತಿಯಲ್ಲಿ
  ಈ ಕಾರ್ಯಕ್ರ ನಡೆಯಲಿವೆ.

  ಸಂಜೆ 5.30 ರಿಂದ ಸಮಾರೋಪ ಸಮಾರಂಭ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಒಕ್ಕೂಟದ ಮಾನ್ಯ ನಿರ್ದೇಶಕರುಗಳಾದ ಶ್ರೀ ಕೆ.ಪ್ರಕಾಶ್ ಶೆಟ್ಟಿಸಿಎಂಡಿ ಎಂ ಆರ್ ಜಿ ಗ್ರೂಪ್ ಆಫ್ ಕಂಪನೀಸ್, ಶ್ರೀ ಕೆ ಡಿ ಶೆಟ್ಟಿ, ಸಿಎಂಡಿ ಭವಾನಿ ಗ್ರೂಪ್ ಆಫ್ ಕಂಪನಿಸ್, ಶ್ರೀ ಕರುಣಾಕರ ಎಂ ಶೆಟ್ಟಿ ಸಿಎಂಡಿ ,ವಿಕೆ ಗ್ರೂಪ್ ಆಫ್ ಕಂಪನೀಸ್,ಶ್ರೀ ಕರ್ನಿರೆ ವಿಶ್ವನಾಥ್ ಶೆಟ್ಟಿ, ಅಧ್ಯಕ್ಷರು ಕರ್ಣಿರೇ ಫೌಂಡೇಶನ್ ಟ್ರಸ್ಟ, ಶ್ರೀ ರಾಜೇಶ್ ಶೆಟ್ಟಿ, ಸಿಎಂಡಿ ರಾಕ್ಷಿ ಡೆವಲಪರ್ಸ್ ಪ್ರೈವೇಟ್ ಲಿ., ಶ್ರೀ ಪ್ರವೀಣ್ ಶೆಟ್ಟಿ ವಕ್ವಾಡಿ ಸಿಎಂಡಿ ಫಾರ್ಚುನ್ ಗ್ರೂಪ್ ಆಫ್ ಹೋಟೆಲ್ಸ್ ದುಬೈ , ಶ್ರೀ ಪ್ರವೀಣ್ ಭೋಜ ಶೆಟ್ಟಿ ಅಧ್ಯಕ್ಷರು ಲೆಕ್ಕ ಪರಿಶೋಧನಾ ಸಂಸ್ಥೆ , ಶ್ರೀ ರಘುರಾಮ ಶೆಟ್ಟಿ ಎಂಡಿ ಹೇರಂಭ ಇಂಡಸ್ಟ್ರೀಸ್ ಇವರುಗಳ ಘನ ಉಪಸ್ಥಿತಿಯಲ್ಲಿ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯಲಿದೆ.

  ಮಹಾದಾನಿ, ನೊಂದವರ ಬದುಕಿನ ಆಶಾಕಿರಣ, ಬಡವರ ಕಣ್ಮಣಿ, ಸಾಮಾಜಿಕ ಚಿಂತಕ ಒಕ್ಕೂಟದ ಆಧಾರಸ್ತಂಭ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾ ನಿರ್ದೇಶಕರು, ಹೇರಂಬ ಇಂಡಸ್ಟ್ರೀಸ್ ಇದರ ಅಧ್ಯಕ್ಷ ಶ್ರೀ ಸದಾಶಿವ ಶೆಟ್ಟಿ ಕೂಳೂರು ಕನ್ಯಾನ ದಂಪತಿ ಗಳನ್ನು ವಿಶೇಷ ರೀತಿಯಲ್ಲಿ ಆದರಿಸಿ ಗೌರವಿಸುವ ಕಾರ್ಯಕ್ರಮ ಜೊತೆಗೆ ವಿವಿಧ ಬಂಟರ ಸಂಘಗಳ ಕಲಾವಿದರಿಂದ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ಜರಗಿ ಕೊನೆಯಲ್ಲಿ ಪ್ರೀತಿ ಭೋಜನ ನಡೆಯಲಿದೆ.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss