Sunday, September 15, 2024
spot_img
More

    Latest Posts

    ಸುರತ್ಕಲ್ : ನಿಂತಿದ್ದ ಲಾರಿ ಏಕಾಏಕಿ ಹಿಮ್ಮುಖ ಚಲನೆ,4 ಕಾರು ದ್ವಿಚಕ್ರ ವಾಹನ ಜಖಂ

    ಸುರತ್ಕಲ್ : ನಿಂತಿದ್ದ ಟ್ರಕ್‌ ಒಂದು ಹಿಮ್ಮುಖವಾಗಿ ಸಂಚರಿಸಿದ ಪರಿಣಾಮ ಓರ್ವ ಗಂಭೀರ ಗಾಯಗೊಂಡು, ನಾಲ್ಕು ಕಾರುಗಳು ಮತ್ತು ದ್ವಿಚಕ್ರ ವಾಹನ ಹಾಗೂ ಬಟ್ಟೆ ಮಳಿಗೆಯೊಂದು ಜಖಂಗೊಂಡಿರುವ ಘಟನೆ ಸುರತ್ಕಲ್ ನಲ್ಲಿ ಮಂಗಳವಾರ ಸಂಜೆ ನಡೆದಿದೆ.ಮಂಗಳೂರು ನೋಂದಣಿಯ ಸರಕು ಹೇರಿಕೊಂಡಿದ್ದ ಲಾರಿ ರೋರೋ ರೈಲಿನಲ್ಲಿ ತೆರಳುವ ಸಲುವಾಗಿ ಸುರತ್ಕಲ್ ಪೇಟೆಯಲ್ಲಿ ನಿಲ್ಲಿಸಲಾಗಿತ್ತು. ಚಾಲಕ ಲಾರಿಯನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ಹೊರಗೆ ತೆರಳಿದ್ದ ಎನ್ನಲಾಗಿದೆ.

    ನಿಲ್ದಾಣದ ರಸ್ತೆಯಲ್ಲಿರುವ ಭಾರತ್ ಪೆಟ್ರೋಲ್ ಬಂಕ್‌ಬಳಿ ನಿಲ್ಲಿಸಲಾಗಿದ್ದ ಲಾರಿ ಯುಟರ್ನ್ ನಲ್ಲಿ ಸಲೀಸಾಗಿ ಹಿಮ್ಮುಖವಾಗಿ ಚಲಿಸಿ ವಿರುದ್ಧ ಪಾಶ್ವದಲ್ಲಿರುವ ಮೂಡ ಮಾರುಕಟ್ಟೆಯ ಪಾರ್ಕಿಂಗ್ ನಲ್ಲಿ ನಿಲ್ಲಿಸಲಾಗಿದ್ದ ಕಾರುಗಳಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಕಾರಿನ ಬಳಿ ನಿಂತಿದ್ದ ಓರ್ವನಿಗೆ ಗಂಭೀರ ಗಾಯಗಳಾಗಿದ್ದು, ಆತನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.ಘಟನಾ ಸ್ಥಳಕ್ಕೆ ಸುರತ್ಕಲ್ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss