Tuesday, June 25, 2024
spot_img
More

  Latest Posts

  ಬೆಳ್ತಂಗಡಿ: ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸುವುದಾಗಿ ಲಕ್ಷಾಂತರ ರೂ. ಪಡೆದು ವಂಚನೆ

  ಬೆಳ್ತಂಗಡಿ:ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸುವುದಾಗಿ ಮಹಿಳೆ ಯೊಬ್ಬರಿಂದ 8 ಲಕ್ಷಕ್ಕೂ ಅಧಿಕ ಹಣ ಪಡೆದು ವಂಚಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಪಡಂಗಡಿಯಲ್ಲಿ ನಡೆದಿದೆ. ವಂಚನೆಗೆ ಒಳಗಾದವರನ್ನು ತಾಲ್ಲೂಕಿನ ಪಡಂಗಡಿ ನಿವಾಸಿ ನೀನಾ ರೋಡ್ರಿಗಸ್ ಎಂದು ಗುರುತಿಸಲಾಗಿದೆ. ಆ.1ರಂದು ಇವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆಮಾಡಿ ಶೇ.5ರ ಬಡ್ಡಿದರದಲ್ಲಿ ಸಾಲ ಕೊಡಿಸುವುದಾಗಿ ಹೇಳಿದ್ದಾರೆ. ಅದಕ್ಕಾಗಿ ಬ್ಯಾಂಕ್‌ ದಾಖಲೆಗಳನ್ನು ನೀಡುವಂತೆ ಸೂಚಿಸಿದ್ದು, ಅದರಂತೆ ಇವರು ತಮ್ಮ ಬ್ಯಾಂಕ್ ದಾಖಲೆಗಳನ್ನು ಅವರೊಂದಿಗೆ ಹಂಚಿಕೊಂಡಿದ್ದಾರೆ. ಇದಾದ ಬಳಿಕ ಅಪರಿಚಿತ ವ್ಯಕ್ತಿ ಲೋನ್ ಸಲುವಾಗಿ ಆ.1ರಿಂದ 8 ರವರೆಗೆ ಇವರ ಬ್ಯಾಂಕ್‌ ಖಾತೆಯಿಂದ 8,40,275 ರೂ. ಅನ್ನು ಆನ್‌ಲೈನ್‌ ಮುಖಾಂತರ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿ ವಂಚಿಸಿದ್ದಾರೆ ಎಂದು ವಂಚನೆಗೆ ಒಳಗಾಗಿರುವ ನಿನಾ ರೋಡ್ರಿಗಸ್ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss