ಕಾಪು: ರಂಗಕರ್ಮಿ, ಸಮಾಜ ಸೇವಕ ಕಾಪು ಲೀಲಾಧರ ಶೆಟ್ಟಿ (68) ಹಾಗೂ ಅವರ ಪತ್ನಿ ವಸುಂಧರಾ ಶೆಟ್ಟಿ (59) ಆತ್ಮಹತ್ಯೆ ಶರಣಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಸರಳ ಸಜ್ಜನ ವ್ಯಕ್ತಿತ್ವದ ಲೀಲಾಧರ ಶೆಟ್ಟಿ ಒಮ್ಮೆ ಕಾಪು ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಅತ್ಯುತ್ತಮ ನಾಟಕ ತಂಡ ಹೊಂದಿದ್ದರು. ಬಂಟರ ಸಂಘದಲ್ಲೂ ಸಕ್ರಿಯರಾಗಿದ್ದರು.
ಲೀಲಾಧರ ಶೆಟ್ಟಿಯವರು ಜಿಲ್ಲಾ ಕಬಡ್ಡಿ ಸಂಸ್ಥೆಯ ಉಪಾಧ್ಯಕ್ಷರು ಹಾಗೂ ಅತ್ಯಂತ ಸಮಾಜಮುಖಿ ಕಾರ್ಯ ನಿರ್ವಹಿಸಿದ ಸಮಾಜಸೇವಕರೂ ಆಗಿದ್ದರು. ವಿಶೇಷವಾಗಿ ರಂಗಕರ್ಮಿಯು ಆಗಿ ಕಳೆದ ಹಲವಾರು ವರ್ಷಗಳಿಂದ “ರಂಗಿತರಂಗ” ನಾಟಕ ತಂಡವನ್ನು ಮುನ್ನಡೆಸಿ ನಾಟಕ ನಿರ್ದೇಶನ, ನಟರಾಗಿ ಕೂಡಾ ಜನಾನುರಾಯಿಯಾಗಿದ್ದರು.
ಮುಂದಿನ ವಾರ ನಡೆಯಬೇಕಾಗಿದ್ದ ಕಬ್ಬಡಿ ಪಂದ್ಯಾಟಕ್ಕೆ ಬೇಕಾದ ಊಟ ಉಪಹಾರ ಶಾಮಿಯಾನ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಲೀಲಾಧರ ಶೆಟ್ಟಿ ಅವರೇ ತಯಾರಿ ಮಾಡಿಟ್ಟಿದ್ದರು. ಇವರ ಅಂತಿಮ ದರ್ಶನ ಇಂದು ಸಂಜೆ ನಾಲ್ಕು ಗಂಟೆಗೆ ಕಾಪು ಮಜೂರು ಕರಂದಾಡಿ ಶಾಲೆಯಲ್ಲಿ ವ್ಯವಸ್ಥೆ ಮಾಡಲಾಗಿದೆ.
ಇವರಿಗೆ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿತು. ತುಳುನಾಡ ರಕ್ಷಣಾ ವೇದಿಕೆಯ ದಶಮಾನೋತ್ಸವ ಅಂಗವಾಗಿ ನಡೆದ ವಿಶ್ವ ತುಳು ಸಮ್ಮೇಳನ ತೌಳವ ಉಚ್ಚಯದಲ್ಲಿ ಗೌರವ ಸನ್ಮಾನಕ್ಕೆ ಪಾತ್ರರಾಗಿದ್ದರು.
ಇವರ ಅಕಾಲಿಕ ಮರಣವು ತೀವ್ರ ಬೇಸರ ತಂದಿದೆ ಎಂದು ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅದ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪು ಮತ್ತು
ಉಡುಪಿ ಜಿಲ್ಲಾ ವೀಕ್ಷಕರಾದ ಫ್ರಾಂಕಿ ಡಿಸೋಜಾ ಕೊಳಲಗಿರಿ, ಉಡುಪಿ ತಾಲೂಕು ಅಧ್ಯಕ್ಷರಾದ ಕೃಷ್ಣಕುಮಾರ್, ಗೌರವ ಅದ್ಯಕ್ಷರಾದ ರವಿ ಅಚಾರ್, ಉಪಾಧ್ಯಕ್ಷರಾದ ಜಯರಾಮ ಪೂಜಾರಿ, ಪ್ರಧಾನ ಕಾರ್ಯದರ್ಶಿ ರೋಷನ್ ಡಿಸೋಜ, ಮಹಿಳಾ ಅಧ್ಯಕ್ಷರಾದ ಶೋಭಾ ಪಂಗಾಳ, ಮಹಿಳಾ ಪ್ರಧಾನ ಕಾರ್ಯದರ್ಶಿ ನಾಗಲಕ್ಷ್ಮಿ, ಕಾಪು ಮಹಿಳಾ ಅಧ್ಯಕ್ಷರಾದ ಅನುಸೂಯ ಶೆಟ್ಟಿ, ಅಟೊ ಘಟಕದ ಅನಿಲ್ ಪೂಜಾರಿ,ಯುವ ಘಟಕದ ರಾಹುಲ್ ಪೂಜಾರಿ,
ವಿದ್ಯಾರ್ಥಿ ಘಟಕದ ಅಭಿಲಾಷ್ ಮತ್ತಿತರ ತುಳುನಾಡ ರಕ್ಷಣಾ ವೇದಿಕೆ ಪದಾಧಿಕಾರಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.