ಬಂಟ್ವಾಳ: ಇಲ್ಲಿನ ವಾಮದಪದವು ಸಮೀಪದ ಕುಂಡೋಳಿ ನಿವಾಸಿ, ಮಾಜಿ ಮಂಡಲ ಪ್ರಧಾನ ಕುಂಡೋಳಿ ಪದ್ಮನಾಭ ಶೆಟ್ಟಿ (82) ಇವರು ಅಲ್ಪ ಕಾಲದ ಅಸೌಖ್ಯದಿಂದ ಭಾನುವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.
ಮೃತರಿಗೆ ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರು ಇದ್ದಾರೆ. ಪ್ರಗತಿಪರ ಕೃಷಿಕರಾಗಿ, ವಾಮದ ಪದವು ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ನಿರಂತರ 15 ವರ್ಷ ಅಧ್ಯಕ್ಷರಾಗಿ , ಬಂಟ್ವಾಳ ಭೂ ಅಬಿವೃಧ್ದಿ ಬ್ಯಾಂಕಿನ ನಿರ್ದೇಶಕರಾಗಿ, ಪದವು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮೊಕ್ತೇಸರರಾಗಿ, ನೀಲಿ ಶ್ರೀ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರಡಿ ಮೊಕ್ತೇಸರರಾಗಿ, ಕಂಬಳ ಕ್ಷೇತ್ರದಲ್ಲಿ ಓಟದ ಕೋಣಗಳ ಮಾಲೀಕರಾಗಿ, ಜನಸಂಘದಿಂದಲೂ ಹಿರಿಯ ಧುರೀಣರಾಗಿ, ಕೊಡುಗೈ ದಾನಿಯಾಗಿ ವಿವಿಧ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದರು. ಮೃತರ ಅಂತ್ಯಕ್ರಿಯೆ ಭಾನುವಾರ ಸಂಜೆ 3 ಗಂಟೆಗೆ ಕುಂಡೋಳಿ ಸ್ವಗೃಹ ಬಳಿ ನೆರವೇರಲಿದೆ.
