ಕಾಪು : ಕರಾವಳಿ ಜಿಲ್ಲೆಗಳ ಪಡಿತರ ಚೀಟಿದಾರರಿಗೆ ಸಿಹಿಸುದ್ದಿ, ಶೀಘ್ರವೇ ಪಡಿತರದ ಜೊತೆಗೆ ಕುಚ್ಚಲಕ್ಕಿ ವಿತರಣೆ ಮಾಡಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಜಿಲ್ಲೆಗಳಲ್ಲಿ ಪಡಿತರದ ಜತೆಗೆ ಕುಚ್ಚಲಕ್ಕಿ ನೀಡಲು ಸರ್ಕಾರ ಬದ್ಧವಿದೆ.
ಕುಚ್ಚಲಕ್ಕಿ ವಿತರಿಸುವ ಯೋಜನೆಗೆ ಈಗಾಗಲೇ ಅನುಮೋದನೆ ದೊರೆತಿದ್ದು ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ. ಮುಂದಿನ ದಿನಗಳಲ್ಲಿ ತೊಡಕು ನಿವಾರಿಸಿ ವಿತರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಕರಾವಳಿಯಲ್ಲಿ ಕುಚ್ಚಲಕ್ಕಿಗೆ ಪೂರಕವಾದ ಭತ್ತದ ತಳಿಗಳಾದ ಎಂಒ4, ಅಭಿಲಾಷಾ, ಜ್ಯೋತಿ, 1001 ತಳಿಗಳ ಪಟ್ಟಿ ಮಾಡಿ ಕೇಂದ್ರ ಸರಕಾರದಿಂದ ಅನುಮೋದನೆ ಪಡೆದು ಹೆಚ್ಚುವರಿಯಾಗಿ 500 ರೂ. ಸಬ್ಸಿಡಿ ನೀಡಿ ಭತ್ತ ಖರೀದಿಗೆ ಮುಂದಾಗಿದ್ದೇವೆ ಎಂದು ಹೇಳಿದ್ದಾರೆ.
