Friday, April 26, 2024
spot_img
More

    Latest Posts

    ಎಚ್ಚರ..! ಕೆಎಸ್‌ಆರ್‌ಟಿಸಿಯ ಈ ನೇಮಕಾತಿ ಜಾಹೀರಾತು ಸುಳ್ಳು : ಮುಖ್ಯಸ್ಥ ಮರಿಗೌಡ ಸ್ಪಷ್ಟನೆ

    ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ಯಲ್ಲಿ ಕೆಲಸ ಖಾಲಿ ಇದೆ ಎಂಬ ನೇಮಕಾತಿ ಜಾಹೀರಾತು ಒಂದು ಹರಿದಾಡುತ್ತಿದೆ. ಇದು ನಕಲಿಯಾಗಿದ್ದು, ಈ ಕುರಿತು ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದೆ.

    ಕೆಎಸ್‌ಆರ್‌ಟಿಸಿಯಲ್ಲಿ ಡ್ರೈವರ್ ಹುದ್ದೆಗಳು ಖಾಲಿ ಇವೆ ಎಂಬ ಜಾಹೀರಾತು ಇದಾಗಿದೆ. ಮಂಗಳೂರು 250, ಪುತ್ತೂರು 200, ಚಾಮರಾಜನಗರ 100, ರಾಮನಗರದ ವಿಭಾಗದಲ್ಲಿ 100 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಾಹೀರಾತು ನೀಡಲಾಗಿದೆ.

    ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯೊಂದು ಕೆಎಸ್‌ಆರ್‌ಟಿಸಿ ಹೆಸರು ಬಳಕೆ ಮಾಡಿಕೊಂಡು ಈ ಜಾಹೀರಾತು ನೀಡಿದೆ. ಇದು ನಕಲಿ ಜಾಹೀರಾತು ಆಗಿದ್ದು, ಈ ಕುರಿತು ಶಿವಮೊಗ್ಗ ಕೆಎಸ್‌ಆರ್‌ಟಿಸಿ ವಿಭಾಗದ ಮುಖ್ಯಸ್ಥ ಮರಿಗೌಡ ದೂರು ಕೊಟ್ಟಿದ್ದಾರೆ.

    ಈ ಕುರಿತು ಮರೀಗೌಡ ಮಾತನಾಡಿದ್ದು, ‘ಡ್ರೈವರ್‌ಗಳು ಬೇಕಾಗಿದ್ದಾರೆ ಎಂದು ಜಾಹೀರಾತು ನೀಡಲಾಗಿದ್ದು, 650 ಹುದ್ದೆಗಳು ಖಾಲಿ ಇವೆ ಎಂದು ಪತ್ರಿಕಾ ಜಾಹೀರಾತಿನಲ್ಲಿ ತಿಳಿಸಲಾಗಿದೆ. ಆದರೆ ಈ ರೀತಿಯ ಯಾವುದೇ ಜಾಹೀರಾತನ್ನು ನಿಗಮದಿಂದ ಹೊರಡಿಸಿಲ್ಲ’ ಎಂದು ಮರೀಗೌಡ ಸ್ಪಷ್ಟಪಡಿಸಿದ್ದಾರೆ.

    ಜಾಹೀರಾತಿನಲ್ಲಿ ಡ್ರೈವರ್‌ ಹುದ್ದೆಗೆ 7ನೇ ತರಗತಿ ವಿದ್ಯಾಭ್ಯಾಸ ನಿಗದಿ ಮಾಡಲಾಗಿದೆ ಎಂಬ ಮಾಹಿತಿ ಇದೆ. ಆದರೆ ನಿಗಮದ ನೇಮಕಾತಿ ನಿಯಮದ ಪ್ರಕಾರ 10ನೇ ತರಗತಿ ಓದಿರಬೇಕು. ಬೆಂಗಳೂರಿನ ಕೇಂದ್ರ ಕಚೇರಿಯಿಂದ ಯಾವುದೇ ಈ ರೀತಿಯ ಪ್ರಕಟಣೆ ನೀಡಿಲ್ಲ ಎಂದು ತಿಳಿಸಲಾಗಿದೆ.

    ಜಾಹೀರಾತಿನಲ್ಲಿ ಏನಿದೆ?

    ಕೆಎಸ್‌ಆರ್‌ಟಿಸಿ (ಹೆಚ್‌ಪಿವಿ) ಖಾಯಂ ನೌಕರಿ. ಮಂಗಳೂರು, ಪುತ್ತೂರು, ಚಾಮರಾಜನಗರ, ರಾಮನಗರ ವಿಭಾಗದಲ್ಲಿ ಕೆಲಸ ಖಾಲಿ ಇದೆ. ಅರ್ಜಿ ಸಲ್ಲಿಸುವವರು 7ನೇ ತರಗತಿ ಪಾಸಾಗಿರಬೇಕು. 2 ವರ್ಷದ ಅನುಭವ ಹೊಂದಿರಬೇಕು ಎಂದು ಜಾಹೀರಾತಿನಲ್ಲಿ ಮಾಹಿತಿ ನೀಡಲಾಗಿದೆ. ಅಭ್ಯರ್ಥಿಗಳ ವೇತನ 28,990 ಆಗಿದ್ದು, 22,840 ಕೈಗೆ ಸಿಗಲಿದೆ. ವಾರದ ರಜೆ, ಯೂನಿಫಾರ್ಮ್, ಇಪಿಎಫ್ ಸೌಲಭ್ಯ ಲಭ್ಯವಿರುತ್ತದೆ ಎಂದು ತಿಳಿಸಲಾಗಿತ್ತು. ಬಯೋಡೇಟಾದೊಂದಿಗೆ ಅರ್ಜಿ ಶುಲ್ಕ 1000 ಡಿಡಿಯನ್ನು ಸಲ್ಲಿಸಬೇಕು ಎಂದು ತಿಳಿಸಲಾಗಿತ್ತು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss