ಉಡುಪಿಯ ಕಿದಿಯೂರು ಹೋಟೇಲ್ ನಲ್ಲಿ 18-06-2023 ಆದಿತ್ಯವಾರ ಸಂಜೆ 5 ಗಂಟೆಗೆ ತುಳುನಾಡ ರಕ್ಷಣಾ ವೇದಿಕೆ ಯ ಉಡುಪಿ ವಿಧಾನ ಸಭಾ ಕ್ಷೇತ್ರದ ಸಭೆಯು ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಕೇಂದ್ರೀಯ ಮಂಡಳಿ ಸ್ಥಾಪಕ ಅಧ್ಯಕ್ಷರಾದ ಯೋಗಿಶ್ ಶೆಟ್ಟಿ ಜಪ್ಪು ಅವರು ವಹಿಸಿದ್ದರು ಕೇಂದ್ರೀಯ ಮಂಡಳಿ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ ರವರು ಸಭೆಯ ಪ್ರಾಸ್ತವಿಕ ಭಾಷಣಗೈದರು. ಬಳಿಕ ಮುಂದಿನ ಅವಧಿಗೆ ಉಡುಪಿ ವಿಧಾನಸಭಾ ಕ್ಷೇತ್ರದ ಸಮಿತಿ ರಚನೆ ಮಾಡಲಾಯಿತು.
ಸಭೆಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ಕೃಷ್ಣ ಕುಮಾರ್ ರವರನ್ನು ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಶಂಕರ್ ಪೂಜಾರಿ
ಉಪಾಧ್ಯಕ್ಷರುಗಳಾಗಿ ಜಯ ಪೂಜಾರಿ ಮತ್ತು ರವಿ ಪೂಜಾರಿ ಅದೇ ರೀತಿ ,ಸಲಹೆಗಾರರಾಗಿ ಸುಧಾಕರ್ ಪೂಜಾರಿ,
ಪ್ರಧಾನ ಕಾರ್ಯದರ್ಶಿಯಾಗಿ ಗಣೇಶ್ ಮಲ್ಯ, ಸಂಘಟನಾ ಕಾರ್ಯದರ್ಶಿಯಾಗಿ ಸುನೀಲ್ ಫೆರ್ನಾಂಡೀಸ್,
ಸಾಮಾಜಿಕ ಜಾಲತಾಣ ಪ್ರಮುಖರಾಗಿ ರೋಶನ್,
ರವರನ್ನು ಆಯ್ಕೆ ಮಾಡಲಾಯಿತು.
ನೂತನವಾಗಿ ಆಯ್ಕೆಯಾದ ಪಧಾಧಿಕಾರಿಗಳನ್ನು ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪು ರವರು ಶಾಲು ಹೊದಿಸಿ ಅಭಿನಂದಿಸಿದರು.
ಮುಂದಿನ ದಿನಗಳಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಮಹಿಳಾ ಘಟಕ ಯುವ ಘಟಕ ಗ್ರಾಮ ಘಟಕ ಗಳನ್ನು ರಚಿಸಿ ತುಳುನಾಡು ಅಭಿವೃದ್ಧಿ ಐಕ್ಯತೆ ಮಾಡುವಲ್ಲಿ ಸಮರ್ಥವಾಗಿ ಸಂಘಟನೆಯನ್ನು ಬೆಳೆಸಲು ಪ್ರಯತ್ನಿಸಬೇಕು. ಒಗ್ಗಟ್ಟಿನಲ್ಲಿ ಎಲ್ಲಾ ಕಾರ್ಯಕರ್ತರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಜನರ ಸಮಸ್ಯೆ ಪರಿಹರಿಸಲು ಪ್ರಯತ್ನಿಸಬೇಕೆಂದು ನೂತನ ಆಯ್ಕೆ ಯಾದ ಪದಾಧಿಕಾರಿಗಳಿಗೆ ಸ್ಥಾಪಕಾದ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ರವರು ಹಿತನುಡಿಗಳಾನ್ನಡಿದರು.