ಎರ್ನಾಕುಲಂ : ಕೇರಳದ ಎರ್ನಾಕುಲಂ ನಲ್ಲಿ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಕನ್ವೆನ್ಷನ್ ಹಾಲ್ ಒಂದರಲ್ಲಿ ಪ್ರಾರ್ಥನೆ ಮಾಡುವ ಸಂದರ್ಭದಲ್ಲಿ ಸ್ಪೋಟಗೊಂಡು ಓರ್ವ ಸಾವನ್ನಪ್ಪಿದ್ದು, 24 ಜನರಿಗೆ ಗಾಯವಾಗಿರುವ ಘಟನೆ ಕೇರಳದ ಎರ್ನಾಕುಲಂ ನಲ್ಲಿ ದುರ್ಘಟನೆ ಸಂಭವಿಸಿದೆ.
ಎರ್ನಾಕುಲಂ ಕನ್ವೆನ್ಷನ್ ಹಾಲ್ನಲ್ಲಿ ನಡೆದ ಘಟನೆ ಯಾಗಿದ್ದು,ಕಲಮ ಸೇರಿ ಕನ್ವೆನ್ಷನ್ ಸೆಂಟರ್ ನಲ್ಲಿ ಬ್ಲಾಸ್ಟ್ ಆಗಿದ್ದು ಸ್ಪೋಟದ ಬಳಿಕ ಕನ್ವೆನ್ಷನ್ ಸೆಂಟರ್ ಸ್ಪೋಟದ ತೀರ್ವತೆಗೆ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು ಸರಣಿ ಸ್ಫೋಟದಲ್ಲಿ 24 ಜನರಿಗೆ ಗಾಯವಾಗಿದೆ. ಸ್ಥಳಕ್ಕೆ ಫಾರಿನ್ಸಿಕ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಗಾಯಾಳುಗಳಿಗೆ ಎರ್ನಾಕುಲಂ ಹಾಗೂ ಕೊಟ್ಟಯಂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕನ್ವೆನ್ಷನ್ ಹಾಲ್ ನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದ ವೇಳೆ ಸ್ಫೋಟಗೊಂಡಿದ್ದು, ಕಾರ್ಯಕ್ರಮದಲ್ಲಿ 2000ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು ಎಂದು ಮಾಹಿತಿ ಇದೆ. ಈ ವೇಳೆ ಗಾಯಾಳುಗಳಿಗೆ ಎರ್ನಾಕುಲಂ ಹಾಗೂ ಕೊಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಸ್ಪೋಟದ ತೀವ್ರತೆಗೆ ಹಾಲಿನಲ್ಲಿದ್ದ ಜನರು ದಿಕ್ಕಪಾಲಾಗಿ ಓಡಿದ್ದು ಈ ವೇಳೆ ಅಲ್ಲಲ್ಲಿ ಮೊಬೈಲ್ ಗಳು ಸೇರಿದಂತೆ ಇತರೆ ವಸ್ತುಗಳು ಚಲ್ಲಪಲ್ಲಿ ಯಾಗಿ ಬಿದ್ದಿರುವ ದೃಶ್ಯ ಕಂಡು ಬಂದಿದೆ.
ಒಟ್ಟು ನಾಲ್ಕು ಕಡೆ ಸರಣಿ ಬ್ಲಾಸ್ಟ್ ಆಗಿದೆ ಎಂದು ಮಾಹಿತಿ ತಿಳಿದು ಬಂದಿದ್ದು ಕಲಮಸ್ಸೇರಿ ಕನ್ವೆನ್ಷನ್ ಸೆಂಟರ್ನಲ್ಲಿ ಬ್ಲಾಸ್ಟ್ ನಡೆದಿದ್ದು ಸ್ಫೋಟದ ಬಳಿಕ ಕನ್ವೆನ್ಷನ್ ಸೆಂಟರ್ ಹೊತ್ತಿ ಉರಿದಿದೆ. ಆದರೆ ಈ ಸ್ಫೋಟದ ಹಿನ್ನೆಲೆ ಯಾವ ಸಂಘಟನೆಯ ಕೈವಾಡವಿದೆ ಎಂದು ತನಿಖೆ ಬಳಿಕ ತಿಳಿದು ಬರಲಿದೆ.