Sunday, July 21, 2024
spot_img
More

    Latest Posts

    ಹಮಾಸ್ ಉಗ್ರರ ಬಾಂಬ್ ದಾಳಿಗೆ ಕೇರಳ ಮೂಲದ ನರ್ಸ್ ಗೆ ಗಾಯ

    ಕೇರಳ : ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಿರುವ ಕೇರಳದ ನರ್ಸ್ ಭಾರತದಲ್ಲಿರುವ ವಾಸಿಸುವ ತನ್ನ ಪತಿಯೊಂದಿಗೆ ವೀಡಿಯೊ ಕರೆ ಮಧ್ಯದಲ್ಲಿದ್ದಾಗ ಪ್ಯಾಲೆಸ್ತೀನ್ ಭಯೋತ್ಪಾದಕ ಗುಂಪು ಹಮಾಸ್‌ನ ದಾಳಿಯ ಸಮಯದಲ್ಲಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

    ಏಳು ವರ್ಷಗಳಿಂದ ಇಸ್ರೇಲ್‌ನಲ್ಲಿರುವ ಶೀಜಾ ಆನಂದ್ (41) ಗಾಯಗೊಂಡಿರುವ ಕೇರಳದವರು. ಅವರು ಶನಿವಾರ ಮುಂಜಾನೆ ಇಸ್ರೇಲ್‌ನ ಮೇಲೆ ಹಮಾಸ್ ಅನಿರೀಕ್ಷಿತ ದಾಳಿ ಬಳಿಕ ಮನೆಯವರಿಗೆ ಕರೆ ಮಾಡಿ ಸುರಕ್ಷಿತವಾಗಿದ್ದೇನೆ ಎಂದಿದ್ದರು. ಬಳಿಕ ಅವಳು ತನ್ನ ಪತಿಗೆ ಮತ್ತೊಂದು ಕರೆ ಮಾಡಿದಳು ಈ ವೇಳೆ ಭಯಂಕರವಾದ ದೊಡ್ಡ ಶಬ್ದವೊಂದು ಕೇಳಿ ಬಂದಿದ್ದು, ಕರೆ ಕಡಿತಗೊಂಡಿದೆ ಎಂದು ತಿಳಿದು ಬಂದಿದೆ. ಬಳಿಕ ಇಸ್ರೇಲ್ ನಲ್ಲಿರುವ ಕೇರಳಿಗರೊಬ್ಬರು ಆನಂದ್ ಅವರ ಕುಟುಂಬಕ್ಕೆ ಕರೆ ಮಾಡಿದ ಶೀಜಾ ಆನಂದ್ ಅವರು ಬಾಂಬ್ ದಾಳಿಯಲ್ಲಿ ಗಾಯಗೊಂಡಿದ್ದಾರೆ ಮತ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ತಿಳಿಸಿದರು. ಶಿಜಾ ಆನಂದ್ ಅವರ ಪತಿ ಮತ್ತು ಅವರ ಇಬ್ಬರು ಮಕ್ಕಳು ಭಾರತದಲ್ಲಿದ್ದಾರೆ. ಪತಿ ಪುಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ.ಏತನ್ಮಧ್ಯೆ, ಕೇರಳದ 200 ಕ್ಕೂ ಹೆಚ್ಚು ಜನರು ಬೆತ್ಲೆಹೆಮ್‌ನ ಹೋಟೆಲ್‌ನಲ್ಲಿ ಸಿಲುಕಿಕೊಂಡಿದ್ದಾರೆ ಮತ್ತು ಪ್ರಸ್ತುತ ಸುರಕ್ಷಿತವಾಗಿದ್ದಾರೆ. ಕೊಚ್ಚಿಯ ಇನ್ನೂ 45 ಜನರು ಪ್ಯಾಲೆಸ್ತೀನ್‌ನ ಹೋಟೆಲ್‌ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ. ಗುಂಪು ಸುರಕ್ಷಿತವಾಗಿದ್ದು, ಗಡಿ ದಾಟಲು ಅನುಮತಿ ಪಡೆದಿದೆ ಎಂದು ಮಾತೃಭೂಮಿ ತಿಳಿಸಿದೆ. ಗಾಜಾ ಪಟ್ಟಿಯಲ್ಲಿ ಇರುವ ಹಮಾಸ್‌ ಉಗ್ರರು ಇಸ್ರೇಲ್ ಮೇಲೆ ಭಯಂಕರ ದಾಳಿ ನಡೆಸಿದ್ದರು. ಹಮಾಸ್ ಉಗ್ರರು ಇಸ್ರೇಲ್ ಮೇಲೆ 5,000 ರಾಕೆಟ್‌ಗಳನ್ನು ಹಾರಿಸಿ ನೂರಾರು ಜನರನ್ನು ಹತ್ಯೆ ಮಾಡಿದ್ದರು. ಬಳಿಕ ಸಿಟ್ಟಿಗೆದ್ದ ಇಸ್ರೇಲ್ ಹಮಾಸ್ ಭಯೋತ್ಪಾದಕ ಗುಂಪಿನ ವಿರುದ್ಧ ಯುದ್ಧ ಘೋಷಿಸಿತು. ಮೂರು ದಿನಗಳ ಸಂಘರ್ಷವು ಈಗಾಗಲೇ ಎರಡೂ ಕಡೆಗಳಲ್ಲಿ 1,100 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ , ಇಸ್ರೇಲ್‌ನಲ್ಲಿ 44 ಸೈನಿಕರು ಸೇರಿದಂತೆ 700 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss