ಮಂಗಳೂರು: ಮಾದಕದ್ರವ್ಯ ವಿರುದ್ಧ ಹೋರಾಟ ಸಮಿತಿ, ಕಾಟಿಪಳ್ಳ ಇದರ ವತಿಯಿಂದ ಪಣಂಬೂರು ಮುಸ್ಲಿಂ ಜಮಾತ್ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಇತ್ತೀಚೆಗೆ ಮಾದಕ ದ್ರವ್ಯ ವಿರುದ್ಧ ಜನಜಾಗ್ರತಿ ಕಾಲ್ನಡಿಗೆ ಜಾಥಾ ಹಾಗೂ ಜನಜಾಗ್ರತಿ ಶಿಬಿರ ನಡೆಯಿತು.
ಕಾಲ್ನಡಿಗೆ ಜಾಥಾದಲ್ಲಿ ಕಾಟಿಪಳ್ಳ ಪರಿಸರದ ಸುಮಾರು 500 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.
ನಂತರ ನಡೆದ ಮಾದಕದ್ರವ್ಯ ವಿರುದ್ಧ ಜನ ಜಾಗೃತಿ ಶಿಬಿರದಲ್ಲಿ ಮೌಲಾನಾ ಅಬ್ದುಲ್ ಅಝೀಝ್ ಧಾರಿಮಿಯವರು ಮುಖ್ಯ ಭಾಷಣ ಮಾಡಿದರು. ಮುಹ್ಯುದ್ದೀನ್ ಜುಮಾ ಮಸೀದಿ ಕಾಟಿಪಳ್ಳ ಇದರ ಖತೀಬರಾದ ಅಬ್ದುಲ್ ನಾಸರ್ ಮದನಿಯವರು ದುಆ ನೆರವೇರಿಸಿ ಜಾಥಾಕ್ಕೆ ಚಾಲನೆ ನೀಡಿದರು.
ಪಣಂಬೂರು ಮುಸ್ಲಿಂ ಜಮಾತ್ ಕಾಟಿಪಳ್ಳ ಇದರ ಅಧ್ಯಕ್ಷ ರಹಮತುಲ್ಲಾ ಉಪಸ್ಥಿತರಿದ್ದರು.
ಸಲೀಂ ರಝಾಕ್ ಶ್ಯಾಡೋ ಸ್ವಾಗತಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಸಮದ್ ಕಾಟಿಪಳ್ಳ ಧನ್ಯವಾದ ಸಮರ್ಪಿಸಿದರು.