ಕಟಪಾಡಿ ಸನಿಹದ ಅಚ್ಚಡ ರೈಲ್ವೇ ಹಳಿಯ ಬಳಿ ಅಪರಿಚಿತ ಯುವಕನೋರ್ವನ ಮೃತದೇಹ ಇಂದು ಮುಂಜಾನೆ ಪತ್ತೆಯಾಗಿದೆ. ರೈಲು ಹಳಿಯಲ್ಲಿ ಓಡಾಡುವ ವೇಳೆ ಮುಂಜಾನೆ 4.30 ಗಂಟೆ ಸುಮಾರಿಗೆ ಸಂಚರಿಸುವ ರೈಲು ಡಿಕ್ಕಿ ಹೊಡೆದಿರಬಹುದು ಅಥವಾ ರೈಲಿನಿಂದ ಆಯ ತಪ್ಪಿ ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ.ಸಮಾಜ ಸೇವಕರಾದ ಸೂರಿ ಶೆಟ್ಟಿ ಕಾಪು, ಆಸ್ಟಿನ್ ಕೋಟ್ಯಾನ್ ಕಟಪಾಡಿ, ಆಂಬುಲೆನ್ಸ್ ಚಾಲಕ ನಾಗರಾಜ ಛಿದ್ರಗೊಂಡಿರುವ ಯುವಕನ ಶವವನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಕಾರ್ಯಾಚರಿಸುತ್ತಿದ್ದಾರೆ.ಪೊಲೀಸರು ಸ್ಥಳಕ್ಕಾಮಿಸಿ ಪರಿಶೀಲನೆ ನಡೆಸಲಿದ್ದಾರೆ.
©2021 Tulunada Surya | Developed by CuriousLabs