Wednesday, February 28, 2024
spot_img
More

  Latest Posts

  ಕಟಪಾಡಿ – ಅರಸಿನ ಕಟ್ಟೆ ರಸ್ತೆ ದುರಸ್ತಿಗೆ ಉಡುಪಿ ತುಳುನಾಡ ರಕ್ಷಣಾ ವೇದಿಕ ಆಗ್ರಹ

  ಉಡುಪಿ: ಕಟಪಾಡಿ -ಅರಸಿನ ಕಟ್ಟೆ- ಬೆಳ್ಮಣ್ ಹೋಗುವ ರಸ್ತೆಗಳಲ್ಲಿನ ತಗ್ಗು-ಗುಂಡಿಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಈ ರಸ್ತೆ ಎರಡು ಬದಿಯಲ್ಲಿ ವಾಹನಗಳು ಎದುರು ಬದುರಾದರೆ ಸಾಕು ವಾಹನ ಬಿದ್ದೆ ಬಿಟ್ಟಿತ್ತು ಏನೊ ಎಂಬ ಭಯವಾಗಿ ಕಾಡುತ್ತದೆ. ಡಾಂಬರ್‌ ರಸ್ತೆ ಬದಿಯಲ್ಲಿ ಅಷ್ಟೊಂದು ಪ್ರಮಾಣದ ಕಚ್ಚಾ ರಸ್ತೆಯ ಮಣ್ಣು ಕಿತ್ತುಕೊಂಡು ಹೋಗಿದ್ದರೂ ತಗ್ಗು ಗುಂಡಿಗಳನ್ನು ದುರಸ್ತಿ ಮಾಡುವ ಕಾರ್ಯ ಮಾಡಿಲ್ಲ. ಈ ಪ್ರದೇಶದಲ್ಲಿ ಹಲವಾರು ಅಪಘಾತಗಳಾಗಿದ್ದು ಸಾವು ನೋವಾದ ಘಟನೆಗಳು ನಡೆದಿದೆ ವಾಹನ ಸವಾರರು ತನ್ನ ಪ್ರಾಣ ಭಯದಲ್ಲಿ ಸಾಗಬೇಕಾಗುತ್ತದೆ ಪ್ರತಿ ದಿನ ಒಂದಲ್ಲ ಒಂದು ಅಪಘಾತ ಘಟನೆಗಳು ನಡೆಯುತ್ತಿದೆ. ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ತುರ್ತು ಭೇಟಿ ನೀಡಿದ ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಅಧ್ಯಕ್ಷ ಅಧ್ಯಕ್ಷ ಸ್ಥಳಕ್ಕೆ ಭೇಟಿ ನೀಡಿ ಸಂಬಂದ ಪಟ್ಟ ಇಲಾಖೆ ಅಧಿಕಾರಿಗಳು ಕೂಡಲೆ ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾಗಬೇಕು ಎಂದು ಅಗ್ರಹಿಸಿದ್ದರು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡೋದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು. ಜನರ ಪ್ರಾಣದೊಂದಿಗೆ ಚೆಲ್ಲಾಟವಾಡುವುದು ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ ಎಂದು ಉಡುಪಿ ತುಳುನಾಡ ರಕ್ಷಣಾ ವೇದಿಕೆ ಮುಖಂಡರುಗಳು ಆಗ್ರಹಿಸಿದರು.

  ಕೇಂದ್ರೀಯ ಮಂಡಳಿ ಅದ್ಯಕ್ಷರ ಜೊತೆ ಉಡುಪಿ ಜಿಲ್ಲಾ ವೀಕ್ಷಕ ಫ್ರಾಂಕಿ ಡಿಸೋಜಾ, ಪ್ರಶಾಂತ್ ಭಟ್ ಕಡಬ,
  ಮಹಿಳಾ ಘಟಕ ಅಧ್ಯಕ್ಷರಾದ ಶೋಭಾ ಪಾಂಗಳ, ಸಲಹೆಗಾರ ಸುಧಾಕರ ಅಮಿನ್, ಉಪಾಧ್ಯಕ್ಷ ಜಯರಾಮ ಪೂಜಾರಿ, ಯುವ ಘಟಕ ಅಧ್ಯಕ್ಷ ರಾಹುಲ್ ಸುನಂದ ಟೀಚರ್, ವಿಜಯಲಕ್ಷ್ಮಿ, ಗುಣವತಿ, ಶಾಂಭಾವಿ , ನಂದನ , ಗುಲಾಬಿ ,ಸುಮತಿ, ಲಕ್ಷ್ಮಿ , ರೇಣುಕಾ, ಶೋನ್ ಡಿಸೋಜ, ಗೈಟನ್ ಡಿಸೋಜ, ಮಹಿಳಾ ಘಟಕ ಪ್ರಧಾನ ಕಾರ್ಯದರ್ಶಿ ನಾಗಲಕ್ಷ್ಮಿ ಆಗಮಿಸಿದರು.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss