ಉಡುಪಿ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷರಾದ ಶ್ರೀ ಯೋಗೀಶ್ ಶೆಟ್ಟಿ ಜೆಪ್ಪು ಇವರ ಮಾರ್ಗದರ್ಶನ ಮತ್ತು ಸಹಕಾರದೊಂದಿಗೆ 31-08-2023 ಗುರುವಾರ ಉಡುಪಿ ಜಿಲ್ಲಾ ವ್ಯಾಪ್ತಿಯ ಕಾಪು ತಾಲೂಕು ಘಟಕದ ಪ್ರಥಮ ಸಭೆಯನ್ನು ಜಿಲ್ಲಾ ವೀಕ್ಷಕರಾದ ಶ್ರೀ ಫ್ರ್ಯಾಂಕಿ ಡಿಸೋಜರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ತಾಲೂಕು ಘಟಕಕ್ಕೆ ನೂತನ ಸದಸ್ಯರಾಗಿ ನೇಮಕರಾದ ಶ್ರೀಮತಿಯರಾದ ಲಲಿತಾ ಆಚಾರ್ಯ ,ಶ್ರೀಮತಿ ರಂಜಿತಾ ಶೆಟ್ಟಿ , ಶ್ರೀಮತಿ ಸುನಂದಾ ಶೆಟ್ಟಿ , ಶ್ರೀಮತಿ ಆಶಾ , ಶ್ರೀಮತಿ ಮಾಲತಿ ಆಚಾರ್ಯ , ಕು।ರಶ್ಮಿತ , ಶ್ರೀಮತಿ ದೀಪಾ ಶೆಟ್ಟಿಯವರು ಅಧಿಕೃತವಾಗಿ ಸಂಘಟನಾ ಸದಸ್ಯರಾಗಿ ಸೇರ್ಪಡೆಯಾದರು.
ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳಾಗಿ ಕಾಪು ತಾಲೂಕು ಅಧ್ಯಕ್ಷೆಯಾಗಿ ಶ್ರೀಮತಿ ಅನುಸೂಯ ಶೆಟ್ಟಿ , ಗೌರವ ಅಧ್ಯಕ್ಷೆ ಶ್ರೀಮತಿ ರೋಶನ್ ಬಲ್ಲಾಲ್ ರ ಸೂಚನೆಯಂತೆ ಉಪಾಧ್ಯಕ್ಷೆಯಾಗಿ ಶ್ರೀಮತಿ ಸವಿತಾ ನಾಯಕ್ ;ಕಾರ್ಯದರ್ಶಿಯಾಗಿ ಶ್ರೀಮತಿ ಸರೋಜಿನಿ ಶೆಟ್ಟಿ ; ಜೊತೆ ಕಾರ್ಯದರ್ಶಿಯಾಗಿ ಶ್ರೀಮತಿ ಕೀರ್ತಿ ಶೆಟ್ಟಿಯವರು ಆಯ್ಕೆಯಾದರು. ಶ್ರೀಮತಿ ಮಮತಾ ನಾಯಕ್ , ಶ್ರೀಮತಿ ಜಯಲಕ್ಷ್ಮಿ ಹೆಗ್ಡೆ , ಶ್ರೀಮತಿ ಆಶಾ ಶೆಟ್ಟಿ , ಶ್ರೀಮತಿ ಗುಲಾಬಿ ಶೆಟ್ಟಿಯವರು ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ವೀಕ್ಷಕರಾದ ಶ್ರೀ ಫ್ರ್ಯಾಂಕಿ ಡಿಸೋಜರವರು ನೂತನ ಸದಸ್ಯರಿಗೆ ಸಂಘದ ಧ್ಯೇಯಗಳನ್ನು ಕರ್ತವ್ಯಗಳನ್ನು , ಚಟುವಟಿಕೆಗಳನ್ನು ಬೋಧಿಸಿದರು.
ಕಾರ್ಯಕ್ರದ ನಿರೂಪಣೆ ಮತ್ತು ಸ್ವಾಗತವನ್ನು ಶ್ರೀಮತಿ ಸವಿತಾ ನಾಯಕ್ ಹಾಗೂ ಶ್ರೀಮತಿ ದೀಪಾ ಶೆಟ್ಟಿ ಧನ್ಯವಾದಗೈದರು. ಸಭೆಯಲ್ಲಿ ಮುಂದಿನ ಕಾರ್ಯ ಚಟುವಟಿಕೆಗಳು , ಸದಸ್ಯರ ಜವಾಬ್ದಾರಿ ,ಮುಂದಿನ ಕಾರ್ಯಯೋಜನೆ ಬಗ್ಗೆ ಅರಿವು ಮೂಡಿಸಿ ಸಾಮಾಜಿಕ ಬದ್ಧತೆಯನ್ನು ಉಳಿಸಿ ಬೆಳೆಸುವ ಬಗ್ಗೆ ತಿಳಿಸಿ ಮುಂದಿನ ದಿನಗಳಲ್ಲಿ ತಮ್ಮೆಲ್ಲರ ಸಹಕಾರವನ್ನು ಬಯಸುತ್ತೇವೆ ಎಂದು ತಿಳಿಸಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.