Thursday, April 18, 2024
spot_img
More

  Latest Posts

  ಡಿ.2 ರಂದು ತುಳುವಿನಲ್ಲಿ ಕಾಂತಾರ ಬಿಡುಗಡೆ

  ಬೆಂಗಳೂರು: ಕೊನೆಗೂ ತುಳು ಭಾಷೆಯಲ್ಲಿ ಕಾಂತಾರ ಸಿನೆಮಾ ಬಿಡುಗಡೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದ್ದು, ಡಿಸೆಂಬರ್ 2 ರಂದು ತುಳು ಬಾಷೆಯಲ್ಲಿ ಕಾಂತಾರ ಸಿನೆಮಾ ಬಿಡುಗಡೆಯಾಗಲಿದೆ. ಕಾಂತಾರ ಇದೀಗ ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲಿ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದ್ದು, ಇದೀಗ ಓಟಿಟಿಯಲ್ಲೂ ಕಾಂತಾರ ಸಿನೆಮಾ ಬಿಡುಗಡೆಯಾಗಿದ್ದು, ಇದೀಗ ತುಳುವಿನಲ್ಲಿ ಕಾಂತಾರದ ಟ್ರೈಲರ್ ಬಿಡುಗಡೆಯಾಗಿದೆ. ಕಾಂತಾರ ಸಿನಿಮಾ ದೈವಗಳ ಕಥೆ ಹೊಂದಿತ್ತು. ಕರಾವಳಿ ಭಾಗದ ಹಿನ್ನೆಲೆಯಿಂದ ರೂಪುಗೊಂಡ ಈ ಸಿನಿಮಾ, ಬಿಡುಗಡೆಯಾದ ಆರಂಭದಿಂದಲೂ ತುಳು ಭಾಷೆಗೆ ಡಬ್​ ಆಗಬೇಕು ಎಂಬ ಆಗ್ರಹ ಆರಂಭವಾಗಿತ್ತು. ಅಂತೆಯೇ ಸಿನಿಮಾ ತಂಡ ಕೂಡ ತುಳು ಭಾಷೆಗೆ ಡಬ್ಬಿಂಗ್ ಆಗುತ್ತಿರುವ ಮಾಹಿತಿ ಹಂಚಿಕೊಂಡಿತ್ತು. ಡಿಸೆಂಬರ್ 2 ರಂದು ದೇಶದಾದ್ಯಂತ ಕಾಂತಾರ ಸಿನಿಮಾ ತುಳು ಭಾಷೆಯಲ್ಲಿ ಬಿಡುಗಡೆಯಾಗುವುದಾಗಿ ಹೊಂಬಾಳೆ ಫಿಲ್ಮ್ಸ್ ಹೇಳಿಕೊಂಡಿದೆ. ಅಂತೆಯೇ ನವೆಂಬರ್ 25 ರಿಂದ ಹೊರದೇಶಗಳಲ್ಲಿ ಕಾಂತಾರ ತುಳು ಅವತರಣಿಕೆ ಬಿಡುಗಡೆಯಾಗುತ್ತಿದೆ.
  ತುಳು ರಂಗಭೂಮಿಯ ಹಿರಿಯ, ಜನಪ್ರಿಯ ಕಲಾವಿದ ಡಾ.ದೇವದಾಸ್ ಕಾಪಿಕಾಡ್, ಅಚ್ಯುತ್ ಕುಮಾರ್ ಅವರ ಪಾತ್ರಕ್ಕೆ ಧ್ವನಿ ನೀಡಿದ್ದಾರೆ. ತುಳು ಸಿನಿಮಾ ನಟ ಅರ್ಜುನ್ ಕಾಪಿಕಾಡ್ ರಿಷಬ್ ಶೆಟ್ಟಿ ಪಾತ್ರಕ್ಕೆ ಧ್ವನಿಯಾಗಿದ್ದಾರೆ.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss