Tuesday, February 27, 2024
spot_img
More

  Latest Posts

  ʻಕಾಂತಾರʼ ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ಮಾಸ್ಟರ್​ಪೀಸ್ : ಸೂಪರ್​ ಸ್ಟಾರ್ ರಜನಿಕಾಂತ್ ಶ್ಲಾಘನೆ​

  ಕನ್ನಡದ ‘ಕಾಂತಾರ’ (Kantara) ಸಿನಿಮಾ ದೇಶಾದ್ಯಂತ ಸದ್ದು ಮಾಡುತ್ತಿದೆ. ಈ ಸಿನಿಮಾ ನೋಡಿ ಪರಭಾಷೆಯ ಸ್ಟಾರ್​ ಕಲಾವಿದರು ಮತ್ತು ತಂತ್ರಜ್ಞರು ಭೇಷ್​ ಎನ್ನುತ್ತಿದ್ದಾರೆ. ರಿಷಬ್​ ಶೆಟ್ಟಿ (Rishab Shetty) ಅವರ ನಟನೆ, ನಿರ್ದೇಶನಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಕೇಳಿಬರುತ್ತಿದೆ.

  ಈಗಾಗಲೇ ಪ್ರಭಾಸ್​, ಕಂಗನಾ ರಣಾವತ್​, ಅನುಷ್ಕಾ ಶೆಟ್ಟಿ ಸೇರಿದಂತೆ ಅನೇಕ ಘಟಾನುಘಟಿಗಳು ಈ ಚಿತ್ರದ ಕುರಿತು ತಮ್ಮ ಅನಿಸಿಕೆ ತಿಳಿಸಿದ್ದಾರೆ. ಈಗಿನದ್ದು ಸೂಪರ್​ ಸ್ಟಾರ್​ ರಜನಿಕಾಂತ್​ (Rajinikanth) ಸರದಿ. ಹೌದು, ರಜನಿಕಾಂತ್​ ಅವರು ‘ಕಾಂತಾರ’ ಚಿತ್ರ ವೀಕ್ಷಿಸಿದ್ದಾರೆ. ಬಳಿಕ ಟ್ವಿಟರ್​ ಮೂಲಕ ತಮ್ಮ ವಿಮರ್ಶೆ ತಿಳಿಸಿದ್ದಾರೆ. ಅವರಿಗೆ ಈ ಚಿತ್ರ ತುಂಬ ಇಷ್ಟ ಆಗಿದೆ. ಇಂಥ ಸಿನಿಮಾವನ್ನು ನಿರ್ಮಾಣ ಮಾಡಿದ ‘ಹೊಂಬಾಳೆ ಫಿಲ್ಮ್ಸ್​’ ಮತ್ತು ನಿರ್ದೇಶನ ಮಾಡಿದ ರಿಷಬ್​ ಶೆಟ್ಟಿ ಅವರನ್ನು ತಲೈವಾ ಮನಸಾರೆ ಹೊಗಳಿದ್ದಾರೆ.

  ರಜನಿಕಾಂತ್​ ಅವರು ‘ಕಾಂತಾರ’ ಸಿನಿಮಾ ಬಗ್ಗೆ ಮಾಡಿದ ಟ್ವೀಟ್​ ವೈರಲ್​ ಆಗಿದೆ. ಇದನ್ನು ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆ ರೀಟ್ವೀಟ್​ ಮಾಡಿಕೊಂಡಿದ್ದು, ತಲೈವಾಗೆ ಧನ್ಯವಾದ ತಿಳಿಸಿದೆ. ಇಂಥ ಲೆಜೆಂಡರಿ ನಟನಿಂದ ಕನ್ನಡದ ಸಿನಿಮಾಗೆ ಪ್ರಶಂಸೆ ಸಿಕ್ಕಿರುವುದು ಎಲ್ಲರಿಗೂ ಹೆಮ್ಮೆ ತಂದಿದೆ. ‘ಕಾಂತಾರ ಸಿನಿಮಾ ನೋಡುವಾಗ ರೋಮಾಂಚನ ಆಯಿತು. ರಿಷಬ್​ ಶೆಟ್ಟಿ ಅವರಿಗೆ ಹ್ಯಾಟ್ಸಾಫ್​. ಭಾರತೀಯ ಚಿತ್ರರಂಗದಲ್ಲಿ ಮಾಸ್ಟರ್​ ಪೀಸ್​ ಎನಿಸಿಕೊಂಡಿರುವ ಈ ಚಿತ್ರದ ಇಡೀ ತಂಡಕ್ಕೆ ಅಭಿನಂದನೆಗಳು’ ಎಂದು ರಜನಿಕಾಂತ್​ ಟ್ವೀಟ್​ ಮಾಡಿದ್ದಾರೆ.

  ತುಳುನಾಡಿನ ಭೂತ ಕೋಲ ಕುರಿತ ಕಥೆಯನ್ನು ‘ಕಾಂತಾರ’ ಚಿತ್ರ ಒಳಗೊಂಡಿದೆ. ರಿಷಬ್​ ಶೆಟ್ಟಿ ಅವರಿಗೆ ಜೋಡಿಯಾಗಿ ಸಪ್ತಮಿ ಗೌಡ ನಟಿಸಿದ್ದಾರೆ. ಅಚ್ಯುತ್​ ಕುಮಾರ್​, ಪ್ರಮೋದ್​ ಶೆಟ್ಟಿ, ಕಿಶೋರ್​ ಮುಂತಾದವರ ಪಾತ್ರಗಳು ಕೂಡ ಈ ಚಿತ್ರದಲ್ಲಿ ಗಮನ ಸೆಳೆದಿವೆ. ಸೆ.30ರಂದು ಈ ಚಿತ್ರ ಕನ್ನಡದಲ್ಲಿ ರಿಲೀಸ್​ ಆಯಿತು. ಬಳಿಕ ಬೇರೆ ಬೇರೆ ಭಾಷೆಗಳಿಗೂ ಡಬ್​ ಆಗಿ ತೆರೆಕಂಡಿತು. ಎಲ್ಲ ಭಾಷೆಗಳಲ್ಲೂ ಪ್ರೇಕ್ಷಕರು ‘ಕಾಂತಾರ’ ಚಿತ್ರಕ್ಕೆ ಮನಸೋತಿದ್ದಾರೆ.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss